ಗೋಕಾಕ: ಕಾಂಗ್ರೆಸ್ ನಾಯಕರಾಗಿರುವ ರಾಹುಲ್ ಗಾಂಧಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 51ನೇ ಜನ್ಮದಿನ ಆಚರಿಸುತ್ತಿರುವ ರಾಹುಲ್ ಗಾಂಧಿಗೆ ಕಾಂಗ್ರೆಸ್ ನಾಯಕರು ಶುಭಾಶಯಗಳ ಮಹಾಪೂರ ಹರಿಸಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷರ ಹುಟ್ಟುಹಬ್ಬದ ಅಂಗವಾಗಿ ಈ ದಿನವನ್ನು ಕಾರ್ಯಕರ್ತರು ಸೇವಾ ದಿನವಾಗಿ ಆಚರಿಸುತ್ತಿದ್ದಾರೆ.
ಹಲವೆಡೆ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರಿಗೆ ಫೇಸ್ ಮಾಸ್ಕ್ಅಗತ್ಯ ಔಷಧದ ಕಿಟ್ ಹಾಗೂ ಊಟವನ್ನು ಹಂಚುವ ಮೂಲಕ ತಮ್ಮ ನಾಯಕನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
ಅದೇ ರೀತಿಯಾಗಿ ಗೋಕಾಕ ನಗರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನ್ಮದಿನದಂದು ಎಐಸಿಸಿ ಹ್ಯೂಮನ್ ರೈಟ್ಸ್ ಗ್ರೂಪ್ ವತಿಯಿಂದ ಗೋಕಾಕ್ ನ ಶಿವ ಫೌಂಡೇಶನ್ ನಲ್ಲಿರುವ ಮಕ್ಕಳಿಗೆ ಪುಡ್ ಕಿಟ್ ವಿತರಿಸುವ ಮೂಲಕ ಸರಳವಾಗಿ ಆಚರಿಸಿದ್ದಾರೆ.
ಕಾಂಗ್ರೆಸ್ ಎಐಸಿಸಿ ಮಾನವ ಹಕ್ಕುಗಳ ಗೋಕಾಕ ತಾಲೂಕು ಅಧ್ಯಕ್ಷ ಜುನೇದ ಮಾಂಜರಿ ಮಾತನಾಡಿ ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ದೇಶಾದ್ಯಂತ ಸರಳವಾಗಿಳ ಆಚರಿಸುತ್ತಿದ್ದಾರೆ, ಬಡ ಜನರಿಗೆ ಕೈಲಾದಷ್ಟು ಸಹಾಯವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಸಿಸಿ ಮಾನವ ಹಕ್ಕು ಗೋಕಾಕ ತಾಲೂಕು ಅಧ್ಯಕ್ಷ ಜುನೈದ ಮಾಂಜರಿ, ಸಮೀವುಲ್ಲಾ ಜಮಾದರ, ಅನ್ವರ ಶೇಖ, ನವೀಮ ಅತ್ತಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.