ಗೋಕಾಕ : ಸಮಾಜ ಮುಖಿಯಾಗಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವಂತಹ ವೃತ್ತಿ ನರ್ಸಿಂಗ್ ವೃತ್ತಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.

ನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ಸಮೃದ್ಧಿ ನರ್ಸಿಂಗ್ ಕಾಲೇಜು, ತುಕ್ಕಾರ ನರ್ಸಿಂಗ್ ಸ್ಕೂಲ್ ಗೋಕಾಕ ಹಾಗೂ ಆರೋಗ್ಯ ನರ್ಸಿಂಗ್ ಕಾಲೇಜ ಮೂಡಲಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿಗಳ ದೀಪ ಪ್ರಜ್ವಲನೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಾವು ಕಲಿತ ಕೌಶಲ್ಯಗಳಿಂದ ಮಾತೃ ಹೃದಯಿಗಳಾಗಿ ರೋಗಿಗಳ ಸೇವೆ ಮಾಡಿ. ಧೈವ ಸ್ವರೂಪಿ ವೈದ್ಯರಿಗೆ ಸಹಕಾರಿಯಾಗಿ ಜನರ ಆರೋಗ್ಯ ರಕ್ಷಣೆಯಲ್ಲಿ ನಿಮ್ಮ ಪಾತ್ರ ಮಹತ್ವದಾಗಿದೆ. ಕೋರೋನಾ ಸಂದರ್ಭದಲ್ಲಿ ನಿಮ್ಮ ಸೇವೆ ಅವಿಸ್ಮರಣೀಯವಾಗಿದ್ದು, ಅರ್ಪಣಾ ಮನೋಭಾವದಿಂದ ರೋಗಿಗಳ ಸುಶ್ರುಸೆ ಮಾಡಿ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳುವಂತೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸದ್ದ ಬೆಳಗಾವಿಯ ಭೀಮ್ಸನ ನರ್ಸಿಂಗ್ ಕಾಲೇಜಿನ ಉಪ ಪ್ರಾಚಾರ್ಯ ಭೀಮಪ್ಪ ಕೋಣಿ ಹಾಗೂ ರಾಜ್ಯ ಪ್ರಕಲ್ಪ ಯುವ ಬ್ರಿಗೇಡ್ ನ ಕಿರಣ ಪಾಟೀಲ ಮಾತನಾಡಿ ಪ್ಲಾರೈನ್ಸ ಹಾಗೂ ನಿವೇದಿತಾರಂತೆ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಿಸ್ವಾರ್ಥದಿಂದ ಸೇವೆ ಮಾಡುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಮತ್ತು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಮಹಾಂತೇಶ ಕಡಾಡಿ, ನಿರ್ದೇಶಕಿ ಡಾ.ಮಯೂರಿ ಕಡಾಡಿ, ಪ್ರಾಚಾರ್ಯ ವಿಜಯ ಮಲಕನ್ನವರ, ವ್ಯವಸ್ಥಾಪಕ ಮಹಾದೇವ ಬಂಡ್ರೋ಼ಳಿ, ಡಾ.ಮಹೇಶ್ ಕಾಂಬಳೆ ಇದ್ದರು.
ಬಸವರಾಜ ನಾವಿ ಸ್ವಾಗತಿಸಿದರು. ದಾನೇಶ್ವರಿ ಕೌಜಲಗಿ , ರಾಣಿ ಧರ್ಮಟ್ಟಿ ನಿರೂಪಿಸಿದರು. ಕೊನೆಯಲ್ಲಿ ಬಿ.ಎಂ ಆದಿನಾಥ್ ವಂದಿಸಿದರು
CKNEWSKANNADA / BRASTACHARDARSHAN CK NEWS KANNADA