ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಾಡಿದ ಹಿನ್ನೆಲೆ ಕನ್ನಡ ಪರ ಹೋರಾಟಗಾರ ಶ್ರೀನಿವಾಸ ತಾಳೂರಕರ, ಹೋರಾಟಗಾರ್ತಿ ಕಸ್ತೂರಿ ಬಾವಿ ಅವರಿಗೆ ಸನ್ಮಾನಿಸಿ, ಚಪ್ಪಲಿ ತೊಡಸಿದರು.
ಕಳೆದ 30 ವರ್ಷಗಳಿಂದ ಕಸ್ತೂರಿ ಬಾಯಿ ಅವರು ಕನ್ನಡಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. 16 ವರ್ಷ ಗಳ ಹಿಂದೆ ಬೆಳಗಾವಿ ಪಾಲಿಕೆಯ ಎದುರು ಕನ್ನಡ ಧ್ವಜ ಹಾರಾಡುವವರೆಗೂ ಕಾಲಿಗೆ ಚಪ್ಪಲಿ ಹಾಕಿಕೊಳ್ಳುವುದಿಲ್ಲವೆಂದು ಶಪಥ ಮಾಡಿದ್ದರು.
ಹೀಗಾಗಿ 16 ವರ್ಷಗಳು ಬರಿಗಾಲಿನಲ್ಲಿಯೇ ನಡೆದಾಡುತ್ತಿದ್ದರು. ಮಹಿಳೆ, ಹಾಗೂ ಕನ್ನಡಿಗರ ಕನಸು ನನಸಾದ ಹಿನ್ನೆಲೆಯ ಕಸ್ತೂರಿ ಬಾವಿ ಅವರಿಗೆ ಚಪ್ಪಲಿ ತೊಡಿಸಿದರು. ಮಾಲೆ ಹಾಕಿ ಸನ್ಮಾನಿಸಿದರು.
ಮುಂದುವರೆದ ಸಂಘರ್ಷ ಅನುಮತಿ ಇಲ್ಲದೆ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಸ್ಥಂಭ ನೆಟ್ಟಿರುವುದರಿಂದ ಪೊಲೀಸ್ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ನಡುವೆ ಸಂಘರ್ಷ ಮುಂದುವರೆದಿದೆ.
ಕನ್ನಡಿಗರನ್ನು ಚದುರಿಸಲು ಪೊಲೀಸರು ಮುಂದಾಗಿದ್ದರು. ಆದರೆ ಧ್ವಂಜ ಸ್ತಂಭವನ್ನು ತೆರೆವುಗೊಳಿಸಬಹುದು ಎಂಬ ಕಾರಣದಿಂದ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಧ್ವಜಕ್ಕೆ ಅಣುಕು ನೇಣು ಬಿಗಿದುಕೊಂಡು, ಪ್ರಾಣ ಕಳೆದುಕೊಳ್ಳುವ ಬೇದರಿಕೆ ಹಾಕಿದರು. ಈ ಜಾಗ ಬಿಟ್ಟು ಕದಲುವುದಿಲ್ಲ ಎಂದರು.