ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ ಜಿಲ್ಲಾ ಸಮಿತಿ ಪೌರಾಯುಕ್ತರು ನಗರಸಭೆ ರಬಕವಿ ಬನಹಟ್ಟಿ ಕಾರ್ಯಾಲಯ ಮುತ್ತಿಗೆ ಹಾಕ್ಕಿ ಪ್ರತಿಭಟನೆ ನಡೆಸಿದರು
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರದ ನಿವೇಶನ ರಹಿತ ಫಲಾನುಭವಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಭೀಮ ವಾದ ಸಂಘಟನೆ ಪ್ರತಿಭಟನೆ ಮುಖಾಂತರ ಮನವಿ ಮಾನ್ಯ ಪೌರಾಯುಕ್ತರು ನಗರಸಭೆ ಇವರಿಗೆ ಸಲ್ಲಿಸಲಾಯಿತು
*ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ ಜಿಲ್ಲಾ ಸಮಿತಿ ಮಾನ್ಯ ಪೌರಾಯುಕ್ತರು ನಗರಸಭೆ ರಬಕವಿ ಬನಹಟ್ಟಿ ಕಾರ್ಯಾಲಯ ಮುತ್ತಿಗೆ ಹಕ್ಕಿ ಪ್ರತಿಭಟನೆ ನಡೆಸಿದರು ಪ್ರತಿಭಟನೆ ಮಾಡಿ ಮಾತನಾಡಿದ !!ಡಾ ಈಶ್ವರ ಮಾರುತಿ ಗುಡಜ ಈ ದೇಶದಲ್ಲಿ ಸ್ವಾತಂತ್ರ ಬಂದು 75 ವರ್ಷ ಕಳೆದರು ಇನ್ನು ವರೆಗೆ ನಾವು ಜಾಗದ ಸಲ್ವಾಗೀ ಹೋರಾಟ ಮಾಡುತ್ತಿದ್ದೆವೇ ಅಂದ್ರೆ ಅದಕ್ಕೆ ರಾಜ್ಯದಲ್ಲಿರುವ ಪಕ್ಷಗಳೆ ಎಂದು ಪಕ್ಷಗಳ ವಿರುದ್ದ ಆಕ್ರೋಶ ಹೊರಹಾಕಿದರು ಸಾಕಷ್ಟು ಹೋರಾಟ ಮಾಡಿದ್ದೇವೆ ಆದಷ್ಟು ಬೇಗ ಜಾಗ ಗುರತೀಸ ಬೇಕು ಇಲ್ಲ ಆದರೇ ಬಾರಕೋಲ ಚಳುವಳಿ ಮಾಡಲಾಗುವುದು ಎಂದು ಎಚ್ಚರಿಸಿದರು
ಮನಿವಿ ಸಲ್ಲಿಸಿ ಮಾತನಾಡಿ ನಗರಸಭೆ ವತಿಯಿಂದ 2013ರಲ್ಲಿ ರಬಕವಿ ನಗರದ ಸರ್ವೆ ನಂಬರ್ 64/1+2 100 ಎಕರೆ ಜಮೀನನ್ನು ಖರೀದಿಸಿ ನಿವೇಶನರಹಿತ ಬಡ ಜನರಿಗಾಗಿ ಫ್ಲಾಟ್ಗಳನ್ನು ಮಾಡಿ ನಿವೇಶನರಹಿತರಿಂದ ಅರ್ಜಿಯನ್ನು ಪಡೆದು ನಗರದ ಅನೇಕ ಬಡಕುಟುಂಬಸ್ಥರಿಗೆ ನಿವೇಶನಗಳನ್ನು ಹಕ್ಕು ಪತ್ರಗಳನ್ನು ವಿತರಿಸಿದ್ದು ಆದರೆ ಆ ಹಕ್ಕು ಪತ್ರಗಳ ಪ್ರಕಾರ ನಿವೇಶನಗಳನ್ನು ನಂಬರ್ಗಳ ಪ್ರಕಾರ ಅವರಿಗೆ ಗುರುತಿಸಿ ಕೊಡದೆ ಇಲ್ಲಿವರೆಗೆ ಅವರನ್ನು ಗೊಂದಲದಲ್ಲಿ ಕೆಡವಿದ್ದಾರೆ ನಮ್ಮ ಜಾಗ ಎಲ್ಲಿ ಬರುತ್ತದೆ ಹೇಗೆ ಗುರುತಿಸುವುದು ಎಂದು ಹಕ್ಕು ಪತ್ರದಾರರಿಗೆ ತಿಳಿಯದಾಗಿದೆ. ನಗರದ ತುಂಬಾ ಸುಮಾರು 100 ಕ್ಕಿಂತ ಹೆಚ್ಚು ಹಕ್ಕುಪತ್ರಗಳನ್ನು ವಿತರಿಸಿದ್ದು ಅದರಲ್ಲಿ ನೂರಕ್ಕಿಂತ ಹೆಚ್ಚು ಹಕ್ಕು ಪತ್ರದಾರರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು ಆರ್ಥಿಕವಾಗಿ ಅತ್ಯಂತ ಹಿಂದುಳಿದ ದಲಿತ ಕುಟುಂಬಗಳ ಜೀವನ ನಡೆಸಲು ಬಹಳ ಕಷ್ಟವಾಗಿದ್ದು ಚಿಂತಾ ಜನಕ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ ಈ ವಿಷಯದ ಬಗ್ಗೆ ಅಂದಿನಿಂದ ಇಂದಿನವರೆಗೆ ನಾವು ಸಂಬಂಧಿಸಿದ ಅಧಿಕಾರಿಗಳಾದ ಮಾನ್ಯ ಪೌರಾಯುಕ್ತರು ಮತ್ತು ತಹಶೀಲ್ದಾರರು ಮತ್ತು ಮುಖ್ಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಪತ್ರಗಳನ್ನು ಕೊಟ್ಟು ಕೊಟ್ಟು ಸಾಕಾಗಿ ಹೋಗಿದೆ ಈ ವಿಷಯದ ಕುರಿತು ಅನೇಕ ಸಲ ಸಮಕ್ಷಮ ಭೇಟಿಯಾಗಿ ವಿನಂತಿಸಿದರು ನೋಡೋಣ ಎಂಬ ಸುಳ್ಳು ಆಶ್ವಾಸನೆಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ ಈಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾ ದಲಿತರ ಕುಂದು ಕೊರತೆ ಸಭೆಯನ್ನು ಬಾಗಲಕೋಟದ ತಮ್ಮ ಕಚೇರಿಯಲ್ಲಿ ಕರೆದಿದ್ದು ಅಲ್ಲಿಯೂ ಹೋಗಿ ನಾವು ಈ ವಿಷಯದ ಕುರಿತು ಮಾನ್ಯ ಶ್ರೀ ಸಾಹೇಬರಿಗೆ ಲಿಖಿತವಾಗಿ ಮನವಿಯನ್ನು ಸಲ್ಲಿಸಿದ್ದು ಇರುತ್ತದೆ ಆದರೂ ಸಹ ಅಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಿ ನಿಮ್ಮ ಸಮಸ್ಯೆಯನ್ನು ಪರಿಸರ ಪರಿಹರಿಸಲಾಗುವುದು ಅಂತ ಹೇಳಿದರು ಆದರೂ ಇದುವರೆಗೆ ಕುಟುಂಬಗಳ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಲ್ಲ ಪ್ರಯತ್ನಗಳನ್ನು ಮಾಡಿದರು ಯಾವ ಅಧಿಕಾರಿಯಿಂದಲೂ ಇಲ್ಲಿವರೆಗೆ ಇದಕ್ಕೆ ಪರಿಹಾರ ಸಿಕ್ಕಿಲ್ಲ ಈ ವಿಷಯ ಕುರಿತು ಕ್ಷೇತ್ರದ ಶಾಸಕರನ್ನು ಎರಡು ಬಾರಿ ಭೇಟಿಯಾಗಿ ವಿನಂತಿಸಿದ್ದು ಅವರು ಮೌನಕ್ಕೆ ಶರಣಾಗಿದ್ದಾರೆ ನಿವೇಶನ ರಹಿತ ಬಡ ಕುಟುಂಬಗಳಿಗೆ 19 ವರ್ಷಗಳಿಂದ ಅನ್ಯಾಯವಾಗುತ್ತಿದ್ದು ಇದು ಇವರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ವಿಫಲರಾಗಿರುವ ನಗರಸಭೆ ಆಡಳಿತ ಅಧಿಕಾರಿ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನ ಹೋರಾಟ ಮನಿವಿಯಲ್ಲಿ ತಿಳಿಸಿದರು.
ಬೇಡಿಕೆಗಳು
1) 2003ರಲ್ಲಿ ರಬಕವಿ ಬನಹಟ್ಟಿ ನಗರಸಭೆಯಿಂದ ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಿದವರಿಗೆ ಜಾಗ ಗುರುತಿಸಲು ಅತಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು
2) ನಿವೇಶನ ರಹಿತ ಫಲಾನುಭವಿಗಳಿಗೆ ನೀಡುವ ಜಾಗಯೇ ನಕಾಶೆಯನ್ನು ತಿದ್ದುಪಡಿ ಮಾಡುವ ತಿದ್ದುಪಡಿ ಮಾಡಿದ ಕಾರಣ ನಿವೇಶನ ಜಾಗವನ್ನು ಗುರುತಿಸುವಲ್ಲಿ ವಿಳಂಬವಾಗಿದ್ದು ಈ ಕುಟುಂಬಗಳಿಗೆ ಅನ್ಯಾಯವಾಗಲು ಮೂಲ ಕಾರಣ ನಗರ ಸಭೆ ಅಧಿಕಾರಿಯಾದ ಮುಖೇಶ್ ಬನಹಟ್ಟಿ ಇವರನ್ನು ಅಮಾನತ್ತು ಮಾಡಿ ಇವರ ಮೇಲೆ ಕ್ರಮ ಜರುಗಿಸಿ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕು 3)ನೊಂದ ನಿವೇಶನ ರಹಿತ ಕುಟುಂಬಗಳಿಗೆ ಹಕ್ಕುಪತ್ರ ನೀಡದಂತೆ ಅತಿ ಶೀಘ್ರದಲ್ಲಿ ನಿವೇಶನ ಗುರುತಿಸಿ ಇವರಿಗೆ ನ್ಯಾಯ ದೊರಕಿಸಿ ಕೊಡಬೇಕು ಈ ಮೇಲಿನ ಬೇಡಿಕೆಗಳು 15 ದಿನಗಳೊಳಗಾಗಿ ಮತಕ್ಷೇತ್ರದ ಶಾಸಕರ ಮನೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಪರಶುರಾಮ ನೀಲನಾಯಕ.ಜಿಲ್ಲಾ ಸಂಚಾಲಕರಾದ ಸುನಿಲ ಹರಿಜನ.
ಸುರೇಶ್ ನಡುವಿನಮನಿ. ಮಾರುತಿ ಮಾದರ್. ಬೆಳಗಾವಿ ಟೈಮ್ಸ ಪತ್ರಿಕೆ ಸಂಪಾದಕರಾದ ಡಾ!!ಈಶ್ವರ ಮಾರುತಿ ಗುಡಜ .ರತ್ನಾಕರ ಕದಂಬ.ದುರ್ಗಪ್ಪ ಗಾಡಿವಡ್ಡರ ಇತರರು ಇದ್ದರು.