ಶಿರಸಿ : ಸಿಎಂ ಬದಲಾವಣೆಯ ಚರ್ಚೆ ಜೋರಾಗಿರುವಂತ ಸಂದರ್ಭದಲ್ಲಿಯೇ, ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಪ್ರಸ್ತುತ ರಾಜಕೀಯದ ಬಗ್ಗೆ ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಅದೇನ್ ಅಂತ ಮುಂದೆ ಓದಿ..
ಈ ಕುರಿತಂತೆ ಶಿರಸಿಯ ನೇರಲಕಟ್ಟೆ ಗ್ರಾಮದಲ್ಲಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಬೇಟೆಗಾರನೊಬ್ಬನಿಂದ ತಪ್ಪಿಸಿಕೊಂಡ ಜಿಂಕೆ, ಸನ್ಯಾಸಿಯೊಬ್ಬನ ಎದುರು ಹಾದು ಓಡಿಹೋಗಿತ್ತು. ಆ ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಭೇಟೆಗಾರ ಕೇಳಿದಾಗ ಸನ್ಯಾಸಿ ಮಾತ್ರ ದ್ವಂದ್ವಕ್ಕೆ ಒಳಗಾಗುತ್ತಾನೆ.
ಜಿಂಕೆ ಹೋದ ಕಡೆಯನ್ನು ತೋರಿಸಿದ್ರೇ ಅದನ್ನು ಕೊಲ್ಲುತ್ತಾನೆ, ಹೇಳದಿದ್ದರೇ ಸುಳ್ಳು ಹೇಳಿದಂತೆ ಆಗುತ್ತದೆ ಎಂಬ ಸಂಕಟ ಎದುರಿಸಿದಂತೆ ಈಗಿನ ಸದ್ಯದ ಪರಿಸ್ಥಿತಿ ಇದೆ. ಆದ್ರೇ ಈ ಸ್ಥಿತಿ ಸದ್ಯದಲ್ಲೇ ಸುಖಾಂತ್ಯವಾಗಲಿದೆ ಎಂಬುದಾಗಿ ಹೇಳಿದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ನವೆಂಬರ್ ನಿಂದ ಸಂಕ್ರಾಂತಿ ನಡುವಿನ ಸಂದರ್ಭದಲ್ಲಿ, ದೇಶದಲ್ಲಿ ದೊಡ್ಡ ಮಟ್ಟದ ರಾಜಕೀಯ ಅವಘಡವೇ ಸಂಭವಿಸಲಿದೆ. ಇದು ಜಾಗತೀಕವಾಗಿಯೇ ತಲ್ಲಣ ಸೃಷ್ಠಿಸಲಿದೆ. ಆಗಸ್ಟ್ ಮೂರನೇ ವಾರದಲ್ಲಿ ಕೋವಿಡ್ ಹಾವಳಿ ಹೆಚ್ಚಾಗಲಿದೆ. ಆದ್ರೇ ಈ ಬಾರಿ ರೋಗದಿಂದ ಜನರು ಸಾಯೋದಿಲ್ಲ. ಬದಲಾಗಿ ರೋಗದ ಭಯದಲ್ಲಿಯೇ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ. ಜನರು ಧೈರ್ಯ ತಂದುಕೊಳ್ಳಬೇಕು ಎಂದರು.
ಇನ್ನೂ ಪ್ರಸ್ತುತ ಎದ್ದಿರುವಂತ ರಾಜಕೀಯ ವಿಪ್ಲವತೆ ಸದ್ಯದಲ್ಲೇ ಸುಖಾಂತ್ಯವಾಗಲಿದೆ. ಈ ಭಾರಿ ಮಳೆ, ಗಾಳಿ ಅಧಿಕವಾಗಿದ್ದು, ಕರೆಕಟ್ಟೆಗಳು ಭರ್ತಿಯಾಗಿ ಜಲಪ್ರಯಳ ಕೂಡ ಸಂಭವಸಿಲಿದೆ. ಈ ವರ್ಷ ಕೂಡ ಪಂಚಭೂತಗಳಿಂದ ಅನಾಹುತವಿದೆ ಎಂಬುದಾಗಿ ಭವಿಷ್ಯ ನುಡಿದರು.