*FSSAI ಬೆಳಗಾವಿ ವತಿಯಿಂದ ಆಹಾರ ಮಾರಾಟಗಾರರು, ಉತ್ಪಾದಕರು ಆಹಾರ ಸಂಸ್ಕರಣೆ ಉದ್ಯಮಗಾರರ ಜಾಗೃತಿ ಸಭೆ!*
ಗೋಕಾಕ : ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಬೆಳಗಾವಿ ವತಿಯಿಂದ ಸಣ್ಣ ಆಹಾರ ಮಾರಾಟಗಾರರು, ಉತ್ಪಾದಕರು ಆಹಾರ ಸಂಸ್ಕರಣೆ ಉದ್ಯಮದವರು ಸೇರಿದಂತೆ ವಿವಿಧ ರೀತಿಯ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ ಆಹಾರ ಸೇವೆಗಳ ಗುಣಮಟ್ಟದ ಉದ್ದೇಶಗಳನ್ನು ಬೆಳಗಾವಿ ಜಿಲ್ಲಾ ಅಂಕಿತ ಅಧಿಕಾರಿ ಡಾ ಜಗದೀಶ್ ಜಿಂಗಿ ಅವರು ತಿಳಿಸಿದರು.
ನಗರದ ಸ್ಪೈಸ್ ಗಾರ್ಡನ್ ನಲ್ಲಿ ನಡೆದ FSSAI ಬೆಳಗಾವಿ ವತಿಯಿಂದ ಆಹಾರ ಮಾರಾಟಗಾರರು, ಉತ್ಪಾದಕರು ಆಹಾರ ಸಂಸ್ಕರಣೆ ಉದ್ಯಮಗಾರರ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು ಆಹಾರ ಗುಣಮಟ್ಟ ಹಾಗೂ ಸ್ವಚ್ಚತಾ ಕಾಳಜಿಯನ್ನು ಅಂಗಡಿಕಾರರು ವಹಿಸಬೇಕು. ಆಹಾರ ವಹಿವಾಟು/ಉದ್ದಿಮೆದಾರರು (ಅತೀ ಸಣ್ಣ ಹಾಗೂ ದೊಡ್ಡ ಉದ್ದಿಮೆ) ಎಫ್ಎಸ್ಎಸ್ಎಐ ಆಹಾರ ಪರವಾನಿಗೆ / ನೋಂದಣಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ, ಇಲ್ಲದಿದ್ದಲ್ಲಿ ಸೆಕ್ಷನ್ 63 ರ ಪ್ರಕಾರ 5 ಲಕ್ಷದವರೆಗೆ ದಂಡ ಮತ್ತು 6 ತಿಂಗಳವರೆಗೆ ಶಿಕ್ಷೆ ನಿಡಲು ಹಾಕಲು ಕಾನೂನಿನಲ್ಲಿ ಅವಕಾಶವಿರುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತಾಧಿಕಾರಿಗಳಾದ ಡಾ : ಜಗದೀಶ್ ಜಿಂಗಿ ಅವರು ತಿಳಿಸಿದರು.
ಇದೆ ಸಮಯದಲ್ಲಿ ವಿವಿಧ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡದಂತೆ ಬಗ್ಗೆ ತಿಳಿಹೇಳಿ, ಜನರಿಗೆ ಒಳ್ಳೆಯ ಆಹಾರ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಅಧಿಕಾರಿ ಲೋಕೇಶ್ ಗಾಣುರ ಹಾಗೂ ಆಹಾರ ಮಾರಾಟಗಾರರು, ಉತ್ಪಾದಕರು ಆಹಾರ ಸಂಸ್ಕರಣೆ ಉದ್ಯಮಗಾರರಾಜು ಉಪಸ್ಥಿತರಿದ್ದರು