ಬೆಳಗಾವಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರ ಚುನಾವಣೆಗೆ ಕನ್ನಡಪರ ಹೋರಾಟಗಾರ ಬಸವರಾಜ ಖಾನಪ್ಪನ್ನವರ ಅವರು ಸೋಮವಾರದಂದು ಜಿಲ್ಲಾ ಚುನಾವಾಣಾಧಿಕಾರಿ ಆದ ಬೆಳಗಾವಿ ತಹಶೀಲ್ದಾರ ಶೈಲೇಶ ಪರಮಾನಂದ ಅವರಿಗೆ ನಾಮಪತ್ರ ಸಲ್ಲಿಸಿದರು.
ಮೇ.9 ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ಗೋಕಾಕಕಿನ ಕನ್ನಡಪರ ಹೋರಾಟಗಾರ ಬಸವರಾಜ ಖಾನಪ್ಪನ್ನವರ ಅವರು ಸ್ಪರ್ದಿಸಿದ್ದು ಇಂದು ನಗರದ ತಹಸೀಲ್ದಾರ್ ಕಚೇರಿಯ ಕಸಾಪ ಚುನಾವಣಾಧಿಕಾರಿ ಅವರಿಗೆ ನಾಮಪತ್ರ ಸಲ್ಲಿಸಿದ್ದರು.
ಸೂಚಕರಾಗಿ ಪರಿಷತ್ ಸದಸ್ಯರಾದ ಪತ್ರಕರ್ತ ಸಾದಿಕ ಹಲ್ಯಾಳ ಅವರು ಸಹಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುರುಘರಾಜೇಂದ್ರ ಮಹಾಸ್ವಾಮಿಗಳು ಬರುವ ಮೇ 9 ರಂದು ಜರಗುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಕಳೆದ 15 ವರ್ಷಗಳಿಂದ ಕನ್ನಡ ನಾಡು, ನುಡಿ,ನೆಲ,ಜಲ ಭಾಷೆಯಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಾಂತರ ಹಲವಾರು ಕ್ರಿಯಾತ್ಮಕ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಕನ್ನಡಪರ ಹೋರಾಟಗಾರ ಬಸವರಾಜ ಖಾನಪ್ಪನ್ನವರ ಅವರು ಈ ಬಾರಿಯ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಿದ್ದು ಸಂತೋಷ ತಂದಿದೆ. ಜಿಲ್ಲೆಯ ಎಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಈ ಬಾರಿಯ ಚುನಾವಣೆಯಲ್ಲಿ ಕನ್ನಡದ ಬಗ್ಗೆ ಅತ್ಯಂತ ಕಾಳಜಿ ಇರುವ ಒಬ್ಬ ಹೋರಾಟಗಾರನನ್ನು ಬೆಂಬಲಿಸುವ ಮುಖೇನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಮದುರ್ಗ ಬಟಕುರ್ಕಿಯ ಚೌಕಿ ಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಕಳ್ಳಿಗುದ್ದಿ- ಕಪರಟ್ಟಿಯ ಬಸವರಾಜ ಸ್ವಾಮಿಗಳು ,ಜಾನಪದ ವಿದ್ವಾಂಸ ಹಿರಿಯ ಸಾಹಿತಿ ಡಾ. ಸಿ.ಕೆ.ನಾವಲಗಿ, ಸಾಹಿತಿ ಜಯಾನಂದ ಮಾದರ, ಕರ್ನಾಟಕ ರಾಜ್ಯ ನೌಕರ ಸಂಘದ ಅಧ್ಯಕ್ಷ ಬಸವರಾಜ ಮುರಗೋಡ, ಕನ್ನಡಪರ ಹೋರಾಟಗಾರರಾದ ಮಹಾದೇವ ತಳವಾರ, ಸುರೇಶ ಗವ್ವನ್ನವರ, ದೀಪಕ ಗುಡಗನಟ್ಟಿ, ಹೋಳೆಪ್ಪ ಸುಲದಾಳ, ಬಾಳು ಜಡಗಿ, ಕೃಷ್ಣಾ ಖಾನಪ್ಪನ್ನವರ, ಲಕ್ಷ್ಮಣ ಯಮಕನಮರಡಿ, ಮಹಾಂತೇಶ ಹಿರೇಮಠ, ಮುಗುಟ ಪೈಲವಾನ , ನಿಜಾಮ ನಧಾಪ, ಉದಯ ಇಡಗಲ್ಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.