ಗೋಕಾಕ: ನಗರದ ಉದ್ಯಮಿ ರಾಜು ಝಂವರ ಅವರನ್ನು ಕಳೆದ ವಾರ ಅಪಹರಿಸಿ, ಹತ್ಯೆ ಮಾಡಲಾಗಿತ್ತು, ಆದರೆ ಮೃತದೇಹ ಮಾತ್ರ ಆರು ದಿನಗಳಿಂದ ಪತ್ತೆ ಆಗಿರಲಿಲ್ಲ, ಪೋಲಿಸ್ ಇಲಾಖೆ ಹಗಲು ರಾತ್ರಿ ಎನ್ನದೆ ಸತತ ಪ್ರಯತ್ನ ಮಾಡುತ್ತಲೇ ಇತ್ತು. ನಿನ್ನೆ ದಿನ ರಾತ್ರಿ ಮೃತದೇಹ ಪತ್ತೆಯಾಗಿದೆ.
ಈ ಪ್ರಕರಣ ಸಂಬಂಧಪಟ್ಟಂತೆ ಅನೇಕ ಜನ ಅನೇಕ ತರಹ ಪ್ರಶ್ನೆ ಮಾಡುವ ಪ್ರಸಂಗ ಎದುರಾಗಿತ್ತು, ಇಂತಹ ಎಲ್ಲ ಪ್ರಶ್ನೆಗಳಿಗೆ ನಿನ್ನೆ ಉತ್ತರ ಸಿಕ್ಕಿದೆ.
ಗೋಕಾಕ ಪೋಲಿಸ್ ಇಲಾಖೆ ಹಗಲಿರುಳು ಕಠಿನ ಪರಿಶ್ರಮ ಹಾಕಿ, ಊಟ ನಿದ್ದೆ ಇಲ್ಲದ ಮೃತದೇಹ ಪತ್ತೆ ಹಚ್ಚುವಲ್ಲಿ ಶ್ರಮಿಸಿದ್ದಾರೆ.
ನಿನ್ನೆ ದಿನ ಶೋಧ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ರಾತ್ರಿ ಊಟದ ವೇಳೆಯಲ್ಲಿ ಡಿವಾಯ್ಎಸ್ಪಿ ಡಿ ಎಚ್ ಮುಲ್ಲಾ ಅವರಿಗೆ ಊಟಕ್ಕೆ ಕರೆದಾಗ ” ಇಲ್ಲ ಮೃತದೇಹ ಸಿಗುವವರೆಗೂ ಊಟ ಬೇಡ” ಎಂದು ಹೇಳಿರುವುದು ನಾವು ಪ್ರತ್ಯೇಕ್ಷವಾಗಿ ಕಂಡಿದ್ದೇವೆ. ಹೀಗೆ ಪೋಲಿಸ್ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿಗಳು ಕೂಡ ನಿರಂತರವಾಗಿ ಶೋಧಕಾರ್ಯ ಮಾಡಿ ಮೃತದೇಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ , ಈ ಪೋಲಿಸ್ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.