– C L ಖಡಕಭಾಂವಿ.
ಗೋಕಾಕ : ಕೋವಿಡ್ ಸೋಂಕು ಹೊಡೆದಟ್ಟಲು ಲಸಿಕಾ ಅಭಿಯಾನ ಪ್ರಾರಂಭಿಸಲಾಗಿದೆ. ಆದರೆ, ಈ ಅಭಿಯಾನದಲ್ಲಿ ನಾಗರಿಕರು ಸಾಮಾಜಿಕ ಅಂತರವನ್ನ ಮರೆತಿರೋದು
ಕೋವಿಡ್ ಮತ್ತಷ್ಟು ವ್ಯಾಪಿಸಲಿದೆಯೇ ಎನ್ನುವ ಅನುಮಾನ ಮೂಡುತ್ತಿದೆ.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಪಡೆಯಲು ಜನ ಜಂಗುಳಿ ಸೇರಿದ್ದು, ಸಾಮಾಜಿಕ ಅಂತರ ಮರೆತ ಘಟನೆ ಗೋಕಾಕದಲ್ಲಿ ನಡೆದಿದ್ದು ಕೋವಿಡ್-19 ಲಸಿಕಾ ಕೇಂದ್ರಕ್ಕೆ ನೂರಾರು ಜನರು ದೌಡಾಯಿಸಿ,ಲಸಿಕೆ ಪಡೆಯಲು ಜನರು ನೂಕು-ನುಗ್ಗಲು ನಡೆಸಿದ್ದಾರೆ.
ಇಂದು ಮುಂಜಾನೆಯಿಂದಲೇ ಕೇಂದ್ರದ ಎದುರು ಸೇರಿದ ಜನರು, ಸರಿಯಾಗಿ ಕ್ಯೂ ಕೂಡ ಹಚ್ಚದೆ ಲಸಿಕೆ ಪಡೆಯಲು ಮುಗಿಬಿದ್ದಿದ್ದಾರೆ. ಸರ್ಕಾರದ ವತಿಯಿಂದಲೂ ಯಾವುದೇ ವ್ಯವಸ್ಥೆ ಇಲ್ಲದ ಹಿನ್ನೆಲೆ ಜನರ ಮಧ್ಯೆ ಸಾಮಾಜಿಕ ಅಂತರ ಮಾಯವಾಗಿತ್ತು.
ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆದುಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ. ಲಸಿಕೆ ನೀಡುವ ಕೇಂದ್ರಗಳಲ್ಲಿ 18 ವರ್ಷ ಮೇಲ್ಪಟ್ಟವರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ.
ಜನರನ್ನು ನಿಯಂತ್ರಿಸುವುದು ಸರ್ಕಾರಿ ಲಸಿಕಾ ಕೇಂದ್ರಗಳ ವೈದ್ಯರಿಗೆ ಮತ್ತು ನಿರ್ವಹಣಾಕಾರರಿಗೆ ಸವಾಲಿನ ಕೆಲಸವಾಗಿದೆ.
ಸರ್ಕಾರ ಇಂದಿನಿಂದ ಅನ್ ಲಾಕ್ ಘೋಷಿಸಿದೆ, ಆದರೆ ಕೋವಿಡ ನಿಯಮಗಳನ್ನು ಪಾಲಿಸುವಂತೆ ಹೇಳಿದರು ಸಹ ಅನ್ ಲಾಕ್ ದಿಂದ ಕೊರೋನಾ ಹೋಗಿರಬಹುದು ಎಂಬವರಂತೆ ವರ್ತಿಸುತ್ತಿದ್ದಾರೆ. ಮಧ್ಯಾಹ್ನದ ನಂತರ ಜನ ಸಂಖ್ಯೆ ಹೆಚ್ಚಿತ್ತು, ಸಾಮಾಜಿಕ ಅಂತರ ಮರೆತ ಜನ ಲಸಿಕೆ ಪಡೆದುಕೊಳ್ಳಲು ಮುಗಿಬಿದ್ದಿದ್ದರು.
ಲಸಿಕೆ ಪಡೆದುಕೊಂಡ ನಂತರ ಅಡ್ಡ ಪರಿಣಾಮಗಳ ಆಗದಂತೆ ಹಿಸಲು 30 ನಿಮಿಷಗಳ ಲಸಿಕಾ ಕೇಂದ್ರದಲ್ಲೇ ಕಾಯಬೇಕಾಗಿತ್ತು.ಆದರೆ ಜನ ಯಾವುದೇ ನಿಯಮ ಪಾಲಿಸಲಿಲ್ಲ,
ತಾಲೂಕು ವೈದ್ಯಾಧಿಕಾರಿಗಳಾದ ಮುತ್ತಣ ಕೊಪ್ಪದ ಅವರ ಬಳಿ ನಮ್ಮ ವರದಿಗಾರರು ಈ ಕುರಿತು ” ನಗರದ ಪ್ರತಿ ವಾರ್ಡ ಪ್ರಕಾರ ಲಸಿಕೆ ನೀಡಿದರೆ ಒಳ್ಳೆಯದು ಜನ ಜಂಗುಳಿ ಕಡಿಮೆಯಾಗಬಹುದು” ಎಂದು ಪ್ರಶ್ನೆ ಮಾಡಿದರು.
ಆಗ ವೈದ್ಯಾಧಿಕಾರಿಗಳು ” ನಮ್ಮಲ್ಲಿ ಸಿಬ್ಬಂದಿ ಕಡಿಮೆ ಇದ್ದಾರೆ, ಲಸಿಕೆ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ, ಹೀಗಾಗಿ ನಾವು ಅಸಹಾಯಕರಾಗಿದ್ದೇವೆ” ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಹಲವು ಬಾರಿ ಪ್ರಕಟಣೆ ಆದರೂ ಸಹಿತ ಯಾವುದೇ ಮುಂಜಾಗ್ರತೆ ಕ್ರಮವನ್ನು ವೈದ್ಯಾಧಿಕಾರಿಗಳು ತೆಗೆದುಕೊಂಡಿಲ್ಲ.
ಏನೇ ಆಗಲಿ ಜನತೆಯಲ್ಲಿ ನಮ್ಮ ಸುದ್ದಿ ವಾಹಿನಿಯ ವತಿಯಿಂದ ಒಂದೇ ಕಳಕಳಿ ವಿನಂತಿ “ನಮ್ಮ ಜೀವ ನಾವೇ ಕಾಪಾಡಿಕೊಳ್ಳಬೇಕು, ಅಧಿಕಾರಿಗಳು ಅವರ ಕೈಲಾದಷ್ಟು ಪ್ರಯತ್ನ ಮಾಡುತ್ತಾರೆ ಆದರೆ ನಮ್ಮ ಮನೆಯವರಗೊಸ್ಕರ
“ನಮ್ಮ ಜೀವ ನಮ್ಮ ಕೈಯಲ್ಲಿ” ಇದೆ. 3ನೇ ಅಲೆಗೆ ಅನುವು ಮಾಡಿ ಕೊಡದೇ ನಾವು ಮಾಸ್ಕ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.