ಗೋಕಾಕ : ಇಂಟರ್ನ್ಯಾಷನಲ್ ಶೋಟೋಕನ್ ಕರಾಟೆ ಫೆಡರೇಷನ್ ಗೋಕಾಕ ನ ಕರಾಟೆ ಪಟುಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ದಿನಾಂಕ 27,28,29 ಮೇ 2022 ರಂದು ಪಂಜಾಬ ನ ಫಗ್ವಾರನ ಲವಿ ಪ್ರೊಫೆಷನಲ್ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನಶೀಪನಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಕುಮಟೆ (Fight) 61-65kg ವಿಭಾಗದಲ್ಲಿ ಚೇತನ್ ಮೆಳವಂಕಿ – ತೃತೀಯ ಸ್ಥಾನ ಕುಮಟೆ (Fight) 51-55kg ವಿಭಾಗದಲ್ಲಿ ಶಿವಾನಂದ ಕೊತೇಕರ್ – ತೃತೀಯ ಸ್ಥಾನ, ಕುಮಟೆ (Fight) 45-50kg ವಿಭಾಗದಲ್ಲಿ ಸುದೀಪ ಕಿತ್ತೂರ – ತೃತೀಯ ಸ್ಥಾನ ಪಡೆದಿದ್ದಾರೆ.
ಅಲ್ಲದೆ ಸುದೀಪ ಕಿತ್ತೂರು, ಶರಣ ಪೂಜೇರಿ, ಚೇತನ್ ಮೆಳವಂಕಿ, ವಿಷ್ಣು ಚಂದನವಾಲೆ, ಶಿವಾನಂದ ಕೊತೇಕ
ಇಂಟರ್ನ್ಯಾಷನಲ್ ಶೋಟೋಕನ್ ಕರಾಟೆ ಫೆಡರೇಷನ್‌ನ ಇವರು ಅಂತರಾಷ್ಟ್ರೀಯ ಬ್ಲಾಕ್ ಬೆಲ್ಟ್ (BLACK BELT) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗೋಕಾಕ ನಗರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಎಲ್ಲಾ ಕರಾಟೆ ಪಟ್ಟುಗಳನ್ನು ಶಾಸಕ ರಮೇಶ ಲ.ಜಾರಕಿಹೊಳಿ ಹಾಗೂ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಬೆಳಗಾವಿ ವಿಧಾನಸಭಾ ಪರಿಷತ್ ಸದಸ್ಯರಾದ ಲಖನ ಲ.ಜಾರಕಿಹೊಳಿ, ಬೆಳಗಾವಿ ವಿಭಾಗ ಸಂಯೋಜಕರು ಶ್ರೀ ಸದಾಶಿವ ಗುದಗಗೋಳ,Cllaus Company ಸಂಸ್ಥಾಪಕರಾದ ಶಿವಾನಂದ್ ಚಂದರಗಿ ಅವರು ಸನ್ಮಾನಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕರಾಟೆ ಮುಖ್ಯ ತರಬೇತುದಾರರಾದ ‘ಬಾಳು ದುರದುಂಡಿ, ಮಂಜುನಾಥ ಮೇಲ್ಮಟ್ಟಿ’ ಸಹ ಉಪಸ್ಥಿತರಿದ್ದರು.