ಗೋಕಾಕ : ಈಗಂತೂ ಕಳ್ಳರ ಕಾಟ ಹೆಚ್ಚಾಗಿ ಕಂಡುಬರುತ್ತಿವೆ. ಕೈಚಳಕ ತೋರಿಸಿ ಕದ್ದು ರಾತ್ರೋರಾತ್ರಿ ಪರಾರಿಯಾಗುವ ಅನೇಕ ಘಟನೆಗಳನ್ನು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ.
ಅದೇ ರೀತಿ ಗೋಕಾಕ ನಗರದಲ್ಲಿ ಸಾಕಷ್ಟು ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ ಕಾರಣ ಇಲ್ಲಿ ಸಿಸಿ ಟಿವಿ ಕ್ಯಾಮೆರಾ ಕೊರತೆಯಿಂದ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ.
ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅವಶ್ಯಕತೆ ಇದೆ ಮುಖ್ಯವಾಗಿದ್ದು ರಸ್ತೆ ಅಪಘಾತ, ಕಳ್ಳತನ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಗುತ್ತಿದ್ದ ಸಿಸಿ ಟಿವಿ ಕ್ಯಾಮೆರಾಗಳು ಇಲ್ಲ , ಕಾರಣ ಪೊಲೀಸರ ಮೇಲೂ ಸಹಿತ ಕೆಲಸದ ಒತ್ತಡ ಹೆಚ್ಚಿದೆ. ಇಂತಹ ಪ್ರಕರಣಗಳು ಪತ್ತೆ ಹಚ್ಚಲು ಪೋಲಿಸ್ ಇಲಾಖೆ ಖಾಸಗಿ ಸಂಸ್ಥೆಗಳ ಸಿಸಿ ಟಿವಿ ಕ್ಯಾಮೆರಾ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಪ್ರಮುಖ ವೃತ್ತಗಳಲ್ಲಿ ರಸ್ತೆಯಲ್ಲಿ, ಬಸವೇಶ್ವರ ವೃತ್ತ , ಸಂಗೊಳ್ಳಿ ರಾಯಣ್ಣ ವೃತ್ತ , ಬ್ಯಾಳಿ ಕಾಟಾ, ಮಯೂರ್ ಸ್ಕೂಲ್ ರೋಡ್, ಗುರುವಾರಪೇಟೆ, ನಗರದ ವಿವಿಧ ಕಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಂಬ ಬೇಡಿಕೆ ಬಹುದಿನಗಳಿಂದ ಇದೆ.
ಇನ್ನಾದರೂ ಎಚ್ಚೆತ್ತುಕೊಂಡು ಸಂಬಂಧ ಪಟ್ಟ ಅಧಿಕಾರಿಗಳು ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ , ಕಳ್ಳತನ ಪ್ರಕರಣಗಳನ್ನು ಕಡಿಮೆಯಾಗುವಂತೆ ಮಾಡ್ತಾರಾ ಅಂತ ಕಾಯ್ದು ನೋಡಬೇಕಾಗಿದೆ…….