ಮೈಸೂರು : ಇಲ್ಲಿಂದಲೇ ಆರಂಭವಾದಂತ ಪ್ರಕರಣ, ಇದೀಗ
ದೊಡ್ಮನೆವರೆಗೆ ಬಂದಿದೆ. ನನ್ನ ಬಗ್ಗೆ ಅನ್ ಎಜುಕೇಟೆಡ್ ಅಂತ ಹೇಳ್ತಾರೆ. ಸಂದೇಶ್ ಹಾಗೂ ಇಂದ್ರಜಿತ್ ಲಂಕೇಶ್ ಮಾಡಿರೋ ಆಡಿಯೋ ನನ್ನದಲ್ಲ ಅಂತ ಸಂದೇಶ್ ಹೇಳಿದ್ದಾರೆ. ಆದ್ರೇ ನಾನು ಬಹಿರಂಗವಾಗೇ ಸವಾಲ್ ಹಾಕುವೆ. ನನ್ನದೂ ಒಂದು ಆಡಿಯೋ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಬಳಿ ಇದೆ. ನೀವು ಗಂಡಸೇ ಆಗಿದ್ದರೇ, ನಿಮ್ಮ ಅಪ್ಪನಿಗೇ ಹುಟ್ಟಿದ್ದರೇ ನನ್ನದು ಒಂದು ಆಡಿಯೋ ಇದೆ. ಅದನ್ನು ಇಂದು ಸಂಜೆ ಬಿಡುಗಡೆ ಮಾಡಿ ಎಂಬುದಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ನಟ ದರ್ಶನ್ ಸವಾಲ್ ಹಾಕಿದ್ದಾರೆ.
ಈ ಕುರಿತಂತೆ ತಮ್ಮ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಮಾತನಾಡಿದಂತ ಅವರು, ನಾನು ಬೆಳೆದಿದ್ದೇ, ನನ್ನ ವೃತ್ತಿ ಜೀವನವನ್ನು ಆರಂಭಿಸಿದ್ದೇ ದೊಡ್ಮನೆಯವರ ಫಿಲ್ಮ್ ಇಂಡಸ್ಟ್ರೀಯಿಂದ ಆಗಿದೆ.
175 ರೂಪಾಯಿಯಿಂದ ವೃತ್ತಿ ಜೀವನವನ್ನು ಆರಂಭಿಸಿದ್ದು. ನಮ್ಮ ತಂದೆ ಕೂಡ ದೊಡ್ಮನೆ ಕುಟುಂಬದಿಂದಲೇ ಬೆಳೆದಿರೋದು. ಇಂತಹ ಫ್ಯಾಮಿಲಿಯ ಪ್ರಾಪರ್ಟಿ ಬಗ್ಗೆ ನಾವು ಕಣ್ಣು ಹಾಕೋದಾ ಎಂದರು.
ನಾನು ಮಾತನಾಡಿರುವಂತ ಆಡಿಯೋವೊಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಬಳಿ ಇದೆ. ಅದನ್ನು ಗಂಡಸೇ ಆಗಿದ್ದರೇ ಇಂದ್ರಜಿತ್ ಲಂಕೇಶ್ ಬಿಡುಗಡೆ ಮಾಡಲಿ. ಆನಂತ್ರ ಏನೇ ಬರಲೀ ನಾನು ಅದನ್ನು ಸವಾಲ್ ಆಗಿ ಸ್ವೀಕರಿಸುತ್ತೇನೆ ಎಂಬುದಾಗಿ ಇಂದ್ರಜಿತ್ ಲಂಕೇಶ್ ವಿರುದ್ಧ ಏಕವಚನದಲ್ಲೇ ನಟ ದರ್ಶನ್ ಸವಾಲ್ ಹಾಕಿದ್ದಾರೆ.
ಇನ್ನೂ 2016ರಿಂದಲೇ ನಿರ್ಮಾಪಕ ಉಮಾಪತಿ ಪರಿಚಯ. ಇಂದು ಅಷ್ಟೇ ಅವರಿಗೆ ಕಾಲ್ ಮಾಡಿಲ್ಲ. ನನಗೆ ಇದೇ ನಿರ್ಮಾಪಕ ಉಮಾಪತಿ ಹೇಳಿರೋ ಪ್ರಾಪರ್ಟಿಯಿಂದಲೇ ನನಗೆ ಬಾಡಿಗೆ ಕೊಡ್ತಾ ಇದ್ದರು. ಆದ್ರೇ ಇದೀಗ ನಟ ದರ್ಶನ್ ದೊಡ್ಮನೆ ಪ್ರಾಪರ್ಟಿ ಮೇಲೆ ಕಣ್ಣು ಹಾಕಿದ್ದಾರೆ ಅಂತಿದ್ದಾರೆ. ನಾನು ಬೀಡ್ತೀನಾ ಅಂತ ಹೇಳಿದ್ದಾರೆ. ಆದ್ರೇ ಆ ಪ್ರಾಪರ್ಟಿಯಿಂದಲೇ ನನಗೆ ಬಾಡಿಗೆ ಕೊಡ್ತಾ ಇದ್ದರು ಅವರನ್ನೇ ಕೇಳಿ. ನಾನು, ನನ್ನ ತಂದೆ ದೊಡ್ಮನೆ ಕುಟುಂಬದಿಂದಲೇ ಬೆಳೆದು ಬಂದವರು. ನಮಗೆ ಜೀವನ ಕೊಟ್ಟಿದ್ದೇ ದೊಡ್ಮನೆ ಕುಟುಂಬವಾಗಿದೆ ಎಂದರು.