ಗೋಕಾಕ : ವಿಶ್ವದಲ್ಲಿಯೆ ಗುರುಗಳಿಗೆ ಭಾರತ ದೇಶದಲ್ಲಿ ಶ್ರೇಷ್ಠ ಸ್ಥಾನನೀಡ ಗೌರವಿಸಲಾಗುತ್ತಿದೆ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ ಹೇಳಿದರು.
ಮಂಗಳವಾರದಂದು ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದಲ್ಲಿ ಅಗ್ರಗಣ್ಯ ಸ್ಥಾನ ಹೊಂದಿದ ಶಿಕ್ಷಕ ವೃತ್ತಿ ಎಲ್ಲಾ ಇಲಾಖೆಗಳನ್ನು ಮುನ್ನಡೆಸುತ್ತದೆ. ದೇಶದ ಸಮೃದ್ಧ ಭವಿಷ್ಯ ನಿರ್ಮಾಣವಾಗುವದು ಶಾಲೆಗಳ ವರ್ಗದ ಕೊಠಡಿಯಲ್ಲಿ. ಇಂತಹ ಪವಿತ್ರ ವೃತ್ತಿಯನ್ನು ಶಿಕ್ಷಕರು ಗೌರವಿಸಿ, ನಿರಂತರ ಅಧ್ಯಯನ ಶೀಲರಾಗಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಭೋಧಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಬೇಕು.ದೇಶದ ಪ್ರಥಮ ಉಪರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಆಶಯದಂತೆ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಅವರು ವಿದ್ಯಾರ್ಥಿಗಳ ಮೇಲೆ ನೀಡಿದಂತಹ ಗಾಡವಾದ ಪ್ರೀತಿಯನ್ನು ಶಿಕ್ಷಕರು ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಆಡಳಿತಾಧಿಕಾರಿ ಬಿ.ಕೆ.ಕುಲಕರ್ಣಿ, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳಾದ ಐ.ಎಸ್.ಪವಾರ, ಎ.ಬಿ.ಪಾಟೀಲ, ಜಿ.ಆರ್.ನಿಡೋಣಿ, ಅರುಣ ಪೂಜೆರ, ಎಚ್.ಎಸ್.ಅಡಿಬಟ್ಟಿ, ಆರ್.ಎಂ.ದೇಶಪಾಂಡೆ, ಎಚ್.ವ್ಹಿ ಪಾಗನಿಸ್, ಪಿ.ವ್ಹಿ.ಚಚಡಿ ಇದ್ದರು.