ಚಿಕ್ಕೋಡಿ : ಈಶ್ವರ ಗುಡಜ ಅವರನ್ನು ಈ ಭಾರೀ ಅಂತರದಿಂದ ಗೆಲ್ಲಿಸಬೇಕೆಂದು ದಲಿತ ಮುಖಂಡ ದೇವರಾಜ ಕಾಂಬಳೆ ಅವರು ಕರೆ ನೀಡಿದರು.
ಚಿಕ್ಕೋಡಿ ಸದಲಗಾ ವಿಧಾನಸಭಾ ಕ್ಷೇತ್ರದ ಸಿದ್ದಾಪುರವಾಡಿ ನಲ್ಲಿ ನಡೆದಿದ್ದ ಕಾರ್ಯಕರ್ತರು ಬಹುಜನ ಭಾರತ ಪಕ್ಷದ ಅಭ್ಯರ್ಥಿ,ಈಶ್ವರ ಗುಡಜ ಪರ ಮತಯಾಚಿಸಿ ಅವರು ಮಾತನಾಡಿದರು.
ಸಂಘಟನೆಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮುಂದೆಯೂ ಸರ್ವರ ಪ್ರಗತಿಗೆ ಶ್ರಮಿಸುತ್ತಾರೆ ಎಂಬ ನಂಬಿಕೆ ನಮಗಿದೆ. ಕಾರಣ ಅವರನ್ನು ಆಯ್ಕೆ ಮಾಡಿ ವಿಧಾನ ಸಭೆಗೆ ಕಳುಹಿಸಲು ಮನವಿ ಮಾಡಿದರು. ಅವರ ಹೋರಾಟ ಹಾದಿ ಯುವಕರಿಗೆ ಸ್ಫೂರ್ತಿ. ಇಂತಹ ನಾಯಕರ ಮಾರ್ಗದರ್ಶನ ಪಡೆದು ಅವರನ್ನು ಆಯ್ಕೆ ಮಾಡಿ ಎಂದು ಹೇಳಿದರು.
ಪಕ್ಷದ ಅಭ್ಯರ್ಥಿ ಈಶ್ವರ ಗುಡಜ ಮಾತನಾಡಿ ಪಕ್ಷಕ್ಕಾಗಿ ಕಾರ್ಯಕರ್ತರು ನಿಷ್ಠೆಯಿಂದ ದುಡಿಯಬೇಕು. ನಾನು ನಿಮ್ಮನ್ನ ನಂಬಿ ಈ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಗೋಕಾಕದಿಂದ ಇಲ್ಲಿ ಬಂದು ಸ್ಪರ್ದೇ ಮಾಡ್ತಾ ಇದ್ದೀನಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಮತದಾರರಲ್ಲಿ ಮನವಿ ಮಾಡಿದರು.
. ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ,ಈಶ್ವರ ಗುಡಜ.ಯುವರಾಜ ಕಾಂಬಳೆ.ಪೃಥ್ವಿರಾಜ ಕಾಂಬಳೆ.ಯುವರಾಜ ಮಾದೀಗರ ವಿನೋದ ಗಸ್ತೀ.ವೆಂಕಟೇಶ ಪಾಂಡ್ರೆ. ಮಹಿಳೆಯರು ಸೇರಿದಂತೆ ಕಾರ್ಯಕರ್ತರು ಜನ ಮುಖ್ಯಸ್ಥರು.ಹಾಜರಿದ್ದರು.