Breaking News

ಆಟೋ ಡಾಕ್ಟರ್ ಈಗ ಕೊಪ್ಪಳ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ….!


ದಾವಣಗೆರೆ: ಮೇಲಧಿಕಾರಿಗಳ ಕಿರುಕುಳಕ್ಕೆ ನಲುಗಿ ಹೆಚ್ಚು-ಕಡಿಮೆ ಕಳೆದೊಂದು ವರ್ಷದಿಂದ ವನವಾಸ ಅನುಭವಿಸಿದ್ದ, ಆಟೋ ಚಾಲನೆ ಮೂಲಕ ತಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದ ವೈದ್ಯಾಧಿಕಾರಿಯ ಹೋರಾಟಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ. ವೈದ್ಯಾಧಿಕಾರಿ ಡಾ.ರವೀಂದ್ರನಾಥ್ ಅವರನ್ನು ಕೊಪ್ಪಳ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ದಾವಣಗೆರೆಯಲ್ಲಿ ಆಟೋ ಓಡಿಸುವ ಮೂಲಕ ಆಟೋ ಡಾಕ್ಟರ್ ಎನಿಸಿಕೊಂಡಿದ್ದ ರವೀಂದ್ರನಾಥ್ ಇದೀಗ ಮೂಲ ವೃತ್ತಿಗೆ ಮರಳಿದ್ದಾರೆ.

ಮತ್ತೆ ಜಿಲ್ಲಾಮಟ್ಟದ ಅಧಿಕಾರಿಯನ್ನಾಗಿ ಸ್ಥಳ ನಿಯುಕ್ತಿ ಮಾಡಿರುವುದಕ್ಕೆ ಖುಷಿಯಾಗಿದೆ.ವಿಳಂಬವಾಗಿಯಾದರೂ ನ್ಯಾಯ ಸಿಕ್ಕಿದ್ದಕ್ಕೆ ಸಮಾಧಾನವಾಗಿದೆ.
ಡಾ. ರವೀಂದ್ರನಾಥ

ದಾವಣಗೆರೆ ತಾಲೂಕು ಬಾಡಾ ಗ್ರಾಮದ ಡಾ ರವೀಂದ್ರನಾಥ ಎಂ.ಎಚ್, ತಾವು ಬಳ್ಳಾರಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿಯಾಗಿದ್ದಾಗ ಕೆಲ ಅಧಿಕಾರಿಗಳಿಂದ ನೋವು ಅನುಭವಿಸಬೇಕಾಯಿತು ಎಂದು ದೂರಿದ್ದರು. ಇಲಾಖೆಯಲ್ಲಿ ಹಿರಿತನ ಪರಿಗಣಿಸದೆ, ಜಿಲ್ಲಾ ಮಟ್ಟದ ಅಧಿಕಾರಿಯಾಗಿದ್ದ ತಮ್ಮನ್ನು ತಾಲೂಕು ಮಟ್ಟದ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಯಿತು ಎಂದು ಅಸಮಾಧಾನ ಹೊರ ಹಾಕಿದ್ದರು.

ತಮಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ( ಕೆಎಟಿ) ಮೊರೆ ಹೋಗಿದ್ದರು. 15 ತಿಂಗಳಿಂದ ತಮಗೆ ವೇತನ ಕೂಡ ನೀಡಿಲ್ಲ ಎಂದು ಹೇಳಿಕೊಂಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ಲೋನ್ ಮೂಲಕ ಆಟೋ ಖರೀದಿಸಿ ಅದರ ಮೇಲೆ ‘ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ’ ಎಂದು ಬರೆದುಕೊಂಡು ನಗರದಲ್ಲಿ ಆಟೋ ಚಾಲನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು .


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ