Breaking News

ಭಾವನೆ ಶುದ್ದವಾಗಿದ್ದರೆ ಭಾಗ್ಯಕ್ಕೆ ಕೊರತೆ ಇರುವುದಿಲ್ಲ: ನ್ಯಾಯಾಧೀಶರು ಎಂ.ಬಿ.ಕುಡವಕ್ಕಲಿಗೇರ


ಗೋಕಾಕ : ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ, ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿ ಪಾಲ್ಗೊಂಡು ಆರೋಗ್ಯವಂತರಾಗಿರೆಂದು ಬೆಳಗಾವಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಬಿ.ಕುಡವಕ್ಕಲಿಗೇರ ಹೇಳಿದರು.

ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದ ಸಾಂಸ್ಕೃತಿಕ, ಕ್ರೀಡಾ ಹಾಗೂ ಕಾನೂನು ಸೇವಾ ಘಟಕದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಯೋಗ, ಜ್ಞಾನ ಪ್ರಾಣಾಯಾಮಗಳನ್ನು ತಮ್ಮ ದಿನಚರಿಗಳಲಿ ಅಳವಡಿಸಿಕೊಂಡು ದೇಹ ಶಕ್ತಿ ವೃದ್ದಿಸಿಕೊಳ್ಳುವಂತೆ ಕರೆ ನೀಡಿದರು. ಭಾವನೆ ಶುದ್ದವಾಗಿದ್ದರೆ ಭಾಗ್ಯಕ್ಕೆ ಕೊರತೆ ಇರುವುದಿಲ್ಲ ವಿದ್ಯಾರ್ಥಿಗಳು ಶ್ರದ್ಧೆ , ಲವಲವಿಕೆಯಿಂದ ನಿರಂತರ ಅಧ್ಯಯನ ಶೀಲರಾಗಿ ತಮ್ಮ ಜ್ಞಾನಮಟ್ಟವನ್ನು ಹೆಚ್ಚಿಸಿಕೊಂಡು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ ಎಂದರು.

ಇಂದು ಕಾನೂನು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಈ ಶಿಕ್ಷಣ ಪಡೆದವರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೌಲಭ್ಯಗಳ ಹಾಗೂ ಅವಕಾಶಗಳ ಸದುಪಯೋಗದಿಂದ ಉತ್ತಮ ವಕೀಲರಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಿ, ಶಿಕ್ಷಣವೇ ಶಕ್ತಿ ಎಂದು ನಂಬಿ ಜಾರಕಿಹೊಳಿ ಕುಟುಂಬದವರು ಪ್ರಾರಂಭಿಸಿದ ಈ ಮಹಾವಿದ್ಯಾಲಯದಲ್ಲಿ ಕಲಿತವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ವಿದ್ಯಾರ್ಥಿಗಳ ಉನ್ನತ ಕನಸುಗಳನ್ನು ನನಸಾಗಿಸಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡಲು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸುವ ನನ್ನ ಕನಸು ಈ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸಲ್ಲಿಸಿದ ಸೇವೆ ಅನುಭವದಿಂದ ನನಸಾಗಿದೆ ನೀವು ಈ ಸಂಸ್ಥೆಯ ಸಹಕಾರದಿಂದ ಉನ್ನತ ವ್ಯಕ್ತಿಗಳಾಗಿ ಎಂದು ಹಾರೈಸಿದರು. 

ನಂತರ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಹಿರಿಯ ನ್ಯಾಯವಾದಿ ಆರ್. ಎಚ್. ಇಟ್ನಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಥಮ ಎಲ್‌ಎಲ್‌ಬಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ವಹಿಸಿದ್ದರು. ಆಡಳಿತಾಧಿಕಾರಿ ಬಿ.ಕೆ.ಕುಲಕರ್ಣಿ, ಪ್ರಾಚಾರ್ಯ ಜಿ.ಆರ್.ನಿಡೋಣಿ, ವಕೀಲರಾದ ಆರ್. ಎಚ್. ಇಟ್ನಾಳ್, ಎಸ್.ಜಿ.ಘಟಾವಳಿಮಠ, ಬಿ ಡಿ ಕುಲಕರ್ಣಿ, ವಿಜಯಲಕ್ಷ್ಮಿ ಚಿಕ್ಕರಡ್ಡಿ, ಪ್ರತಿಭಾ ನಿಂಬಾಳ್ಕರ್, ಬಿ. ಎಲ್. ಕುಮಾರನಾಯಕ, ಎಸ್. ಕೆ. ಬಾಲನಾಯಿಕ, ಆರ್. ಎಸ್. ತಿಗಡಿ, ಎಸ್. ಸಿ. ಪಾಟೀಲ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಿದ್ಧಲಿಂಗ ಗಲಗಲಿ ಕಾರ್ಯಕ್ರಮ ನಿರೂಪಣೆ ಮಾಡಿದರು, ರಾಮನಾಯ್ಕ ಪೂಜೇರಿ ವಂದನಾರ್ಪಣೆ ಮಾಡಿದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ