ಘಟಪ್ರಭಾ: ನೂತನವಾಗಿ ಬೆಳಗಾವಿ ಜಿಲ್ಲೆಯ ವಕ್ಫ ಮಂಡಳಿಯ ಜಿಲ್ಲಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ದೂಪದಾಳ ಗ್ರಾಮದ ಮುಸ್ಲಿಂ ಜಮಾತ್ ಅಬೂಬಕರ್ ಫೌಂಡೇಶನ್ ಹಾಗೂ ದೂಪದಾಳ ಗ್ರಾಮದ ಗಣ್ಯ ಮಾನ್ಯರಿಂದ ಸನ್ಮಾನ ಮಾಡಲಾಯಿತು ಇತ್ತೀಚೆಗೆ ವಕ್ಫ ಮಂಡಳಿ ಜಿಲ್ಲಾ ಅದ್ಯಕ್ಷರಾಗಿ ಯಕ್ಸಂಬಾ ಪಟ್ಟಣದ ಅನ್ವರ್ ದಾಡಿವಾಲೆ ಉಪಾಧ್ಯಕ್ಷರಾಗಿ ಸಿಂಗಳಾಪುರ ಗ್ರಾಮದ ವಕೀಲರಾದ ಶಫಿ ಜಮಾದಾರ ಆಯ್ಕೆಯಾಗಿದ್ದರು ಸನ್ಮಾನ ಸ್ವೀಕರಿಸಿ ಜಿಲ್ಲಾಧ್ಯಕ್ಷರು ಅನ್ವರ್ ದಾಡಿವಾಲೆ ಮಾತನಾಡಿ ಮುಸ್ಲಿಂ ಸಮಾಜದ ಅಭಿವೃದ್ಧಿಗೆ ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡುವುದಕ್ಕೆ ಬದ್ದರಾಗಿರುವುದಾಗಿ ವಕ್ಫ ಮಂಡಳಿ ಸಂಭದಿತ ಕೆಲಸಗಳಿಗೆ ಯಾವಾಗ ಬೇಕಾದರೂ ತಮ್ಮನ್ನು ಸಂಪರ್ಕ ಮಾಡಬಹುದು ಎಂದರು ಉಪಾಧ್ಯಕ್ಷ ಶಫಿ ಜಮಾದಾರ ಮಾತನಾಡುತ್ತಾ ವಕ್ಫ ಮಂಡಳಿಗೆ ಸಂಭದಿಸಿದ ವಿಸ್ತಾರವಾದ ಮಾಹಿತಿ ನೀಡಿ ಗ್ರಾಮದ ಮಸೀದಿಗಳ ಅಭಿವೃದ್ಧಿಗೆ ಕೆಲಸ ಮಾಡುವುದಾಗಿ ಘೋಷಿಸಿದರು ಈ ಸಂಧರ್ಭದಲ್ಲಿ ಮದಾರಸಾಬ ಜಗದಾಳ ಮೋದಿನಸಾಬ ಹೊಸುರ ಗ್ರಾಮದ ಮುಖಂಡರು ಮಹೇಶ್ ಪಾಟೀಲ್ ರಾಮಪ್ಪ ದೇಮಣ್ಣವರ್ ಪ್ರದೀಪ್ ಕುಲಕರ್ಣಿ ಲಗಮಣ್ಣಾ ನಾಗಣ್ಣವರ ಪರಶುರಾಮ ಗಾಡಿವಡ್ಡರ ಕಲ್ಲಪ್ಪ ಸನದಿ ಮದಾರಸಾಬ ಬಳಿಗಾರ ಮಲಿಕ್ ಸನದಿ ರೆಹಮಾನ್ ಬಳಿಗಾರ ಲಾಲಾಸಾಬ ಜಗದಾಳ ಮಲಿಕ್ ಬಳಿಗಾರ ಮೀರಾಸಾಬ ಬಳಿಗಾರ ಅಬ್ದುಲ್ ಕೋತವಾಲ ಪಠಾಣಸಾಬ ಕೋತವಾಲ ಗೌಸ ಕೋತವಾಕ ಮಹ್ಮದ ಕಡಲಗಿ ರಿಯಾಜ ಬೀಸ್ತಿ ಶಬ್ಬೀರ್ ಜಮಖಂಡಿ ಮಹಮ್ಮದ್ ಬಳಿಗಾರ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು ರೆಹಮಾನ್ ಮೊಕಾಶಿ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿ ವಂದಿಸಿದರು
CKNEWSKANNADA / BRASTACHARDARSHAN CK NEWS KANNADA