Breaking News

ಹೋಟೆಲ್ ಅಂಗಡಿಗಳಲ್ಲಿ ಆಹಾರ ಸ್ವಚ್ಛತೆ, ಗುಣಮಟ್ಟ ಬಗ್ಗೆ ನಿರಂತರ ಪರಿಶೀಲನೆ : ಡಾ.ಜಗದೀಶ್ ಜಿಂಗಿ


ಬೆಳಗಾವಿ: : ನಗರದ ಪ್ರಮುಖ ಹೋಟೆಲ್ ಹಾಗೂ ಬೀದಿಬದಿ ಆಹಾರ ಮಾರಾಟ ಅಂಗಡಿಗಳನ್ನು ನಿರಂತರ ಪರಿಶೀಲನೆ ನಡೆಸಬೇಕು ಗುಣಮಟ್ಟ ಹಾಗೂ ಸ್ವಚ್ಛತೆ ಕೊರತೆ ಕಂಡು ಬಂದಲ್ಲಿ, ದಂಡ ವಿಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಜ.11) ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನೇಕ ಹೋಟೆಲ್ ಗಳಲ್ಲಿ ಅಜಿನೋಮೋಟು, ಸೇರಿದಂತೆ ಇತರೆ ನಿಷೇಧಿತ ರಾಸಾಯನಿಕ ಅಡುಗೆ ಪದಾರ್ಥಗಳನ್ನು ಬಳಕೆ ಮಾಡಲಾಗುತ್ತಿದೆ. ಇಂತಹ ಆಹಾರ ಪದಾರ್ಥಗನ್ನು ಬಳಕೆ ಮಾಡುವ ಹೋಟೆಲ್, ಅಂಗಡಿಗಳಲ್ಲಿ ಸಿಲ್ ಮಾಡಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ನಿರಂತರ ಪರಿಶೀಲನೆಗೆ ಸೂಚನೆ:

ನಗರದ ರಸ್ತೆ ಬದಿಗಳಲ್ಲಿ, ದೇವಸ್ಥಾನಗಳ ಆವರಣದಲ್ಲಿ, ಹೈವೇ ರಸ್ತೆ ಪಕ್ಕದಲ್ಲಿ ಇಂತಹ ಅನೇಕ ಅಂಗಡಿಗಳು ಇವೆ. ಕೂಡಲೇ ದಾಳಿ ನಡೆಸಿ ಪರಿಶೀಲನೆ ನಡೆಸಬೇಕು. ನಿಷೇಧಿತ ಆಹಾರ ಪದಾರ್ಥಗಳ ಬಳಕೆ ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಸಹಾಯ ಪಡೆದು ಸ್ಥಳದಲ್ಲೇ ಹೋಟೆಲ್ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

 

ಇಂತಹ ಹೋಟೆಲ್ ಗಳಿಗೆ ಈಗಾಗಲೇ ಪ್ರಸಕ್ತ ವರ್ಷದಲ್ಲಿ 1 ಲಕ್ಷ 14 ಸಾವಿರ ದಂಡ ವಿಧಿಸಲಾಗಿದೆ. ಅದೇ ರೀತಿಯಲ್ಲಿ ನಿಗದಿತ ಗುರಿಯಂತೆ ಹೊಸ ಹೋಟೆಲ್ ಅಂಗಡಿಗಳಿಗೆ ಲೈಸೆನ್ಸ್ ಪರವಾನಿಗೆ ನೀಡಲಾಗಿದೆ ಎಂದು ಜಿಲ್ಲಾ ಅಂಕಿತ ಅಧಿಕಾರಿ ಡಾ.ಜಗದೀಶ್ ಜಿಂಗಿ ವಿವರಿಸಿದರು.

 

ನಗರದ ಗೋವಾವೇಸ್ ನ ಖಾವುಕಟ್ಟಾ ವಿವಿಧ ಮಳಿಗೆಗಳಿಗೆ ಲೈಸೆನ್ಸ್ ನೀಡಲಾಗಿದೆ ಹಾಗೂ ಅವರಿಗೆ ಆಹಾರ ಸ್ವಚ್ಛತೆ, ಗುಣಮಟ್ಟದ ಕುರಿತು ಈಗಾಗಲೇ ಮಳಿಗೆಗಳ ಮಲಿಕರುಗಳಿಗೆ ತಿಳಿಸಲಾಗಿದೆ.

 

ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಆಹಾರ ಸುರಕ್ಷತೆ, ಗುಣಮಟ್ಟ ಹಾಗೂ ನಿಷೇಧಿತ ಆಹಾರ ಪದಾರ್ಥಗಳ ಕುರಿತು ಶಿಬಿರ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಆಹಾರ ಸುರಕ್ಷತಾ ಅಧಿಕಾರಿ ಲೋಕೇಶ ಗನೂರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ