ಗೋಕಾಕ : ಕೋವಿಡ್ ವ್ಯಾಕ್ಸಿನ್ ಸುರಕ್ಷತೆಯಿಂದ ಕೂಡಿದ್ದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ನಿರ್ಭಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಭಾಂವಿ ಹೇಳಿದರು.
ಸೋಮವಾರ ವಾರ್ಡ ನಂ19 ಹಾಗೂ 20 ರ ಮಾರ್ಕಂಡೇಯ/ಮಹಾಲಿಂಗೇಶ್ವರ ನಗರದಲ್ಲಿ ಲಸಿಕಾ ಕೇಂದ್ರದಲ್ಲಿ ಲಸಿಕಾ ಮೇಳ ಹಮ್ಮಿಕೊಂಡಿದ್ದರು.
ನಂತರ ಮಾತನಾಡಿದ ಅವರು ನಾವು ಹಾಗೂ ನಮ್ಮ ಕುಟುಂಬದವರು ಎಲ್ಲರೂ ಕೋವಿಡ್ ಲಸಿಕೆ ಪಡೆದಿದ್ದು, ಉತ್ತಮ ಅನುಭವ ಹೊಂದಿದ್ದೇನೆ. ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮವಿಲ್ಲ. ಎಲ್ಲರೂ ಲಸಿಕೆ ಪಡೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. 18 ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್ ಲಸಿಕೆ ಪಡೆದುಕೊಂಡು ಕೋವಿಡ್ ಸೋಲಿಸಲು ಪಣ ತೊಡೋಣ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಗರದ ಯುವಕರು, ವೈದ್ಯಕಿಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಹಾಗೂ ಅನೇಕರು ಉಪಸ್ಥಿತರಿದ್ದರು.