ಕಾಗವಾಡ:ರಾಷ್ಟ್ರೀಯ ದಲಿತ ಸೇನೆಯ ಅಥಣಿ ತಾಲ್ಲೂಕಾ ಅಧ್ಯಕ್ಷರಾಗಿ ಯುವ ಮುಖಂಡ ಸಚಿನ್ ಕಾಂಬ್ಳೆ ಆಯ್ಕೆಯಾಗಿದ್ದಾರೆ.
ಕಾಗವಾಡ ತಾಲ್ಲೂಕಿನ ಉಗಾರ ಖುರ್ದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಕಾಗವಾಡ ಹಾಗೂ ಅಥಣಿ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ವೇಳೆ ದಲಿತ ಸೇನೆಯ ಜಿಲ್ಲಾಧ್ಯಕ್ಷ ಪ್ರತಾಪ ಕಾಂಬ್ಳೆ ಅವರ ನೇತೃತ್ವದಲ್ಲಿ ಜರುಗಿದ ಆಯ್ಕೆಯು ನೂತನ ತಾಲೂಕು ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗಳ ಸರ್ವಾನುಮತದಿಂದ ಆಯ್ಕೆ ಮಾಡಿ ಅವರಿಗೆ ಆದೇಶ ಪ್ರತಿಗಳನ್ನು ನೀಡಲಾಯಿತು.
ಈ ವೇಳೆ ದಲಿತ ಸೇನೆಯ ಅಥಣಿ ತಾಲ್ಲೂಕಾ ಅಧ್ಯಕ್ಷರನ್ನಾಗಿ ಸಚಿನ್ ಕಾಂಬ್ಳೆ,ಉಪಾಧ್ಯಕ್ಷರಾಗಿ ಸಂತೋಷ ಗಸ್ತಿ,ಪಾರೀಸ್ ಕಾಂಬ್ಳೆ, ಸಪ್ತಸಾಗರ ಗ್ರಾಮ ಶಾಖಾ ಅಧ್ಯಕ್ಷರಾಗಿ ಸಂತೋಷ ಕುರಣಿ, ಕಾಗವಾಡ ತಾಲ್ಲೂಕಾ ಅಧ್ಯಕ್ಷರನ್ನಾಗಿ ಪೀರು ಕಾಂಬ್ಳೆ, ಕಾಗವಾಡ/ಶೇಡಬಾಳ ನಗರಾಧ್ಯರನ್ನಾಗಿ ರಾಹುಲ್ ಘೊರಡೆ,ಸೇರಿದಂತೆ ಅನೇಕ ತಾಲೂಕುಗಳಿಗೆ ಅಧ್ಯಕ್ಷ,ಉಪಾಧ್ಯಕ್ಷರುಗಳನ್ನ ಆಯ್ಕೆ ಮಾಡಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷರಾದ ಪ್ರತಾಪ ಕಾಂಬ್ಳೆ, ಕಾರ್ಯಾಧ್ಯಕ್ಷರಾದ ಕಲಗೌಡ ವಿಟೇಕರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಕಾಂಬ್ಳೆ,ಜಿಲ್ಲಾ ಉಪಾಧ್ಯಕ್ಷರಾದ ಈಶ್ವರ ಕಾಂಬ್ಳೆ ಅಜೀತ ಸಾಗರ,ಪರಮಾನಂದ ಕಾಂಬಳೆ ಸೇರಿದಂತೆ ವಿವಿಧ ತಾಲೂಕಿನ ಅಧ್ಯಕ್ಷ, ಉಪಾಧ್ಯಕ್ಷರುಗಳು ಇದ್ದರು.