ಬೆಳಗಾವಿ ಜಿಲ್ಲೆಯ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ದುರದುಂಡಿ ನಾಗನೂರ ಹಾಗೂ ರಾಜಾಪೂರ ಗ್ರಾಮದಲ್ಲಿ ಐಸಿಐಸಿಐ ಪೌಂಡೇಶನ ವತಿಯಿಂದ ಅರಸಿನ ಪುಡಿ ತಯಾರಿಕಾ ಘಟಕಗಳನ್ನು ರಾಜ್ಯದ ಯೋಜನಾ ವ್ಯವಸ್ಥಾಪಕರಾದ ಮಧು .ಎನ್ ರವರು ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಅರಭಾವಿಯ ಡೀನ ಡಾ: ಎಮ್.ಜಿ.ಕೇರುತಗಿ ರವರು ಉದ್ಘಾಟಿಸಿದರು .
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಮಲ್ಲಿಕಾರ್ಜುನ ಜನ್ಮಟ್ಟಿ ರವರು ಐಸಿಐಸಿಐ ಫೌಂಡೇಶನ್ ರವರು ಗೋಕಾಕ ಹಲವಾರು ಗ್ರಾಮಗಳಲ್ಲಿ ರೈತರು ಸಕಾರಾತ್ಮವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದ್ದಾರೆ ಹಾಗೂ ಮಹಿಳೆಯರಿಗೆ ಸ್ವಯಂ ಉದ್ಯೋಗ ಸೃಷ್ಟಿಸಿದ ಕಾರ್ಯ ಶ್ಲಾಘನಿಯ ಎಂದು ಸಂತಸ ವ್ಯಕ್ತಪಡಸಿದರು .
ನಂತರ ಮಾತನಾಡಿದ ಮಧು.ಎನ್ ರವರು ಅರಸಿನ ಪುಡಿ ಘಟಕವನ್ನು ಸರಿಯಾದ ರೀತಿಯಿಂದ ಬಳಕೆ ಮಾಡಿ ಮಹಿಳೆಯರು ಉತ್ತಮವಾದ ಆದಾಯವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು. ಕಿತ್ತೂರ ರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಅರಭಾವಿಯ ಡೀನ ಡಾ: ಎಮ್.ಜಿ.ಕೇರುತಗಿ ರವರು ಮಾತನಾಡಿ ಅರಸಿನ ಪುಡಿ ಉತ್ಪಾದನಾ ಘಟಕಕ್ಕೆ ಆರ್ಥಿಕ ಸಹಾಯ ಮಾಡಿದ ಐಸಿಐಸಿಐ ಪೌಂಡೇಶನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹಾಗೂ ಈ ಒಂದು ಅರಸಿನ ಪುಡಿ ಉತ್ಪಾದನಾ ಘಟಕ ಮಹಿಳೆಯರ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸಲು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು . .
ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಪರಶುರಾಮ ಪಾಟೀಲ ಹಾಗೂ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಕಂಠೇಪ್ರಸಾದ ರವರು ಅರಸಿನ ಬೆಳೆಯ ಮೌಲ್ಯವರ್ಧನೆ ಬಗ್ಗೆ ಹಾಗೂ ಮಾರುಕಟ್ಟೆಯ ವ್ಯವಸ್ಥೆಯ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು.
ಪ್ರಾಸ್ತಾವಿಕ ನುಡಿಯನ್ನು ವಲಯ ಅಭಿವೃದ್ಧಿ ಅಧಿಕಾರಿಗಳಾದ ರಾಜೇಸಾಹೇಬ ಶಿಕಾರಿ ಅವರು ಕಾರ್ಯಕ್ರಮದ ಉದ್ದೇಶವನ್ನು ಹಾಗೂ ಚಟುವಟಿಗಳ ಸಮಗ್ರ ಮಾಹಿತಿ ನೀಡಿದರು . ಯಲ್ಲಪ್ಪಾ ಮರಡಿಯವರು ಸ್ವಾಗತಿಸಿದರು ಹಾಗೂ ಶಿವಾಜಿ ಮಾದಿಗರವರು ವಂದಿಸಿದರು ಹಾಗೂ ದುರದುಂಡಿ ಗ್ರಾಮದ ಪಂಚಾಯತ ಅಧ್ಯಕ್ಷರು ರೇಣುಕಾ ಅಂತರಗಟ್ಟಿ ಹಾಗೂ ರೈತ ಸ್ಪೂರ್ತಿ , ಎಫ್.ಪಿ.ಓ ಅಧ್ಯಕ್ಷರು ಸುರೇಶ ಮಠಪತಿ ಮತ್ತು ಪಿಕೆವಿವಾಯ್ ಸಂಯೋಜಕರಾದ ಬಸವರಾಜ ಗುಡದವರ ಕಾರ್ಯಕ್ರಮದಲ್ಲಿ ದುರದುಂಡಿ ಗ್ರಾಮದ ಭಗೀರಥ ಮಹಿಳಾ ಸಂಘ ,ಬಸವೇಶ್ವರ ತೋಟಗಾರಿಕೆ ಬೆಳೆಗಾರರ ಸಂಘ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಗತಿ ಬಂಧು ಸಂಘ ರಾಜಾಪುರ ಸಂಘಗಳ ಸದಸ್ಯರು ಹಾಗೂ ಹಾಗೂ ಐಸಿಐಸಿಐ ಪೌಂಡೇಶನ ಸಿಬ್ಬಂದಿಗಳಾದ ಚೇತನ , ಕುಮಾರ ,ಅಜಯ ಹಾಗೂ ದುರದುಂಡಿ , ರಾಜಾಪುರ ನಾಗನೂರ ಗ್ರಾಮದ ರೈತರು ಪಾಲ್ಗೊಂಡಿದ್ದರು.