ಗೋಕಾಕ : ಗೋವಾದಲ್ಲಿ ಕರ್ನಾಟಕ ಮೂಲದ ಟ್ರಕ್ ಚಾಲಕ ಅನೀಲ್ ರಾಠೋಡ ಮೇಲೆ ಹಲ್ಲೆ ಮಾಡಿದರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶುಕ್ರವಾರದಂದು ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಜುಲೈ 22 ರಂದು ಉತ್ತರ ಗೋವಾ ರಾಜ್ಯದ ಪೆರನೆಮ್ ನಗರದಲ್ಲಿ ಕರ್ನಾಟಕ ಮೂಲದ ಟ್ರಕ್ ಚಾಲಕ ಹಾಗೂ ಮಾಲಕರಾಗಿರುವ ಅನೀಲ್ ರಾಠೋಡ್ ಎಂಬ ವಿಜಯಪುರ ಕಲಕೇರಿ ಗ್ರಾಮದವರಾಗಿದ್ದು, ಗೋವಾದಲ್ಲಿ ಕಳೆದ ಸುಮಾರು 6 ತಿಂಗಳಿನಿಂದ ಟ್ರಕ ಚಾಲನೆ ಮಾಡುತ್ತಿದ್ದಾರೆ. ಗೋವಾಕ್ಕೆ ಬಂದು ಇಲ್ಲಿ ಟ್ರಕ್ ಚಾಲಕರಾಗಿ ಸೇರಿಕೊಂಡು ನಂತರ ಸ್ವಂತ ಟ್ರಕ್ ಖರೀದಿಸಿ ಅಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಗೋವಾದ ಜನರ ವ್ಯವಹಾರವನ್ನು ಹಾಳುಮಾಡುತ್ತಿದ್ದಾರೆ ಎಂಬ ಕಾರಣವನ್ನಿಟ್ಟುಕೊಂಡು ಸ್ಥಳೀಯ ಟ್ರಕ್ ಅಸೋಸಿಯೇಶನ್ ಟ್ರಕ್ ಚಾಲಕ ಮಾಲಕರು ಕನ್ನಡಿಗನ ಮೇಲೆ ಹಲ್ಲೆ ನಡೆಸಿದ್ದಾರೆ . ಹಲ್ಲೆ ನಡೆಸುವಾಗ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಬೆದರಿಕೆಯನರ್ನೂ ಹಾಕಿದ್ದಾರೆ. ಟ್ರಕ್ ಚಾಲಕ ಹಾಗೂ ಮಾಲಕರಾಗಿರುವ ಅನೀಲ್ ರಾಠೋಡ್ ರವರು ಕನ್ನಡಿಗರ ಮತ್ತು ಕನ್ನಡ ಸಂಘಟನೆಗಳ ಬೆಂಬಲದೊಂದಿಗೆ ಪೋಲಿಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಆದರೂ ಸಹ ಸ್ಥಳೀಯ ಪೊಲೀಸರು ಇಲ್ಲಿಯವರೆಗೆ ದೂರು ದಾಖಲಿಸಿಕೊಂಡು ಹಲ್ಲೆ ನಡೆಸಿದರವ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಹಾಗಾಗಿ ಗೋವಾ ರಾಜ್ಯದಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ಹಲ್ಲೆಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕ ಸಮಸ್ತ ಗೋವಾ ಕನ್ನಡಿಗರ ಪರವಾಗಿ ಮನವಿಯಲ್ಲಿ ವಿನಂತಿಸಿದ್ದಾರೆ.
ಪ್ರತಿಭಟನೆಯಲ್ಲಿ ಕರವೇಯ ಸಾದಿಕ ಹಲ್ಯಾಳ, ಮಲ್ಲಪ್ಪ ಸಂಪಗಾರ, ರಾಮ ಕುಡ್ಡೇಮ್ಮಿ, ಹಪಿಪಸಾಬ ಸನದಿ, ಕಾಂತು ದಳವಾಯಿ, ಸಂತೋಷ ಬಡೆಪ್ಪಗೋಳ, ಬಸವರಾಜ ಗಾಡಿವಡ್ಡರ, ಕೆಂಪಣ್ಣ ಕಡಕೋಳ, ದಸ್ತಗಿರಿ ಮುಲ್ಲಾ, ರೋಹಿತ್ ಉಪ್ಪಾರ, ಉದಯ ಕಿಲಾರಿ, ಪ್ರಕಾಶ ಬನಾಜ, ರಮೇಶ ಕಮತಿ, ಸಿದ್ದು ಖಾನಪ್ಪನವರ, ರಘ ಬಾಗೇವಾಡಿ, ಗುರು ಮುನ್ನೋಳಿಮಠ, ಚನ್ನಬಸು ಸಂಪಗಾರ, ಆಕಾಶ ಶಿಂಧೆ, ರಜಾಕ ನಧಾಫ, ಅಬ್ಬು ಮುಜಾವರ, ಆಕಾಶ ಕುಂಬಾರ, ಚಿನ್ನು ಘಮಾಣಿ, ಶಿವು ಮಲ್ಲಪೂರೆ, ಆನಂದ ಖಾನಪ್ಪನವರ, ಮಹಾದೇವ ಮಕ್ಕಳಗೇರಿ, ಶಂಕರ ಮೇಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು