ಗೋಕಾಕ : ಕರ್ನಾಟಕ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಕ್ಕೋಡಿ ಹಾಗೂ ವಿದ್ಯಾ ಸಂವರ್ಧಕ ಮಂಡಳದ ಜಿ. ಆಯ್. ಬಾಗೇವಾಡಿ ಸಂ .ಪ ಪೂ ಮಹಾವಿದ್ಯಾಲಯ.ಅವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿರುವ 2023-24ನೇ ಸಾಲಿನ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕರಾಟೆ, ಜೂಡೋ ಟೈಕೊಂಡು ಕ್ರೀಡಾಕೂಟದಲ್ಲಿ ಗೋಕಾಕ್ ನಗರದ ವಿವಿಧ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಗೋಕಾಕ್ ಕರಾಟೆ ಅಕಾಡೆಮಿಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಎಸ್ ಎಲ್ ಜೆ ಪಿಯು ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮಿ ಅಂತರಗಟ್ಟಿ ಪ್ರಥಮ ಸ್ಥಾನ, ಜ್ಞಾನದೀಪ ಸ್ವತಂತ್ರ ಪಿಯು ಕಾಲೇಜು ವಿದ್ಯಾರ್ಥಿನಿ ಸೋನಿಯಾ ಸುನಿಲ್ ಹಿರಗಣ್ಣನರ ಪ್ರಥಮ ಸ್ಥಾನ(W=54), ಜ್ಞಾನದೀಪ್ ಸ್ವತಂತ್ರ ಪಿಯು ಕಾಲೇಜು ವಿದ್ಯಾರ್ಥಿ ಆದಿ ಕಣ್ಣಪ್ಪನವರ್ (w=58) ಪ್ರಥಮ ಸ್ಥಾನ, ವಿನಯ್ ತುರೈದಾರ್ ಬೆಳ್ಳಿ ಪದಕ ಗೆದ್ದು ಜಯ ಗಳಿಸಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಗೋಕಾಕ್ ಕರಾಟೆ ಅಕಾಡೆಮಿಯ ಸೀನಿಯರ್ ಹೆಡ್ ಕೋಚ್ ದುರ್ಯೋಧನ್ ಕಡಕೋಳ ಅಭಿನಂದಿಸಿದ್ದಾರೆ. ಮಾಸ್ಟರ್ ಓಂಕಾರ್ ದಂಡಾಪುರ್ ವಿಷ್ಣು ಮಾವರ್ಕರ್ ಅನೋಜ್, ಎಲ್ಲಾಲಿಂಗ ಭೂಮಿಕಾ ವಿದ್ಯಾ ತೊಂಡಿಕಟ್ಟಿ ಕಿರಣ್ ಹೊರಟ್ಟಿ ಅಂದಾನಿ ಪ್ರಿಯಾ ಕಾನಪ್ಪನವರ್ , ಭೀಮಶಿ ತಳವಾರ್ ವಿಠಲ ಗರಾಚಾರಿ ಶುಭ ಕೋರಿದರು.