Breaking News

ಕನ್ನಂಬಾಡಿ ಕದನ: ಎಚ್.ಡಿ. ಕುಮಾರಸ್ವಾಮಿ, ಸುಮಲತಾ ನಡುವೆ ಮಾತಿನ ಸಿಡಿಗುಂಡುಗಳು


ಮಂಡ್ಯ, ಜು.8- ಕನ್ನಂಬಾಡಿ ಕದನ ಈಗ ತೀವ್ರಗೊಂಡಿದೆ. ಕಳೆದ ಕೆಲವು ದಿನಗಳಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದರಾದ ಸುಮಲತಾ ನಡುವೆ ಮಾತಿನ ಸಿಡಿಗುಂಡುಗಳು ಸಿಡಿಯುತ್ತಿದ್ದು, ಈಗ ಖುದ್ದು ಇಬ್ಬರೂ ಅಖಾಡಕ್ಕಿಳಿದಿದ್ದಾರೆ.

ಇದರ ನಡುವೆ ಇಬ್ಬರ ನಡುವಿನ ಹೇಳಿಕೆ, ಪ್ರತಿ ಹೇಳಿಕೆಗಳು ಮುಂಬರುವ ಚುನಾವಣೆಗಳಿಗೆ ಪ್ರಬಲ ಅಸ್ತ್ರಗಳು ಆಗಲಿವೆ. ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರನ್ನು ಸೋಲಿಸಲು ಎಚ್.ಡಿ.ಕುಮಾರಸ್ವಾಮಿ ಶಪಥ ಮಾಡಿದ್ದಾರೆ. ಚುನಾವಣೆಗೂ ನಾಲ್ಕು ತಿಂಗಳು ಮುನ್ನ ಆಡಿಯೋ ದಾಖಲೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಚುನಾವಣಾ ಸಮಯದಲ್ಲಿ ಆಡಿಯೋ ಬಿಡುಗಡೆ ಮಾಡಿದರೆ ಜನರಿಗೆ ಸತ್ಯ ಗೊತ್ತಾಗುತ್ತದೆ.

ಅದು ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ ಎಂದು ಸುಮಲತಾ ಅವರನ್ನು ಮಂಡ್ಯದಲ್ಲಿ ಹಣಿಯಲು ಕುಮಾರಸ್ವಾಮಿ ಆಡಿಯೋ ಬಾಂಬ್ ಬಳಕೆ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ ಸಂಸದೆ ಸುಮಲತಾಗೆ ಸಂಬಂಸಿದ ಆಡಿಯೋ ದಾಖಲೆಯನ್ನು ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇನ್ನು ಇದಕ್ಕೆ ಪೂರಕವಾಗಿ ನಿರ್ದಿಷ್ಟ ವ್ಯಕ್ತಿಗಳ ಜೊತೆಗಿನ ಮೀಟಿಂಗ್ ಫೋಟೋ ಸಂಗ್ರಹ ಮಾಡಲಾಗುತ್ತಿದೆ. ಸದ್ಯಕ್ಕೆ ಆಡಿಯೋ ವಿಚಾರದಲ್ಲಿ ಅನಗತ್ಯ ಹೇಳಿಕೆ ನೀಡದಿರಲು ಕುಮಾರಸ್ವಾಮಿ ತೀರ್ಮಾನ ಮಾಡಿದ್ದಾರೆ. ಆಡಿಯೋ ಬಿಡುಗಡೆ ಮೂಲಕ ಮಗನ ಸೋಲಿನ ಸೇಡು ತೀರಿಸಿಕೊಳ್ಳುತ್ತಾರೆಯೇ ಎಂಬುದು ಕುತೂಹಲಕರವಾಗಿದೆ.

# ಕುಮಾರಸ್ವಾಮಿ ಆಡಿಯೋ ಬಾಂಬ್‍ಗೆ ಸುಮಲತಾ ಕೌಂಟರ್ ಪ್ಲಾನ್:

ಮಹಿಳೆಯ ಘನತೆ ವಿರುದ್ಧ ಮಾನನಷ್ಟ ಹೇಳಿಕೆಯನ್ನೇ ಸುಮಲತಾ ಟ್ರಂಪ್ ಕಾರ್ಡ್ ಆಗಿ ಬಳಸಬಹುದು. ಪ್ರತಿ ಬಾರಿಯೂ ಕೂಡ ಕುಮಾರಸ್ವಾಮಿ ದಬ್ಬಾಳಿಕೆ ಮಾತುಗಳನ್ನಾಡುತ್ತಾರೆ ಎಂಬ ಕಾರ್ಡ್ ಬಳಸಬಹುದು. ವೈಯಕ್ತಿಕ ರಾಜಕೀಯ ಮಾಡಿದರೆ ವೈಯಕ್ತಿಕ ಚಾರಿತ್ರ್ಯದ ಪ್ರಶ್ನೆ ಮಾಡೋಣ ಎಂದು ಬೆಂಬಲಿಗರು ಹೇಳಿದ್ದಾರೆ. ಆದರೆ, ತೀರಾ ಖಾಸಗಿ ಜೀವನದ ಬಗ್ಗೆ ಮಾತನಾಡದಂತೆ ಸ್ಥಳೀಯ ಬೆಂಬಲಿಗರಿಗೆ ಸುಮಲತಾ ಸೂಚನೆ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಸ್ವಾಭಿಮಾನ ಹಾಗೂ ಮಹಿಳೆಯ ಘನತೆಯ ಸ್ವಾಭಿಮಾನ ಬಳಸಿಕೊಳ್ಳಲು ಸುಮಲತಾ ಟೀಮ್ ಮುಂದಾಗಿದೆ. ಈ ಸಂಬಂಧ ಅಗತ್ಯ ಬಿದ್ದರೆ ಜಿಪಂ, ತಾಪಂ ಚುನಾವಣೆ ಗಮನದಲ್ಲಿಟ್ಟುಕೊಂಡು ಮಂಡ್ಯದ ಹಳ್ಳಿ ಹಳ್ಳಿಗಳಲ್ಲಿ ಜನ ಸಂಪರ್ಕ ಸಭೆ ನಡೆಸಲು ಚಿಂತನೆ ನಡೆಸಿದೆ.

ಬೆಂಬಲಿಗರಿಗೆ ನೆರವಾಗುವ ನಿಟ್ಟಿನಲ್ಲಿ ಕುಮಾರಸ್ವಾಮಿ ವಿವಾದಿತ ಮಹಿಳಾ ವಿರೋ ಹೇಳಿಕೆಯನ್ನು ಜೀವಂತವಾಗಿಡಲು ಸುಮಲತಾ ಬಣ ನಿರ್ಧಾರ ಮಾಡಿದೆ. ಕೇವಲ ಅಕಾರ ಹಿಡಿಯಲು ಮಂಡ್ಯ ಜಿಲ್ಲೆ ದುರುಪಯೋಗ ಎಂಬ ವಾದ ಮಂಡಿಸುತ್ತಿದೆ. ಇನ್ನು ಸುಮಲತಾಗೆ ಕಾಂಗ್ರೆಸ್ ನಾಯಕರ ಪರೋಕ್ಷ ಬೆಂಬಲವಿದೆ.

ಗಣಿ ವಿಚಾರವನ್ನೇ ಮುಂದಿಟ್ಟುಕೊಂಡು ಜೆಡಿಎಸ್ ನಾಯಕರಿಗೆ ಕೌಂಟರ್ ನೀಡಲು ಸಂಸದೆ ಸುಮಲತಾ ಪ್ಲಾನ್ ಮಾಡಿದ್ದಾರೆ. ಕೋವಿಡ್ ಎರಡನೆ ಅಲೆ ಬಳಿಕ ಸಾಕಷ್ಟು ಆರೋಪಗಳಿಗೆ ಗುರಿಯಾಗಿದ್ದ ಸುಮಲತಾರ ಕಾರ್ಯವೈಖರಿಯನ್ನು ಜೆಡಿಎಸ್ ನಾಯಕರು ಟೀಕಿಸಿದ್ದರು. ಎಂಪಿ ಮೇಡಂ ಕೈಗೆ ಸಿಗೋದಿಲ್ಲ ಎಂದೇ ಸುಮಲತಾ ವಿರುದ್ಧ ಪ್ರಚಾರ ಮಾಡಿದ್ದರು. ಆಕ್ಸಿಜನ್ ಸಮಸ್ಯೆ ಹಾಗೂ ಲಸಿಕೆ ವಿಚಾರದಲ್ಲಿ ಸಾಕಷ್ಟು ಟೀಕೆಗೆ ಸುಮಲತಾ ಒಳಗಾಗಿದ್ದರು.

ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರ ಹೇಳಿಕೆಗಳನ್ನು ಬಂಡವಾಳ ಮಾಡಿಕೊಂಡು ಸಂಸದೆ ಸುಮಲತಾ ಗೆದ್ದಿದ್ದರು. ಅದೇ ರೀತಿ ಈ ಬಾರಿಯ ಚುನಾವಣೆಯಲ್ಲೂ ಅದೇ ಸೂತ್ರ ಬಳಸಲಿz್ದÁರೆ ಎಂದು ಹೇಳಲಾಗುತ್ತಿದೆ.

ಈಗ ಗಣಿ ಬಲೆಯಲ್ಲಿ ಜೆಡಿಎಸ್ ನಾಯಕರನ್ನು ಕಟ್ಟಿ ಹಾಕಲು ಸುಮಲತಾ ಹೊರಟಿದ್ದಾರಂತೆ. ಮಂಡ್ಯ ಜಿಲ್ಲೆಯ ಭಾವನಾತ್ಮಕ ವಿಷಯವಾದ ಕೆಆರ್‍ಎಸ್ ಡ್ಯಾಂ ಮುಂದಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ಐತಿಹಾಸಿಕ ಅಣೆಕಟ್ಟಿಗೆ ಜೆಡಿಎಸ್ ನಾಯಕರಿಂದಲೇ ಹಾನಿಯಾಗುತ್ತಿದೆ ಎಂದು ಬಿಂಬಿಸಲು ಸುಮಲತಾ ಹೊರಟಿದ್ದಾರೆ.

ಕೆಆರ್‍ಎಸ್ ಅಣೆಕಟ್ಟಿನ ಸುತ್ತಮುತ್ತ ಹಲವರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶವನ್ನು ದಾಳವಾಗಿಟ್ಟುಕೊಂಡ ಸುಮಲತಾ ಅಸ್ತಿತ್ವದ ಹೋರಾಟ ಎಂಬಂತೆ ರಾಜಕೀಯ ದಾಳ ಉರುಳಿಸುತ್ತಿದ್ದಾರೆ.
ಇನ್ನೊಂದೆಡೆ ಜಿದ್ದಾಜಿದ್ದಿನ ರಾಜಕಾರಣಕ್ಕೆ ಜೆಡಿಎಸ್ ನಾಯಕರು ಮುಂದಾಗಿದ್ದು, ಸ್ವತಃ ಹೆಚ್.ಡಿ.ಕುಮಾರಸ್ವಾಮಿ, ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ ಹಾಗೂ ಪರಿಷತ್ ಸದಸ್ಯ ಶ್ರಿಕಂಠೇಗೌಡ ರಿಂದ ನೇರವಾಗಿ ಸುಮಲತಾ ಟಾರ್ಗೆಟ್ ಮಾಡಲಾಗುತ್ತಿದೆ. 2019ರ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಇನ್ನಷ್ಟು ಜಿದ್ದಿನ ರಾಜಕಾರಣಕ್ಕೆ ಜೆಡಿಎಸ್ ಮುಂದಾಗಿದೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಝಣ ಝಣ ಕಾಂಚಾಣ… ಉಪತಹಸೀಲ್ದಾರ್ ಎಸಿಬಿ ಬಲೆಗೆ!

ಬೆಂಗಳೂರು : ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸಿಬಿ ಲಂಚಬಾಕ ಅಧಿಕಾರಿಯನ್ನು ಬಲೆಗೆ ಕೆಡವಿದೆ. ಜಿಲ್ಲಾಧಿಕಾರಿ ಮಂಜುನಾಥ್ ಜೊತೆಯಲ್ಲಿ ಕರ್ತ್ಯವ್ಯವನ್ನು ನಿರ್ವಹಿಸುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ