ಗೋಕಾಕ : ಕರುನಾಡ ಯುವ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಿದರು.
ನಗರದ ನಗರ ಸಭೆ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಕರುನಾಡ ಯುವ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ಇಳಿಗೇರ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು. ಕರುನಾಡ ಯುವ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಬುಕ್ ಪೇನ್ ಉಪಹಾರ ವಿತರಿಸಿದರು .
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಮಹಾದೇವ ಮಹರಾಜರು ವಹಿಸಿದ್ದರು, ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಲಕ್ಕಪ್ಪಾ ಲೋಕುರಿ, ದಲಿತ ಸಂಘರ್ಷ ಸಮಿತಿ ಉಪಾಧ್ಯಕ್ಷ ರಮೇಶ್ ಮಾದರ, ಕರವೇ ರಾಜ್ಯಾಧ್ಯಕ್ಷ ಕೆಂಪಣ್ಣಾ ಚೌಕಾಸಿ, ಮಲಿಕ ತಳವಾರ, ಯುನುಸ ನದಾಪ, ಅಡಿವೆಪ್ಪಾ ಕಂಕಾಲಿ, ಆಸಿಫ್ ಹಿರೇಕೋಡಿ, ಜಾಂಗಿರ, ಲಕ್ಷ್ಮೀ ಪಾಟೀಲ್, ದೀಪಾ ಹೊನಕುಪ್ಪಿ,ಸಿದ್ದಣ್ಣಾ ದುರದುಂಡಿ, ರಾಯಪ್ಪಾ ತಳವಾರ, ಯಲ್ಲಪ್ಪಾ ದುರದುಂಡಿ, ವಿಠ್ಠಲ ಮೇಶಿ, ವರುಣ ಹುನಶ್ಯಾಳ ಹಾಗೂ ಕನ್ನಡ ಪರ ಒಕ್ಕೂಟದ ಕಾರ್ಯಕರ್ತರು ಹಾಗೂ ಮುಖಂಡರು ಯುವಕರು ಉಪಸ್ಥಿತರಿದ್ದರು.