Breaking News

ನಕಲಿ ದಾಖಲೆ ಸೃಷ್ಟಿಸಿ ಜಮೀನು ಖರೀದಿ ಪ್ರಕರಣ ; ಸಿನಿ ಶೈಲಿಯಲ್ಲಿ ಹುಕ್ಕೇರಿ ಸಬ್ ರಜಿಸ್ಟರ್ ಬಂಧನ


ಹುಕ್ಕೇರಿ: ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಸಬ್ ರಜಿಸ್ಟಾರ್ ಹಾಗೂ ಬಾಂಡ್ ರೈಟರ್ ಪೊಲೀಸರ ಅತಿಥಿಯಾಗಿದ್ದಾರೆ. ಸಬ್ ರಿಜಿಸ್ಟರ್ ಹಾಗೂ ಬಾಂಡ್ ರೈಟರನ್ನ ಪೊಲೀಸರು ಬಂಧಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಗೆ ಸಂಬಂದಿಸಿದಂತೆ ಹುಕ್ಕೇರಿ ಸಬ್ ರಿಜಿಸ್ಟ್ರಾರ್ ಮಡಿವಾಳಯ್ಯ ಬಾನಿಮಠ ಹಾಗೂ ಬಾಂಡ್ ರೈಟರ್ ಆನಂದ ದಡ್ಡಿಮನಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. A 7 ಹಾಗೂ A8 ಆರೋಪಿಗಳಾಗಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದರು. 

ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳಲ್ಲಿ 3 ಆರೋಪಿಗಳನ್ನ ಯಮಕನಮರಡಿ ಪೊಲೀಸರು ಬಂಧಿಸಿದ್ದರು ಆದರೆ ಸಬ್ ರಜಿಸ್ಟರ್ ಹಾಗೂ ಬಾಂಡ್ ರೈಟರ್ ಆರೋಪಿಗಳು ಮಾತ್ರ ಪರಾರಿಯಾಗಿದ್ದರು. ಬಳಿಕ ಎಂಟಿಸಿಪೇಟರಿ ಬೇಲ್ ಗೆ ಅರ್ಜಿ ಹಾಕಿದ್ದರು. ನಿನ್ನೆಯಷ್ಟೆ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.‌ಬಳಿಕ ಯಮಕನಮರಡಿ ಪೊಲೀಸ್ ಠಾಣೆಗೆ ಬಂದು ಇಬ್ಬರು ಆರೋಪಿಗಳು ಹಾಜರಾಗಿ ಜಾಮೀನು ಪಡೆಯುವಾಗ ಜಾಮೀನು ಮಂಜೂರಾಗಿದ್ದರು ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

ಜಾಮೀನು ಮಂಜೂರಾದರೂ ಪೊಲೀಸರು ಬಂಧಿಸಲು ಪ್ರಮುಖ ಕಾರಣ ಏನೂ ಅಂದರೇ ಇಬ್ಬರು ಆರೋಪಿಗಳ ಮೇಲೆ ನಿನ್ನೆಯಷ್ಟೇ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕುರಣಿ ಗ್ರಾಮದಲ್ಲಿ ಜಮೀನು ಖರೀಧಿಗೆ ಸಂಬಂಧಿಸಿದಂತೆ ಮತ್ತೊಂದು ಹೊಸ ಪ್ರಕರಣವನ್ನ ಪೊಲೀಸರು ದಾಖಲು ಮಾಡಿದ್ದರು. ಹೊಸ ಪ್ರಕರಣ ದಾಖಲಾದ ಮಾಹಿತಿ ತಿಳಿಯದೇ ಪೊಲೀಸ್ ಠಾಣೆಗೆ ಬಂದಿದ್ದ ಈ ಇಬ್ಬರು ಆರೋಪಿಗಳನ್ನ ಯಮಕನಮರಡಿ ಪೊಲೀಸರು ವಶಕ್ಕೆ ಪಡೆದು ಹುಕ್ಕೇರಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನ ಮಾಡಿ ಗೋಕಾಕ ಸಬ್ ಜೈಲಿಗೆ ಕಳಿಸಲಾಗಿದೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಡಾ. ಕೋರೆ ಅವರಿಗೆ ಪದ್ಮಶ್ರೀ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ

ಬೆಳಗಾವಿ- ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಬೆಳಗಾವಿಯವರೇ ಆದ ಡಾ.ಪ್ರಭಾಕರ ಕೋರೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ