Breaking News

ಬೀದಿನಾಯಿಗಳು ಕಾಟವನ್ನು ನಿಯಂತ್ರಿಸುವಂತೆ ಆಗ್ರಹಿಸಿ ಕರವೇ ಆಗ್ರಹ ಮನವಿ


ಗೋಕಾಕ : ನರಗದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಕಾಟವನ್ನು ತಡೆಯುವಂತೆ ಆಗ್ರಹಿಸಿ ಇಲ್ಲಿನ ಕರವೇ ಗೋಕಾಕ ತಾಲೂಕು ಘಟಕದ ಕಾರ್ಯಕರ್ತರು ಶುಕ್ರವಾರದಂದು ನಗರದಲ್ಲಿ ಪ್ರತಿಭಟನೆ ನಡೆಸಿ ಪೌರಾಯುಕ್ತರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಅರ್ಪಿಸಿದರು.

ನಗರದ ವಿವಿಧ ಗಲ್ಲಿ ಗಲ್ಲಿಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಹಿಳೆಯರು, ಶಾಲಾಮಕ್ಕಳು, ವಯೋವೃದ್ಧರು ಒಬ್ಬಂಟಿಯಾಗಿ ಓಡಾಡಲು ಹೆದರುವಂತಾಗಿದೆ. ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳು ಕೆಲವು ಸಲ ಬೈಕ್ ಸವಾರರ ಮೇಲೂ ದಾಳಿ ಮಾಡುತ್ತಿವೆ. ನಗರದ ಮುಖ್ಯರಸ್ತೆಯಲ್ಲಿರುವ ರಿಲೇನ್ಸ ಮಾರ್ಟ್ ನ ಮುಂದೆ ಇರುವ ರಸ್ತೆ ವಿಭಜಕದ ಮೇಲಿನಿಂದ ಜಿಗಿಯುವ ನಾಯಿಗಳು ಹಲವು ಬೈಕ್ ಸವಾರರನ್ನು ಬಿಳಿಸಿ ಗಂಭೀರ ಗಾಯಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ನಾಯಿಗಳಿಂದ ತಪ್ಪಿಸಿಕೊಳ್ಳವ ಭಯದಲ್ಲಿ ಸವಾರರು ಬೈಕನಿಂದ ಬಿದ್ದು ಗಾಯಗೊಂಡ ನಿದರ್ಶನಗಳು ಸಹ ನಗರದಲ್ಲಿ ಹಲವಾರಿವೆ. ಬೀದಿ ನಾಯಿಗಳ ನಿಯಂತ್ರಣ ಮಾಡಬೇಕಾದ ನಗರಸಭೆ , ಪಶು ಸಂಗೋಪನೆ ಹಾಗೂ ಆರೋಗ್ಯ ಇಲಾಖೆ ಮೌನ ವಹಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರದ ಮಾರ್ಕಂಡೇಯ ನಗರ, ಯೋಗಿ ಕೊಳ್ಳ ರಸ್ತೆ, ವಿವೇಕಾನಂದ ನಗರ, ವಾಲ್ಮೀಕಿ ಕ್ರೀಡಾಂಗಣ, ಆದಿಜಾಂಬವ ನಗರ, ಅಂಬೇಡ್ಕರ್ , ಮಟನ್ ಮಾರ್ಕೆಟ್, ಆಶ್ರಯ ಬಡಾವಣೆ ಸೇರಿದಂತೆ ನಗರಾದ್ಯಂತ ಬೀದಿ ನಾಯಿಗಳು ಕಾಟಕ್ಕೆ ಜನ ಬೆಸತ್ತಿದ್ದಾರೆ. ನಗರದ ವಾರ್ಡ ನಂ 18ರಲ್ಲಿ 6 ಜನರು ಬೀದಿನಾಯಿಗಳ ದಾಳಿಗೆ ಗುರಿಯಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ವಾರ್ಡ ನಂ 21 ಅಂಬೇಡ್ಕರ್ ನಗರದಲ್ಲಿ ಗುರುವಾರದಂದು ಮಧ್ಯಾಹ್ನ 2 ಘಂಟೆಯ ಸುಮಾರಿಗೆ ಶ್ರೀಮತಿ ಬೇಗಂ ನಧಾಪ ಎಂಬುವವರಿಗೆ ನಾಲ್ಕು ಬೀದಿನಾಯಿಗಳು ದಾಳಿ ಮಾಡಿ ಮುಖಕ್ಕೆ ಗಂಭೀರಗಾಯ ಮಾಡಿವೆ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದೆ. ಹೀಗೆ ಹಲವು ಪ್ರಕರಣಗಳು ನಗರದಲ್ಲಿ ನಡೆಯುತ್ತಿದ್ದರೂ ಸಹ ನಗರಸಭೆ ಅಧಿಕಾರಿಗಳು ಟೆಂಡರ್ ಹಾಕಿದರು ಯಾರ ಬರುತ್ತಿಲ್ಲ ಎಂದು ನೇಪ ಹೇಳಿ ಜಾರಿಕೊಳ್ಳುತ್ತಿರುವುದು. ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.

ಕಾರಣ ತಕ್ಷಣದಲ್ಲಿ ನಗರಸಭೆ ಅವರು ಎಚ್ಚೆತ್ತುಕೊಂಡು ಮುಂದೆ ಆಗುವ ಬಹುದಾದ ದೊಡ್ಡ ಅನಾಹುತಗಳನ್ನು ತಪ್ಪಿಸಬೇಕೆಂದು ಸಮಸ್ತ ಗೋಕಾಕ ಜನತೆಯ ಪರವಾಗಿ ಕರ್ನಾಟಕ ರಕ್ಷಣಾ ವೇದಿಕೆ ತಮ್ಮಲ್ಲಿ ವಿನಂತಿಸುತ್ತದೆ. ಇದಕ್ಕೆ ತಪ್ಪಿದಲ್ಲಿ ನಗರಸಭೆ ಪೌರಾಯುಕ್ತ ಮನೆಯ ಮುಂದೆ ಬೀದಿ ನಾಯಿಗಳನ್ನು ಎಸೆದು ಉಗ್ರವಾಗಿ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ದೀಪಕ ಹಂಜಿ, ಪಪ್ಪು ಹಂದಿಗುಂದ, ಮಲ್ಲು ಸಂಪಗಾರ, ಹನಿಫ ಸನದಿ, ಬಸವರಾಜ ಗಾಡಿವಡ್ಡರ, ರಮೇಶ ಕಮತಿ, ಕೆಂಪಣ್ಣ ಕಡಕೋಳ, ಮಲಪ್ಪ ತಲೆಪ್ಪಗೋಳ, ದುಂಡಪ್ಪ ಪಾಟೀಲ, ಕರೆಪ್ಟ ಮಾಳವ್ವಗೋಳ, ಹನುಮಂತ ತೋಳಿ, ಸಿದಪ್ಪ ಹಣಬರಟ್ಟಿ, ರಾಮ ಕುಡ್ಡೇಮ್ಮಿ, ಗಣಪತಿ ಜಾಗನೂರ, ಜಗದೀಶ್ ರಾನಪ್ಪಗೋಳ, ಜಡೆಪ್ಪ ಸಂಪಗಾರ, ಸರದಾರ ಹಂಜಿ, ಯಾಸೀನ್ ಮಂಕಾದಾರ, ಮಲ್ಲಪ್ಪ ಹುಚ್ಚನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ : ಶಾಸಕ ಬಾಲಚಂದ್ರ ಜಾರಕಿಹೊಳಿ

*ಮೂಡಲಗಿ (ಪ್ರೊ. ಕೆ.ಜಿ.ಕುಂದಣಗಾರ ಪ್ರಧಾನ ವೇದಿಕೆ):* ಮೂಡಲಗಿ ಪಟ್ಟಣದ ಆರ್‍ಡಿಎಸ್ ಶಿಕ್ಷಣ ಸಂಸ್ಥೆ ಆವರಣದ ಪ್ರೊ. ಕೆ.ಜಿ. ಕುಂದಣಗಾರ ವೇದಿಕೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ