Breaking News

ವಾಯುಭಾರ ಕುಸಿತ, ಇಂದು ನಾಳೆ ಕರ್ನಾಟಕದಲ್ಲಿ ಹಲವೆಡೆ ಬಾರಿ ಮಳೆ. ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ನೋಡಿ?


ಬೆಂಗಳೂರು: ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಇಂದು (ಜುಲೈ 17) ಮತ್ತು ನಾಳೆ (ಜುಲೈ 18) ಸಹ ರಾಜ್ಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ. ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ (Monsoon 2021). ಕಾವೇರಿ ನದಿಯ ಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ನದಿ ತೀರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಭಾರೀ ಮಳೆಯ ಪರಿಣಾಮ ಹಾರಂಗಿ ಜಲಾಶಯಕ್ಕೆ ಒಳಹರಿವು ಕೂಡಾ ಹೆಚ್ಚಾಗಿದೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಲಿದೆ (Weather Report). ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದ್ದು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ.

ರಾಜ್ಯದ ಅತಿ ದೊಡ್ಡ ಜಲಾಶಯವಾದ ಲಿಂಗನಮಕ್ಕಿ ಸೇರಿದಂತೆ ಇತರೆ ಪ್ರಮುಖ ಜಲಾಶಯಗಳಾದ ಕಾವೇರಿ ಕಣಿವೆ ಭಾಗದ ಕೆಆರ್​ಎಸ್​, ಕಬಿನಿ, ಹೇಮಾವತಿ, ಹಾರಂಗಿ ಮತ್ತು ಜಲ ವಿದ್ಯುತ್​ ಅಣೆಕಟ್ಟೆಗಳಾದ ಲಿಂಗನಮಕ್ಕಿ, ಸೂಪಾ ಮತ್ತು ಕೃಷ್ಣಾ ನದಿ ಭಾಗದ ಜಲಾಶಯಗಳಾದ ತುಂಗಭದ್ರಾ, ಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ಆಲಮಟ್ಟಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?

ಕಾವೇರಿ ಕಣಿವೆ ಭಾಗದ ಜಲಾಶಯಗಳು:

1) ಕೆಆರ್​ಎಸ್​ ಜಲಾಶಯ | KRS Dam
ಇಂದಿನ ನೀರಿನ ಮಟ್ಟ: 94.00 ಅಡಿ
ಗರಿಷ್ಠ ಸಾಮರ್ಥ್ಯ: 124.80 ಅಡಿ

2) ಹಾರಂಗಿ ಜಲಾಶಯ | Harangi Dam
ಇಂದಿನ ನೀರಿನ ಮಟ್ಟ: 2857 ಅಡಿ
ಗರಿಷ್ಠ ಸಾಮರ್ಥ್ಯ: 2859 ಅಡಿ

3) ಹೇಮಾವತಿ ಜಲಾಶಯ | Hemavathi Dam
ಇಂದಿನ ನೀರಿನ ಮಟ್ಟ: 2902 ಅಡಿ
ಗರಿಷ್ಠ ಸಾಮರ್ಥ್ಯ: 2922 ಅಡಿ

4) ಕಬಿನಿ ಜಲಾಶಯ | Kabini Dam
ಇಂದಿನ ನೀರಿನ ಮಟ್ಟ: 2281 ಅಡಿ
ಗರಿಷ್ಠ ಸಾಮರ್ಥ್ಯ: 2284 ಅಡಿ

ಜಲ ವಿದ್ಯುತ್​ ಅಣೆಕಟ್ಟೆಗಳು:

5) ಲಿಂಗನಮಕ್ಕಿ ಜಲಾಶಯ | Linganamakki Dam
ಇಂದಿನ ನೀರಿನ ಮಟ್ಟ: 1790 ಅಡಿ
ಗರಿಷ್ಠ ಸಾಮರ್ಥ್ಯ: 1819 ಅಡಿ

6) ಸೂಪಾ ಜಲಾಶಯ | Supa Dam
ಇಂದಿನ ನೀರಿನ ಮಟ್ಟ: 541 ಅಡಿ
ಗರಿಷ್ಠ ಸಾಮರ್ಥ್ಯ: 564 ಅಡಿ

ಕೃಷ್ಣಾ ನದಿ ಭಾಗದ ಜಲಾಶಯಗಳು:

7) ತುಂಗಾಭದ್ರಾ ಜಲಾಶಯ | Tungabhadra Dam
ಇಂದಿನ ನೀರಿನ ಮಟ್ಟ: 1612 ಅಡಿ
ಗರಿಷ್ಠ ಸಾಮರ್ಥ್ಯ: 1609 ಅಡಿ

8) ಭದ್ರಾ ಜಲಾಶಯ | Bhadra Dam
ಇಂದಿನ ನೀರಿನ ಮಟ್ಟ: 161 ಅಡಿ
ಗರಿಷ್ಠ ಸಾಮರ್ಥ್ಯ: 186 ಅಡಿ

9) ಮಲಪ್ರಭಾ ಜಲಾಶಯ | Malaprabha Dam
ಇಂದಿನ ನೀರಿನ ಮಟ್ಟ: 2065.00 ಅಡಿ
ಗರಿಷ್ಠ ಸಾಮರ್ಥ್ಯ: 2079.05 ಅಡಿ

10) ಘಟಪ್ರಭಾ ಜಲಾಶಯ | Ghataprabha Dam
ಇಂದಿನ ನೀರಿನ ಮಟ್ಟ: 2142 ಅಡಿ
ಗರಿಷ್ಠ ಸಾಮರ್ಥ್ಯ: 2175 ಅಡಿ

11) ನಾರಾಯಣಪುರ ಜಲಾಶಯ | Narayanpur Dam
ಇಂದಿನ ನೀರಿನ ಮಟ್ಟ: 492 ಮೀಟರ್
ಗರಿಷ್ಠ ಸಾಮರ್ಥ್ಯ: 492.25 ಮೀಟರ್

12) ಆಲಮಟ್ಟಿ ಜಲಾಶಯ | Almatti Dam
ಇಂದಿನ ನೀರಿನ ಮಟ್ಟ: 518 ಮೀಟರ್
ಗರಿಷ್ಠ ಸಾಮರ್ಥ್ಯ: 519.69 ಮೀಟರ್


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಏಕಾಏಕಿ ವಾಹಣ ತಡೆಯುವಂತಿಲ್ಲ; ಪೋಲಿಸರಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ!

ಬೆಂಗಳೂರು: ನಗರದ ವಾಹನ ಸವಾರರಿಗೆ ಗುಡ್ ನ್ಯೂಸ್ ಇಲ್ಲಿದೆ. ಅನಗತ್ಯ ವಾಹನ ತಪಾಸಣೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ