ಗೋಕಾಕ್ : ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಜಾತ್ಯತೀತ ಜನತಾದಳ ತಾಲೂಕು ಘಟಕದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಅವರ ನೇತೃತ್ವದಲ್ಲಿ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಗುರುವಾರದಂದು ತಹಶೀಲ್ದಾರ ಕಛೇರಿಯಲ್ಲಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಂಕರ ಮಾಡಲಗಿ ಕೊರೋನಾ ಸಂಕಷ್ಟದ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೈಲ, ಗ್ಯಾಸ್ ,ವಿದ್ಯುತ್ ದರ, ರಸಗೋಬ್ಬರ ಹಾಗೂ ವಿವಿಧ ವಸ್ತುಗಳ ಬೆಲೆಗಳನ್ನು ಬೇಕಾಬಿಟ್ಟಿಯಾಗಿ ಏರಿಸಿರುವದರಿಂದ ಜನರ ಬದುಕು ಚಿಂತಾಜನಕವಾಗಿದೆ. ಕೊರೋನಾ ನಿಯಂತ್ರಿಸುವಲ್ಲು ಸರಕಾರಗಳು ವಿಫಲವಾಗಿವೆ. ತಕ್ಷಣ ಸರಕಾರಗಳು ಬೆಲೆ ಏರಿಕೆಯನ್ನು ನಿಯಂತ್ರಿಸಿ ಕೊರೋನಾದಿಂದ ಮೃತಪಟ್ಟ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಸಿ.ಬಿ.ಗಿಡ್ಡನ್ನವರ , ಮುಖಂಡರುಗಳಾದ ಪ್ರಕಾಶ ಬಾಗೋಜಿ, ಪ್ರಕಾಶ ಸೋನವಾಲಕರ, ಎಂ.ಎ ಪೀರಜಾದೆ, ದಸ್ತಗೀರ ಪೈಲವಾನ, ಬಸವರಾಜ ಚಿಕ್ಕಡೋಳಿ , ವಿಠಲ ಸುಭಂಜಿ ಸೇರಿದಂತೆ ಅನೇಕರು ಇದ್ದರು.