Breaking News

ಹೆಚ್ಚುತ್ತಿರುವ ಬೀದಿ ನಾಯಿಗಳ, ಬಿಡಾಡಿ ದನಗಳ ಹಾವಳಿಯನ್ನು ನಿಯಂತ್ರಿಸುವಂತೆ ಕರವೇ ಆಗ್ರಹ!


ಗೋಕಾಕ ಅ 4 : ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ, ಬಿಡಾಡಿ ದನಗಳ ಹಾವಳಿಯನ್ನು ನಿಯಂತ್ರಿಸಿ ಜನನಿಬಿಡು ಪ್ರದೇಶಗಳಲ್ಲಿ ಮೂತ್ರಾಲಯಗಳನ್ನು ನಿರ್ಮಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೋರಾಟ ನಡೆಸಿದರು.

 

ಗುರುವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ನಗರಸಭೆಯ ಕಾರ್ಯವೈಖರಿಯನ್ನು ಖಂಡಿಸಿ , ಪೌರಾಯುಕ್ತರಿಗೆ ಮನವಿ ಅರ್ಪಿಸಿದರು.

 

ಕಳೆದ ಹಲವಾರು ತಿಂಗಳನಿಂದಲೂ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ.ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಹಾಗೂ ಪಾದಾಚಾರಿಗಳ ಮೇಲೆ ದಾಳಿ ಮಾಡುತ್ತಿವೆ. ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ವಾರ್ಡ್‌, ಕಾಲೊನಿ ನಿವಾಸಿಗಳ ನಿದ್ದೆಗೆಡಿಸುತ್ತಿರುವ ಬಿಡಾಡಿ ನಾಯಿಗಳು ಉಪಟಳ ಹೆಚ್ಚಾಗಿದೆ. ನಗರದ ಬಸವೇಶ್ವರ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ನಗರ , ಬಸ್‌ ನಿಲ್ದಾಣ ರಸ್ತೆ, ಬ್ಯಾಳಿಕಾಟಾ, ಎಪಿಎಂಸಿ ರಸ್ತೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ಉಪಟಳಕ್ಕೆ ನಗರದ ಜನ ಕಂಗಾಲಾಗಿದ್ದಾರೆ. ನಗರಸಭೆ ಇವುಗಳ ನಿಯಂತ್ರಣ ಮಾಡುವುದಕ್ಕೆ ನಿರ್ಲಕ್ಷ್ಯ ವಹಿಸಿದೆ.

ಇದರ ಜೊತೆಗೆ ಬಿಡಾಡಿ ದನಗಳ ಹಾವಳಿಯು ನಗರದಲ್ಲಿ ಜೋರಾಗಿ ನಡೆದಿದೆ. ಸಂತೆಯಲ್ಲಿ ಜನರು ತಿರುಗಾಡುವದದು ಕಷ್ಟದ ಕೆಲಸವಾಗಿದೆ. ಕೆಲ ಸಂದರ್ಭದಲ್ಲಿ ಸಂತೆ ಮಾಡುವಾಗ ಹಿಂದಿನಿಂದ ಬಂದ ದನಗಳು ಸಾರ್ವಜನಿಕರ ಮೇಲೆ ದಾಳಿ ಮಾಡಿ ಗಾಯಗೋಳಿಸಿರುವ ಘಟನೆಗಳು ಜರುಗಿವೆ. ನಗರದಲ್ಲಿ ಸಂಗೋಳ್ಳಿ ರಾಯಣ್ಣ ವೃತ್ತ , ಅಪ್ಸರಾ ಕೂಟ, ತಂಬಾಕು ಕೂಟ್ , ಮಯೂರ ಸ್ಕೂಲ್ ರಸ್ತೆಯಲ್ಲಿ ಬಿಡಾಡಿ ದನಗಳು ನಡು ರಸ್ತೆಯಲ್ಲಿಯೇ ನಿಲ್ಲುತ್ತಿರುವ ಪರಿಣಾಮ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಹುಮುಖ್ಯವಾಗಿ ಗೋಕಾಕ ನಗರದಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡಲು ಮೂತ್ರಾಲಯಗಳ ಇಲ್ಲದರಿಂದ ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ದಿನಾಲು ಸಾವಿರಾರು ಜನರು ವ್ಯಾಪಾರ ವಹಿವಾಟು ಹಾಗೂ ಸಂತೆಗೆ ಸಾವಿರಾರು ಜನರು ನಗರಕ್ಕೆ ಬರುತ್ತಾರೆ ಹಾಗೆ ನಗರಕ್ಕೆ ಬಂದ ಜನತೆ ಮೂತ್ರವಿರ್ಸನೆ ಮಾಡಲು ನಗರಸಭೆ ವತಿಯಿಂದ ಮೂತ್ರಾಲಯಗಳ ಸೌಲಭ್ಯ ಇಲ್ಲದಿರುವುದರಿಂದ ಸಾರ್ವಜನಿಕರು ಅದರಲ್ಲೂ ಮಧುಮೇಹಗಳಿಗೆ ತುಂಬಾ ತೊಂದರೆ ಯಾಗುತ್ತಿದ್ದು, ಸಿಕ್ಕ ಸಿಕ್ಕ ಕಡೆ ಮೂತ್ರ ವಿರ್ಸಜನೆ ಮಾಡುವ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ.

ಹೀಗೆ ಗೋಕಾಕ ನಗರವು ಕಳೆದ ಹಲವು ತಿಂಗಳುಗಳಿಂದ ಬೀದಿ ನಾಯಿ ,ಬಿಡಾಡಿ ದನ ಹಾಗೂ ಸಾರ್ವಜನಿಕ ಮೂತ್ರಾಲಯ ಸಮಸ್ಯೆಯಿಂದ ಸಾರ್ವಜನಿಕರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕಾರಣ ನಗರಸಭೆ ಯವರು ಎಚ್ಚೆತ್ತುಕೊಂಡು ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿ , ಬಿಡಾಡಿ ದನಗಳ ಕಾಟವನ್ನು ತಪ್ಪಿಸಿ ಅವುಗಳನ್ನು ಹಿಡಿದು ಸೂಕ್ತ ಪ್ರದೇಶಗಳಲ್ಲಿ ಬಿಟ್ಟು ಜನರು ಪಡುತ್ತಿರುವ ಗೋಳಿನಿಂದ ಪಾರು ಮಾಡಿ ನಗರದ ಬಸವೇಶ್ವರ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ, ವಾಲ್ಮೀಕಿ ವೃತ್ತ, ಅಪ್ಸರಾ ಕೂಟ್, ತಂಬಾಕ ಕೂಟ್, ಶಿಂದಿಕೂಟ್ , ನಾಕಾ ನಂ 1 ರಲ್ಲಿ ಸಾರ್ವಜನಿಕ ಮೂತ್ರಾಲಯಗಳನ್ನು ನಿರ್ಮಿಸಬೇಕು ತಾತ್ಕಾಲಿಕವಾಗಿ ಈ ಜನನಿಬಿಡು ಪ್ರದೇಶಗಳಲ್ಲಿ ಮೊಬೈಲ್ ಟಾಯ್ಲೆಟ್ ಗಳನ್ನು ನಿರ್ಮಿಸಿ ಸಾರ್ವಜನಿಕರು ಪಡುತ್ತಿರುವ ಗೋಳಿನಿಂದ ಪಾರು ಮಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ರಮೇಶ ಕಮತಿ , ಮಲ್ಲು ಸಂಪಗಾರ , ಮಹಾದೇವ ಮಕ್ಕಳಗೇರಿ , ಬಸವರಾಜ ಗಾಡಿವಡ್ಡರ , ರಾಮ ಕುಡೆಮ್ಮಿ , ಮುಗುಟ್ ಪೈಲ್ವಾನ್ , ಅಶೋಕ ಬಂಡಿವಡ್ಡರ , ಕೆಂಪ್ಪಣ್ಣಾ ಕಡಕೊಳ ,ಹನಮಂತ ಕಮತಿ ,ಲಕ್ಷ್ಮಣ ಗಾಡಿವಡ್ಡರ , ದುರ್ಗಪ್ಪ ಬಂಡಿವಡ್ಡರ , ಯಾಸೀನ್ ಮುಲ್ಲಾ ,ರಂಜಾನ ಅಂಡಗಿ , ಅಬ್ದುಲ ಪೀರಜಾದೆ , ನಿಜಾಮ ನಧಾಪ, ಲಕ್ಷ್ಮೀಕಾಂತ ದಳವಾಯಿ , ಆನಂದ ಖಾನಪ್ಪನವರ, ರಮೇಶ್ ಖಾನಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ