Breaking News

ಗುತ್ತಿಗೆ ಪದ್ದತಿ ಬದಲು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ ಆಗ್ರಹ


ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ವಾಹನ ಚಾಲಕರು ವಾಟರ್ ಮೆನ್ ಡಾಟ ಆಪರೇಟರುಗಳನ್ನು ಗುತ್ತಿಗೆ ಪದ್ದತಿ ಬದಲು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ ಒಳಪಡಿಸುವಂತೆ ಆಗ್ರಹ

ರಾಜ್ಯದ ವಿವಿಧ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತ್ಯಾಜ್ಯ ಸಾಗಿಸುವ ವಾಹನ ಚಾಲಕರು. ವಾಟರ್‌ಮೆನ್, ಡೆಟಾ ಆಪರೇಟರ್, ಯುಜಿಡಿ ಕಾರ್ಮಿಕರು ಹಾಗೂ ಸಹಾಯಕರನ್ನು ಗುತ್ತಿಗೆ ಪದ್ಧತಿ ಬದಲು ನೇರವೇತನಕ್ಕೆ ಒಳಪಡಿಸುವಂತೆ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದರು .
ಅರಸೀಕೆರೆ ನಗರ ಸ್ಥಳೀಯ ಸಂಸ್ಥೆ ಹೊರಗುತ್ತಿಗೆ ನೌಕರರನ್ನುದ್ದೇಶಿಸಿ ಮಾತನಾಡುತ್ತಾ ಹೊರಗುತ್ತಿಗೆ ನೌಕರರಿಗೆ ಸಕಾಲಕ್ಕೆ ಕನಿಷ್ಟ ವೇತನವೂ ಕೈಗೆ ಸಿಗದೆ ಗುತ್ತಿಗೆ ಹೆಸರಿನ ಸರಕಾರಿ ಜೀತಗಾರಿಕೆಯಲ್ಲಿ ಗುತ್ತಿಗೆ ಏಜೆನ್ಸಿಗಳ ಶೋಷಣೆಗೆ ಸಿಲುಕಿಸಲಾಗಿದೆ.

ಕಳೆದ ೨೦೧೭ರಲ್ಲಿ ಪೌರಕಾರ್ಮಿಕರನ್ನು ವಿಶೇಷ ನೇಮಕಾತಿಯಡಿ ಖಾಯಂಗೊಳಿಸಿದ ಸರಕಾರ ಪೌರಕಾರ್ಮಿಕರೊಟ್ಟಿಗೆ ಕೆಲಸ ನಿರ್ವಹಿಸುವ ಈ ನೌಕರರನ್ನು ಗಮನಿಸಲೆಯಿಲ್ಲ.ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಸಕಾಲಕ್ಕೆ ವೇತನ ನೀಡದಿರುವುದು.ಕನಿಷ್ಟ ವೇತನ ಭವಿಷ್ಯ ನಿಧಿ ನೀಡದೆ ಗುತ್ತಿಗೆ ಏಜೆನ್ಸಿಗಳು ವಂಚಿಸುವುದು ಸರ್ವೇ ಸಾಮಾನ್ಯವಾಗಿದೆ. ಈ ಬಗ್ಗೆ ಪ್ರಶ್ನಿಸುವ ನೌಕರರಿಗೆ ಇನ್ನಿಲ್ಲದ ಕಿರುಕುಳ ನೀಡಿ ಕೆಲಸದಿಂದ ಕೈಬಿಡಲಾಗುತ್ತಿದೆ.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ಯಾವುದೇ ಕಾರ್ಮಿಕ ಹಕ್ಕುಗಳನ್ನು ನಿರಾಕರಿಸಿ ಜೀತಗಾರರಂತೆ ದುಡಿಸಿಕೊಳ್ಳಲಾಗುತ್ತಿದೆ.ಹಾಸನ ಜಿಲ್ಲೆಯ ಹೊಳೆ ನರಸೀಪುರದಲ್ಲಿ ಪುರಸಭೆಯ ಹೊರಗುತ್ತಿಗೆ ವಾಹನ ಚಾಲಕನನ್ನು ತಡರಾತ್ರಿ ಶವವನ್ನು ಸಾಗಿಸಲು ಆದೇಶ ಮಾಡಿದ್ದಾರೆ. ಶವ ಸಾಗಿಸಿ ಬರುವಾಗ ಮಾರ್ಗಮಧ್ಯೆ ಅಫಘಾತಕ್ಕೀಡಾಗಿ ಹೊರಗುತ್ತಿಗೆ ವಾಹನ ಚಾಲಕ ಸಾವನ್ನಪ್ಪಿದ್ದಾನೆ.ಪುರಸಭೆ ಅಧಿಕಾರಿಗಳು ಪರಿಹಾರ ನೀಡುವುದಿರಲಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳುವ ಸೌಜನ್ಯವನ್ನು ತೋರಿಲ್ಲ.ದಾವಣಗೆರೆ ನಗರಪಾಲಿಕೆಯಲ್ಲಿ ಹೊರಗುತ್ತಿಗೆ ನೌಕರರ ಸಂಘದ ಮುಖಂಡ ದುಗ್ಗೇಶ್ ರನ್ನು ಕನಿಷ್ಟ ನೋಟಿಸ್ ಸಹ ನೀಡದೆ ಕೆಲಸದಿಂದ ಕಿತ್ತು‌ಹಾಕಲಾಗಿದೆ.ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಈ ವರ್ತನೆ ಬ್ರಿಟಿಷ್ ಆಡಳಿತವನ್ನು ನೆನಪಿಸುತ್ತಿದೆ

ಕೂಡಲೆ ಈ ದೌರ್ಜನ್ಯ ನಿಲ್ಲಬೇಕು.ಹೊರಗುತ್ತಿಗೆ ನೌಕರರಿಗೆ ನೇರ ವೇತನ ಜಾರಿಗೊಳಿಸಬೇಕು.ಬಾಕಿ ಇರುವ ಪೌರಕಾರ್ಮಿಕರ ಹುದ್ದೆಗಳ ಎರಡನೇ ಹಂತದ ನೇಮಕಾತಿಗೆ ಚಾಲನೆ ನೀಡಬೇಕಿದೆ.

ನೇರ ವೇತನ ಜಾರಿಯಿಂದಾಗಿ ಸರಕಾರ ಅನಗತ್ಯ ನೀಡುವ ಶೇ೧೮ ರಷ್ಟು ಜಿಎಸ್ ಟಿ ಹಣ ಹಾಗೂ ಗುತ್ತಿಗೆ ಏಜೆನ್ಸಿಗಳಿಗೆ ನೀಡುವ ಶೇ೫ರಷ್ಟು ಸೇವಾಶುಲ್ಕ ಸೇರಿ ಶೇ ೨೫ರಷ್ಟು ಹಣ ಉಳಿತಾಯವಾಗಲಿದೆ.ರಾಜ್ಯ ಸರಕಾರ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಇದೊಂದು ಚುನಾವಣಾ ಅಜೆಂಡಾವಾಗಿ ರೂಪುಗೊಳ್ಳಲಿದೆ ಎಂದು ಎಚ್ಚರಿಕೆ ನೀಡುತ್ತೆವೆ ಎಂದರು

೧.ಹೊಳೆ ನರಸೀಪುರದಲ್ಲಿ ಅಫಘಾತಕೀಡಾಗಿ ಸಾವನ್ನಪ್ಪಿದ ಹೊರಗುತ್ತಿಗೆ ವಾಹನ ಚಾಲಕ ಕುಮಾರ್ ಕುಟುಂಬಕ್ಕೆ ಸರಕಾರ ₹೨೫ಲಕ್ಷ ಪರಿಹಾರ ಹಾಗೂ ಮೃತ ಕುಟುಂಬಕ್ಕೆ ಸರಕಾರಿ ನೌಕರಿ ನೀಡಬೇಕು

೨.ಹೊರಗುತ್ತಿಗೆ ನೌಕರರಿಗೆ ಕೆಲಸದಿಂದ ತೆಗೆದುಹಾಕುವ.ಸಕಾಲಕ್ಕೆ ವೇತನ ನೀಡದೆ ಕಿರುಕುಳ ನೀಡುವ ಪ್ರವೃತ್ತಿ ನಿಲ್ಲಬೇಕು

೩.ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ನೇರ ವೇತನಕ್ಕೆ ಒಳಪಡಿಸಬೇಕು

೪.ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅಗತ್ಯಕನುಗುಣವಾಗಿ ಪರಿಷ್ಕರಿಸಬೇಕು

ಸಭೆಯಲ್ಲಿ ನಗರಸಭಾ ಸದಸ್ಯರಾದ ಭಾಸ್ಕರ್ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್. ಮಂಜುನಾಥ್ ಎಂ.ದೀಲಿಪ್ ಮಹೇಶ್. ಅಪ್ಪಾಜಿ.ರವಿ.ಹರೀಶ್.ಪ್ರತಾಪ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು ಇದೇ ಸಂಧರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಗಿರೀಶ್. ಸಭೆಗೆ ಚಾಲನೆ ನೀಡಿ ಹೊರಗುತ್ತಿಗೆ ನೌಕರರನ್ನು ನೇರ ವೇತನಕ್ಕೆ ಒಳಪಡಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ