ಯಾದಗಿರಿ: ಗುತ್ತಿಗೆ ಆಧಾರದ ನರ್ಸ್ ನೇಮಕಾತಿಗೆ ಬಂದಿದ್ದ ಅಭ್ಯರ್ಥಿಗಳಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಡಿಎಚ್ಓ ಎಂ ಎಸ್ ಪಾಟೀಲ ಅವರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.ಗುತ್ತಿಗೆ ಆಧಾರದ ನರ್ಸ್ ನೇಮಕಾತಿಗೆ ಬಂದಿದ್ದ ಅಭ್ಯರ್ಥಿಗಳಿಂದ 30 ಸಾವಿರ ಲಂಚಕ್ಕೆ ಎಂ ಎಸ್ ಪಾಟೀಲ ಬೇಡಿಕೆ ಸಲ್ಲಿಸಿದ್ದರು. ನಂತರ 25 ಸಾವಿರಕ್ಕೆ ಒಪ್ಪಿ ಹಣ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳ ಸಿಕ್ಕಿ ಬಿದ್ದಿದ್ದಾರೆ.
ಡಿಎಚ್ಒ ಡಾ,ಎಂ ಎಸ್ ಪಾಟೀಲ ಮತ್ತು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಿದ್ದಣ್ಣಗೌಡ ಪಾಟೀಲ ಅವರೇ ಬಲೆಗೆ ಬಿದ್ದ ಅಧಿಕಾರಿಗಳು. ಮಧ್ಯಾಹ್ನದ ವೇಳೆ ಕಛೇರಿಯಲ್ಲಿಯೇ ದಾಳಿ ನಡೆಸುವ ಮೂಲಕ ಎಸಿಬಿ ಶಾಕ್ ನೀಡಿದೆ.
ಇವರು ಅಭ್ಯರ್ಥಿಯೊಬ್ಬರಿಗೆ 30 ಸಾವಿರ ರೂ.ಲಂಚದ ಬೇಡಿಕೆ ಇಟ್ಟಿದ್ದಾರೆ. ಮೊದಲನೇಯ ಕಂತಿನಲ್ಲಿ 25 ಸಾವಿರ ರೂ.ಪಡೆದುಕೊಳ್ಳುವಾಗಲೇ ರೆಡ್ ಹ್ಯಾಂಡ್ ಆಗಿ ಕಛೇರಿಯಲ್ಲಿಯೇ ಸಿಕ್ಕಿಬಿದ್ದಿದ್ದಾರೆ.ಈಗ ಕರೋನಾ ಹೆಚ್ಚಾಗುತ್ತಿರುವ ಹಿನ್ನೆಲೆ ಸ್ಟಾಪ್ ನರ್ಸಗಳ ಅವಶ್ಯಕತೆ ಇದೆ. ಹೀಗಾಗಿ ಆರೋಗ್ಯ ಇಲಾಖೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಸರಿ ಸುಮಾರು 30ಕ್ಕೂ ಹೆಚ್ಚಿನ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದರು. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಲಂಚ ಸ್ವೀಕರಿಸುತ್ತಿದ್ದರು.
ಕೊರೋನಾ ಹಾವಳಿಯಲ್ಲಿ ಇಂತಹ ಕೆಲಸಕ್ಕೆ ಅಧಿಕಾರಿಗಳು ಕೈ ಹಾಕಿರುವುದು ಇದು ನಿಜಕ್ಕೂ ನಾಚಿಗೇಡಿ ಸಂಗತಿ .ಇಬ್ಬರೂ ಅಧಿಕಾರಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ರೀತಿ ಮಾಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎಸ್.ಪಾಟೀಲ ಮತ್ತು ಜಿಲ್ಲಾ ಕುಟುಂಬ ಯೋಜನಾಧಿಕಾರಿ ಡಾ ಸಿದ್ದನಗೌಡ ಪಾಟೀಲ ಅವರು ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿರುವ ಪರಿಣಾಮ ಆರೋಗ್ಯ ಇಲಾಖೆ ಅವರನ್ನು ಅಮಾನತು ಮಾಡಬಹುದು.