Breaking News

ಎಂಇಎಸ್ ಪುಂಡರ ಬಂದ್ ಕರೆಗೆ ಅವಕಾಶ ನೀಡಬಾರದೆಂದು ಕರವೇ ಗಜಸೇನೆ ಆಗ್ರಹ


ಬೆಳಗಾವಿ: ವಿಧಾನ ಸಭೆ ಅಧಿವೇಶನದಲ್ಲಿ ಬೆಳಗಾವಿ ಅಭಿವೃದ್ಧಿಗೆ ಪ್ರತಿಭಟಿಸೋದು ಬಿಟ್ಟು ಅಧಿವೇಶನದ ಆಶಯವನ್ನು ಹಾಳು ಮಾಡಲು ಹೊರಟಿದ್ದ MES ಪುಂಡರ ನಡೆಗೆ ಬೇಸತ್ತು ಬೆಳಗಾವಿ ಸ್ವಾಭಿಮಾನಿ ಯುವಕ ಸಂಪತ್ತ ಕುಮಾರ್ ದೇಸಾಯಿ ಆ ಪುಂಡನ ಮುಖಕ್ಕೆ ಮಸಿ ಬಳಿಯುವ ಮೂಲಕ ಕನ್ನಡಿಗರ ಆಶಯವನ್ನ ಎತ್ತಿ ಹಿಡಿದಿದ್ದಾನೆ : ಕರವೇ ಗಜಸೇನೆ ಉತ್ತರ ಕರ್ನಾಟಕದ ಯುವ ಘಟಕದ ಅಧ್ಯಕ್ಷ ಪವನ ಮಹಾಲಿಂಗಪುರ ಹೇಳಿದರು.

ಇಂತಹ ವೀರ ಕನ್ನಡಿಗರ ಬೆಂಬಲಕ್ಕೆ ಸಮಸ್ತ ಕನ್ನಡಿಗರು ನಿಲ್ಲಬೇಕಾಗಿದೆ. ಕನ್ನಡಿಗರ ಭಾವನೆಗಳಿಗೆ ಘಾಸಿ ಮಾಡುತ್ತಿದ್ದ ಮತ್ತು ಬೆಳಗಾವಿ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದ ಎಂಇಎಸ್ ಪುಂಡನ ಮುಖಕ್ಕೆ ಮಸಿ ಬಳಿದ ನಿರ್ಧಾರ ಸರಿಯಾಗಿದೆ.

ಕನ್ನಡ ನಾಡು ನುಡಿ ಜಲ ಹಾಗೂ ಭಾಷೆ ವಿಚಾರಕ್ಕೆಎಲ್ಲ ಕನ್ನಡಪರ ಸಂಘಟನೆಗಳ ಒಗ್ಗೂಡುವಿಕೆ ಬಹು ಮುಖ್ಯವಾಗಿದೆ…. ನಾಳೆ ಬಂದ್ ಗೆ ಕರೆ ನೀಡಿರುವ MES ಪುಂಡರನ್ನ ಬಂಧಿಸಿ ಬಂದ ಗೆ ಅವಕಾಶ ನೀಡಬಾರದೆಂದು ಸರ್ಕಾರಕ್ಕೆ ಸಮಸ್ತ ಕನ್ನಡಿಗರ ಪರವಾಗಿ ಅಗ್ರಹಿಸುತ್ತೇನೆ ಎಂದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ