ಗೋಕಾಕ: ಕನ್ನಡ ರಕ್ಷಣಾ ವೇದಿಕೆ (ಕನ್ನಡ ಪರ ಸಂಘಟನೆಗಳ ಒಕ್ಕೂಟ) ವತಿಯಿಂದ ಗೋಕಾಕ ತಾಲೂಕಿನ ಪತ್ರಕರ್ತರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಸನ್ಮಾನ ಮಾಡಿ ಸತ್ಕರಿಸಿದರು.
ದುಪದಾಳ ಪ್ರವಾಸಿ ಮಂದಿರದಲ್ಲಿ ರಾಜ್ಯಾಧ್ಯಕ್ಷರಾಗದ ಕೆಂಪಣ್ಣಾ ಚೌಕಾಶಿ ಹಾಗೂ ಕನ್ನಡ ಪರ ಸಂಘಟನೆಗಳ ಮುಖ್ಯಸ್ಥರ ನೇತೃತ್ವದಲ್ಲಿ ಪತ್ರಕರ್ತರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಸನ್ಮಾನ ಮಾಡಿದರು.
ರಾಜ್ಯಾಧ್ಯಕ್ಷರಾದ ಕೆಂಪಣ್ಣಾ ಚೌಕಾಶಿ ಅವರು ಮಾತನಾಡಿ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ತಡೆಗಟ್ಟಲು ಕನ್ನಡ ಪರ ಸಂಘಟನೆಗಳು ಹಾಗೂ ಪತ್ರಕರ್ತರು ಒಂದೆ ನಾಣ್ಯದ ಎರಡು ಮುಖಗಳ ಹಾಗೆ ಕೆಲಸ ಮಾಡುತ್ತಿದ್ದಾವೆ.
ಅನೇಕ ಸಂದರ್ಭಗಳಲ್ಲಿ ಪತ್ರಕರ್ತರ ಕೆಲಸಗಳು ಶ್ಲಾಘನೀಯವಾಗಿದೆ ಎಂದರು.
ನಂತರ ಕನ್ನಡ ಪರ ಹೋರಾಟಗಾರರಾದ ಬಸವರಾಜ ಖಾನಪ್ಪನವರ ಅವರು ಮಾತನಾಡಿ ಹೋರಾಟಗಾರರ ಹೋರಾಟಗಳು ಸರಕಾರಗಳಿಗೆ ಮುಟ್ಟಿಸುವ ಕಾರ್ಯ ಪತ್ರಕರ್ತರು ಮಾಡುತ್ತಾರೆ, ಒಂದು ರೀತಿಯಲ್ಲಿ ಹೋರಾಟಗಾರರು ಬೆಳೆಯಲು ಪತ್ರಕರ್ತರು ಮುಖ್ಯವಾಗಿರುತ್ತಾರೆ ಎಂದರು.
ಕನ್ನಡ ಪರ ಹೋರಾಟಗಾರರಾದ ಸಂತೋಷ ಖಂಡ್ರೆ ಅವರು ಮಾತನಾಡಿ ಪತ್ರಕರ್ತರು ನಮ್ಮ ಎಲ್ಲ ಸಂಘಟನೆಗಳ ಕಾರ್ಯಕರ್ತರ ಬೆನ್ನೆಲುಬಾಗಿ ನಿಂತು, ಅನ್ಯಾಯಗಳ ವಿರುದ್ಧ ಹೋರಾಡುತ್ತಾರೆ, ಎಲ್ಲ ನನ್ನ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರದ ಅಜ್ಜಪ್ಪಾ ಕುಡಗೋಳ, ಶ್ರೀಮತಿ ಸವಿತಾ ಪಟ್ಟಣಶೆಟ್ಟಿ, ಮೆಹಬೂಬ್ ಕೋತ್ವಾಲ, ಮಹಾಲಿಂಗ ಜೋಗೋಜಿ, ಮಂಜು ಪಾಟೀಲ್, ತಮ್ಮಣ್ಣಾ ಅರಬಾವಿ, ನಾರಾಯಣ, ಸಿದ್ದಪ್ಪಾ ತಳಗೇರಿ ಹಾಗೂ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.