ಗೋಕಾಕ : ನೂತನ ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ನಿವಾಸಕ್ಕೆ ಹರಿಹರ ತಾಲ್ಲೂಕಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಭಾನುವಾರ ಭೇಟಿ ನೀಡಿ, ಸತ್ಕರಿಸಿ ಆಶೀರ್ವಾದ ಮಾಡಿದರು.
ಸಣ್ಣ ವಯಸ್ಸಿನಲ್ಲಿಯೇ ವಿಧಾನಪರಿಷತ್ ಪ್ರವೇಶ ಮಾಡಿರುವುದು ಸಂತಸದ ವಿಷಯ. ಬಡವರ ಪರ ಕೆಲಸ ಮಾಡುವ ಅವಕಾಶ ದೊರೆತು ಬಂದಿದೆ. ಜನರು ತಮ್ಮ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಬಡ ಜನರ ಪರ ಕೆಲಸ ಮಾಡುವಂತೆ ಸಲಹೆ ಸ್ವಾಮೀಜಿ ನೀಡಿದರು.
ಎಲ್ಲ ಸಮಾಜದ ಜನರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡು ವಿಧಾನ ಪರಿಷತ್ ಗೆ ಕಳುಹಿಸಿದ್ದಾರೆ, ಅವರ ಆಶಯದಂತೆ ತಮ್ಮ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಶುಭ ಹಾರೈಸಿದರು.