ಘಟಪ್ರಭಾ : ಹಬ್ಬಕಾಗಿ ಬಲಿ ಕೊಡಲು ತಂದಿದ್ದ ಹಸುಗಳನ್ನು ಸಾರ್ವಜನಿಕರ ಸಹಕಾರದಿಂದ ಮೂರು ಗೋವುಗಳನ್ನು ರಕ್ಷಿಸಿದ ಘಟನೆ ಬುಧವಾರ ಮುಂಜಾನೆ ಗೋಕಾಕ ತಾಲೂಕಿನ ಶಿಂಗಳಾಪೂರ ಗ್ರಾಮದಲ್ಲಿ ನಡೆದಿದೆ.
ಹಬ್ಬಕ್ಕಾಗಿ ಬಲಿ ಕೊಡಲು ಸುಮಾರು ಏಳೆಂಟು ಹಸುಗಳನ್ನು ಅಕ್ರಮವಾಗಿ ತಂದಿಟ್ಟಿರುವ ಖಚಿತ ಮಾಹಿತಿ ಪಡೆದ ಘಟಪ್ರಭಾ ಪೊಲೀಸರು, ಗೋಕಾಕದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ಮೂರು ಹಸುಗಳನ್ನು ರಕ್ಷಿಸಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸುವ ಪೂವದಲ್ಲಿಯೇ ಎರಡು ಹಸುಗಳನ್ನು ವಧೆ ಮಾಡುತ್ತಿರುವ ವಿಷಯ, ಪೊಲೀಸರು ಸ್ಥಳಕ್ಕಾಗಮಿಸುತ್ತಿದಂತೆಯೇ ಎರಡು ಹಸುಗಳನ್ನು ಕೆಲವರು ತೆಗೆದುಕೊಂಡು ಪರಾರಿಯಾಗಿರುವುದಾಗಿ ವರದಿಯಾಗಿದೆ.
ಹತ್ಯೆ ಮಾಡಲಾದ ಹಸುಗಳನ್ನು ಘಟಪ್ರಭಾ ಪಟ್ಟಣದ ಸಮೀಪದಲ್ಲಿರುವ ಕಿನಾಲದಿಂದ ಸ್ವಲ್ಪ ದೂರದ ದಂಡೇಯ ಮೇಲೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮತ್ತು ಅಲ್ಲಿ ಸೇರಿದ ಸಾರ್ವಜನಿಕರಿಂದ ಪೊಲೀಸರ ಸಮ್ಮುಖದಲ್ಲಿ ಮಣ್ಣು ಮಾಡಲಾಯಿತು. ರಕ್ಷಿಸಲಾದ ಮೂರು ಹಸುಗಳನ್ನು ಗೋಕಾಕ ತಾಲೂಕಿನ ಹೂಲಿಕಟ್ಟಿಯ ಗೋಮಾತಾ ಸಮಿತಿಯ ಅಧ್ಯಕ್ಷರಾದ ಡಾ. ಮಹಾಂತಯ್ಯಾ ಅಜ್ಜನವರಿಗೆ ಒಪ್ಪಿಸಲಾಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಇಸ್ಮಾಯಿಲ್ ಅಬ್ದುಲರಜಾಕ ಅಂಕಲಗಿ, ಅಶ್ಪಾಕ್ ಇಮಾಮಸಾಬ ಬೇಪಾರಿ ಮತ್ತು ಸಮೀರ ಶಬೀರ ಬೇಪಾರಿ ಎಂಬುವವರನ್ನು ಬಂಧಿಸಲಾಗಿದ್ದು ಇನ್ನು ಅನೇಕರು ತಲೆ ಮರೆಸಿಕೊಂಡಿದ್ದು, ಅವರನ್ನು ಕೂಡಲೆ ಬಂಧಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಘಟಪ್ರಭಾ ಪೊಲೀಸ ಠಾಣೆಯ ಸಿ.ಪಿ.ಐ. ಶ್ರೀಶೈಲ ಬ್ಯಾಕೋಡ, ಪಿ.ಎಸ್.ಐ. ಎಮ್.ಸಿ ಹಿರೇಮಠ, ಎಎಸ್ಐ ಎಸ್.ಯು. ಖಿಲಾರಿ, ಸಿಬ್ಬಂದಿಗಳಾದ ಎಮ್ ಐ. ಮಠಪತಿ, ಆರ್.ಕೆ.ಹೊಳ್ಕಾರ, ಬಿ.ಎಸ್.ನಾಯಿಕ, ಹಣಮಂತ ಮಲಾಡದವರ, ಎಮ್.ಬಿ.ಕರಣಿ, ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ರಮೇಶ್ ಬಿರಡಿ, ವಿಷ್ಣು ವಾಕುಡೆ, ಆನಂದ ನಾವಿ, ಬಸವರಾಜ ಮನವಡ್ಡರ, ರಾಹುಲ್ ಗೋಂಧಳಿ ಅಂಕುಶ ರೇಣಕೆ, ಸುನೀಲ ಬೇಣವಾಡ, ಅಜಿತ ವಾಕುಡೆ, ಪ್ರವೀಣ್ ಗೋಸಬಾಳ ಸೇರಿದಂತೆ ಇನ್ನು ಅನೇಕ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪಾಲ್ಗೊಂಡಿದ್ದರು.