ಗೋಕಾಕ: ನಗರದ ತಹಶಿಲ್ದಾರರ ಮೂಲಕ ಲಕಾಕ ಕಾಟಿಲ ಸಮಾಜ ಅಭಿವೃದ್ಧಿ ಸೇವಾ ಕಮೀಟಿ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ಹಾಗು ಸಚಿವರು ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು
ಮುಖ್ಯ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ , ಬೆಂಗಳೂರು ಇವರಿಗೆ ಮನವಿ ಪತ್ರ ನೀಡಲಾಯಿತು.
ಕಾಟಿಕ/ಕಲಾಲ/ ಸೂರ್ಯವಂಶ ಕ್ಷತ್ರೀಯ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಸುಮಾರು 1975 ರಿಂದಲೂ ಖಾಟಿಕ್ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆನ್ನುವ ದಿಸೆಯಲ್ಲಿ ಹಲವಾರು ಪ್ರಯತ್ನಗಳು ಹೋರಾಟಗಳು ನಡೆದರೂ , ಇಲ್ಲಿಯವರೆಗೆ ಅದು ಈಡೇರಲಿಲ್ಲ , ಈ ಸಮಾಜವು ವೃತ್ತಿಯಿಂದ ಕುರಿ , ಕೋಳಿ ಮಾಂಸವನ್ನು ಮಾರಾಟಮಾಡುವವರಾಗಿದ್ದು , ಸಾಮಾಜಿಕ ಶೈಕ್ಷಣಿಕ ರಾಜಕೀಯ ಸವಲತ್ತುಗಳಿಂದ ವಂಚಿತರಾಗಿದ್ದಾರೆ.
ಇಲ್ಲಿಯವರೆಗೆ ಈ ಸಮಾಜವನ್ನು ಕಲಾಲ ,ಖಾಟಿಕ್ , ಸೂರ್ಯವಂಶ ಕ್ಷತ್ರೀಯ , ಹೀಗೆ ಸುಮಾರು 12 ವಿವಿಧ ಹೆಸರುಗಳಿಂದ ಗುರುತಿಸುತ್ತಿದ್ದು , ಈ ಮೊದಲು 1983 ರಲ್ಲಿ ಶ್ರೀ ಡಿ.ಕೆ ನಾಯ್ಕರ ಮತ್ತು 1992 ರಲ್ಲಿ ಶ್ರೀ ಎಲ್ ಜಿ ಹಾವನೂರ ಹಾಗೂ 2012 ರಲ್ಲಿ ಪ್ರೋ ಶ್ರೀ ಗುರುಲಿಂಗಯ್ಯಾನವರ ನಡೆಸಿದ ಕುಲಶಾಸ್ತ್ರೀಯ ಅಧ್ಯಯನದ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ಇರುತ್ತದೆ.
ಈಗಾಗಲೇ ನರೆಯ ರಾಜ್ಯವಾದ ಮಹಾರಾಷ್ಟ್ರ ಮಧ್ಯ ಪ್ರದೇಶ ಹರಿಯಾಣ ರಾಜಸ್ಥಾನ ದೆಹಲಿ ಒಳಗೊಂಡಂತೆ 13 ರಾಜ್ಯಗಳಲ್ಲಿ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿಸುವುದರ ಕುರಿತು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ ಬಹು ದಿನಗಳ ಬೇಡಿಕೆಯಾಗಿದ್ದು ಇದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ವಿನಂತಿಸಿಕೊಂಡರು.