ಗೋಕಾಕ : ಹಿಂದಿ ದಿವಸ್ ಆಚರಣೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ವತಿಯಿಂದ ಸರ್ಕಾರ ಹಿಂದಿ ದಿವಸ ಆಚರಣೆ ಮಾಡುತ್ತಿರುವುದನ್ನು ಖಂಡಿಸಿ ಗೋಕಾಕ ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು ಈ ಸಂಧರ್ಭದಲ್ಲಿ ಕರವೇ ರೈತ ಘಟಕದ ಜಿಲ್ಲಾಧ್ಯಕ್ಷ ರೆಹಮಾನ್ ಮೊಕಾಶಿ ಮಾತನಾಡಿ ಕನ್ನಡವು ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು ಇದು ಶಾಸ್ತ್ರೀಯ ಬಾಷೆಯ ಸ್ಥಾನಮಾನ ಪಡೆದಿದೆ ಆದರೆ ಹಿಂದಿ ಭಾಷೆ ಎರಡು ಮೂರು ಶತಮಾನಗಳ ಭಾಷೆಯಾಗಿದ್ದು ಹಿಂದಿ ಹೇರಿಕೆ ದ್ರಾವಿಡ ಭಾಷೆಗಳ ಮೇಲಿನ ಆಕ್ರಮಣವಾಗಿದೆ ಸರ್ಕಾರವು ಹಿಂದಿ ಹೇರಿಕೆ ಮಾಡಿ ದಕ್ಷಿಣ ಭಾಷೆಗಳನ್ನು ಎರಡನೇ ದರ್ಜೆಯ ಭಾಷೆಗಳಾಗಿ ಮಾಡುವ ಹುನ್ನಾರ ಮಾಡಿದ್ದು ಕರ್ನಾಟಕ ರಕ್ಷಣಾ ವೇದಿಕೆ ಈ ಹುನ್ನಾರವನ್ನು ವಿಫಲಗೊಳಿಸಲಿದೆ ಇದೇ ರೀತಿ ಮುಂದುವರೆದರೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ರವಿ ನಾವಿ ಡಾ, ಈಶ್ವರ ಗುಡಜ ಪರಶುರಾಮ ಬಡಕರಿ ರಾಜು ಮುತ್ತೆಣ್ಣವರ ಸುನೀಲ್ ಬೆಳಮರಡಿ ನಿಯಾಜ್ ಪಟೇಲ್ ಮೀರಾ ಬಳಿಗಾರ ಗುರಪ್ಪ ಗಾಡಿವಡ್ಡರ ರವಿ ಮುಡ್ಡೆಪ್ಪಗೋಳ ರಘು ಗುಡ್ಡಾಕಾರ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು