ಗೋಕಾಕ: ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕದ ಅದ್ಯಕ್ಷರು ಹಾಗೂ ಪದಾಧಿಕಾರಿಗಳು ಮೆ,ಕಾರ್ಯನಿರ್ವಾಹಕ ಅಭಿಯಂತರರಿಗೆ ದುಪದಾಳ ನಿರೀಕ್ಷಣಾ ಮಂದಿರ ಅಭಿವೃದ್ಧಿ ಪಡಿಸಲು ವಿನಂತಿಸಿಕೊಂಡರು.
ಇಲಾಖೆಗೆ ಸಂಬಂಧಿಸಿದ ದೂಪದಾಳ ನಿರೀಕ್ಷಣಾ ಮಂದಿರ ಸುಮಾರು ನೂರು ಐವತ್ತು ವರ್ಷಗಳ ಇತಿಹಾಸ ಹೊಂದಿದೆ ಬ್ರಿಟಿಷ್ ಕಾಲದಿಂದಲೂ ಅತ್ಯಂತ ಮಹತ್ವ ಪಡೆದುಕೊಂಡು ಹೆಸರುವಾಸಿಯಾಗಿದೆ ನೀರಾವರಿ ನಿಗಮ ಆಗುವುದಕ್ಕಿಂತ ಮೊದಲು ಸಾಕಷ್ಟು ಆಕರ್ಷಕ ಪ್ರವಾಸಿ ತಾಣ ಆಗಿತ್ತು ಆದರೆ ಇತ್ತಿಚೆಗೆ ಪ್ರವಾಸಿ ಮಂದಿರವು ನಿರ್ಲಕ್ಷ್ಯಕ್ಕೊಳಪ್ಪಟ್ಟಿದೆ ಇಲ್ಲಿ ದೂಪದಾಳ ಪಕ್ಷಿಧಾಮ ಬ್ರಿಟಿಷ್ ಕಾಲದ ದೂಪದಾಳ ಜಲಾಶಯ ಆಕರ್ಷಕವಾಗಿದ್ದು ಸುತ್ತ ಮುತ್ತ ಉದ್ಯಾನ ಉದ್ಯಾನದಲ್ಲಿ ಕಾರಂಜಿ ಹೀಗೆ ಸಾವಿರಾರು ಪ್ರವಾಸಿಗರನ್ನು ಸೆಳೆದಿತ್ತು ಇತ್ತೀಚೆಗೆ ಎರಡು ಮೂರು ವರ್ಷಗಳಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ ಇದರಿಂದ ಗ್ರಾಮದ ಹತ್ತಾರು ಜನರಿಗೆ ಉದ್ಯೋಗ ದೊರೆಯುವಂತಾಗಿದೆ ಆದರೆ ತಮ್ಮ ಇಲಾಖೆಯ ನಿರ್ಲಕ್ಷ್ಯದಿಂದ ಇದರ ಗತವೈಭವ ಕಳೆದುಕೊಳ್ಳತೊಡಗಿದೆ ಈ ಕೂಡಲೇ ತಾವು ಈ ಕಡೆಗೆ ಗಮನ ಹರಿಸಿ ಗಾರ್ಡನ್ ಮಾಡಲು ಅಲ್ಲಿರುವ ಕಳೆ ಕಸ ತೆಗೆಯಲು ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು ಪ್ರವಾಸಿ ಮಂದಿರ ಚುಮುರಿ ಬ್ಲಾಕ್ ಸೇರಿದಂತೆ ಅಲ್ಲಿರುವ ಕಟ್ಟಡಗಳ ದುರಸ್ತಿಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡಬೇಕು ಅಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಮತ್ತೆ ಅದನ್ನು ಸುಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಸಂಚಾಲಕ ರೆಹಮಾನ್ ಮೊಕಾಶಿ ತಾಲ್ಲೂಕು ಉಪಾಧ್ಯಕ್ಷ ರಾಜು ಮುತ್ತೆಣ್ಣವರ ಸಂಜು ಗಾಡಿವಡ್ಡರ ಸುನಿಲ್ ಬೆಳಮೆರಡಿ ಘಟಕ ಅದ್ಯಕ್ಷ ರವಿ ನಾವಿ ಸಿದ್ದಪ್ಪ ಹಣಬರಟ್ಟಿ ಮಾನಿಂಗ ಸನದಿ ತಬರೇಜ ಬೋಜಗಾರ ವಿಜಯ ಶೇಬಣ್ಣವರ ವಿಜಯ ಮೇಗೆರಿ ರಮಜಾನ ಕಡಲಗಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು