ಗೋಕಾಕ: ವಲಯದ ಹಾಗೂ ನಗರದ ಸಾರ್ವಜನಿಕ ಬಂಧುಗಳಿಗೆ ತಿಳಿಸುದೇನೆಂದರೆ ಬರುವ 01 ನವ್ಹೆಂಬರ 2021 ರ ಕರ್ನಾಟಕ ರಾಜ್ಯೋತ್ಸವನ್ನು ಸರಕಾರ ಸೂಚಿಸಿದಂತೆ ಅತಿ ವಿಜೃಂಭಣೆಯಿಂದ ಹಾಗೂ ನಿಯಮಾನುಸಾರ ಆಚರಿಸುವ ನಿಟ್ಟಿನಲ್ಲಿ “ಮಾತಾಡ್ ಮಾತಾಡ್ ಕನ್ನಡ” ಎಂಬ ವಿನೂತನ ಕಾರ್ಯಕ್ರಮವನ್ನು 31/10/2021 ರಂದು ಮುಂಜಾನೆ 10:00 ಘಂಟೆಯಿಂದ ನಗರದ ಸಮುದಾಯ ಭವನದಲ್ಲಿ ರಂಗೋಲಿ ಬಿಡಿಸುವ ಕಾರ್ಯಕ್ರಮ ಹಾಗೂ ದೇಶಿ ತಿಂಡಿಗಳ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸದರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಮಹಿಳೆಯರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.
ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ದಿನಾಂಕ ೨೯/೧೦/೨೦೨೧ ರಂದು ಮದ್ಯಾಹ್ನ ೧೨-೦೦ ಘಂಟೆಯೊಗಾಗಿ ಕೆಳಗಿನವರನ್ನು ಗೋಕಾಕ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳುವುದು . ರಂಗೋಲಿ ಬಿಡಿಸುವ ಕಾರ್ಯಕ್ರಮ : – ಶ್ರೀ ವಿಜಯಕುಮಾರ ಖನಗಾಂವಿ , ( ಬಿ.ಆರ್.ಪಿ ) ದೂರವಾಣಿ ಸಂಖ್ಯೆ ೯೭೪೨೦೨೧೯೩೨ •
ದೇಶಿ ತಿಂಡಿಗಳ ಪ್ರದರ್ಶನ ಕಾರ್ಯಕ್ರಮ : ಶ್ರೀ ಬಿ ಎಮ್ ವಣ್ಣೂರ ( ಇ.ಸಿ.ಓ ) ದೂರವಾಣಿ ಸಂಖ್ಯೆ ೯೪೪೮೧೯೧೯೧೬ .
ಸೂಚನೆ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬೇಕಾಗುವ ಪರಿಕರಗಳನ್ನು ತಾವೆ ತೆಗೆದುಕೊಂಡು ಬರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.