ಗೋಕಾಕ : ಟ್ರ್ಯಾಕ್ಟರ ಟ್ರೇಲರಗಳು ಕಳ್ಳತನವಾದಂತೆ ನಾಟಕವಾಡಿ ಇನ್ನೂರೆನ್ಸ ಕ್ಲೇಮ್ ಮಾಡಿಕೊಳ್ಳುವ ಉದ್ದೇಶದಿಂದ ತಾವೆ ಮುಚ್ಚಿಟ್ಟು, ಪಿರ್ಯಾದಿ ನೀಡಲು ಬಂದವರ ಇಬ್ಬರು ಬಂಧನ.
ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದಲ್ಲಿ ತಂದೆ ಶಿವಾಜಿ ರಾಮಪ್ಪ ಯರಗಟ್ಟಿ, ಮಗ ಸಂಭಾಜಿ ಯರಗಟ್ಟಿ ಎಂಬಾತರು ಟ್ರ್ಯಾಕ್ಟರ ಟೇಲರಗಳು ಕಳ್ಳತನವಾದಂತೆ ನಾಟಕವಾಡಿ ಇನ್ನೂರೆನ್ನ ಕೇಮ್ ಮಾಡಿಕೊಳ್ಳುವ ಉದ್ದೇಶದಿಂದ ದಿನಾಂಕ : 11/07/2022 ರಂದು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ತಮ್ಮ 4 ಲಕ್ಷ ರೂ ಕಿಮ್ಮತ್ತಿನ ಎರಡು ಟ್ರೇಲರಗಳನ್ನು ದಿನಾಂಕ : 09-07-2022 ರಂದು ರಾತ್ರಿ 10 ಗಂಟೆಗೆ ಹಿರೇನಂದಿ ಗ್ರಾಮದಲ್ಲಿರುವ ತಮ್ಮ ಮನೆಯ ಹತ್ತಿರ ನಿಲ್ಲಿಸಿದ್ದವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ನೀಡಿದ್ದರು.
“ಅವನು ಮತ್ತು ಅವನ ತಂದೆ ಕೂಡಿ ಟ್ರೇಲರ್‌ಗಳನ್ನು ಒಂದು ಕಡೆಗೆ ಮುಚ್ಚಿ ಇಟ್ಟು ಟ್ರೇಲರಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಪೊಲೀಸರಿಗೆ ಪಿರ್ಯಾದಿ ಕೊಡೋಣ ಟ್ರೇಲರ್‌ಗಳನ್ನು ಯಾರಿಗಾದರೂ ಮಾರಾಟ ಮಾಡೋಣ ಮತ್ತು ವಿಮಾ ಕಂಪನಿಯಿಂದ ಹಣ ಪಡೆದುಕೊಳ್ಳೋಣ ಅಂತಾ ಮಾತಾಡಿಕೊಂಡು” ಟೇಲರಗಳನ್ನು ತಾವಲಗೇರಿ ಗ್ರಾಮ ಹದ್ದಿಯಲ್ಲಿ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ 4 ಲಕ್ಷ ರೂ ಕಿಮ್ಮತ್ತಿನ ಟ್ರೇಲರ್ ಗಳನ್ನು ಮುಚ್ಚಿಟ್ಟಿದ್ದರು. ತನಿಖೆ ನಂತರ ಟ್ರೇಲರ್ ಮತ್ತು ಟ್ರ್ಯಾಕ್ಟರ್ ಇಂಜೀನ್ ಪಡೆದುಕೊಂಡು ಆರೋಪಿತನಿಗೆ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಸದರಿಯವನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಪ್ರಕರಣದ ಪತ್ತೆ ಕಾರ್ಯವನ್ನು ಡಿವಾಎಸ್ಪಿ ಮನೋಜ ಕುಮಾರ ನಾಯ್ಕ , ಸಿಪಿಐ ಗೋಪಾಲ ಆರ್ ರಾಠೋಡ , ಇವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪಿಎಸ್ಐ ಎನ್ ಆರ್ ಖಿಲಾರೆ ಹಾಗೂ ಸಿಬ್ಬಂದಿಗಳಾದ ಟಿ ಎಸ್ ದಳವಾಯಿ ಎ.ಎಸ್.ಐ ಹಾಗೂ ಸಿಪಿಸಿ ಎಸ್ ಬಿ ಪಾಟೀಲ , ಡಿ ಜಿ ಕೊಣ್ಣೂರ , ಎಲ್ ಬಿ ಅಂತರಗಟ್ಟಿ ಇತರರು ತನಿಖಾ ಸಹಾಯಕರಾಗಿ ಕರ್ತವ್ಯ ನಾಯ್ಕವಾಡಿ ಹಾಗೂ ನಿರ್ವಹಿಸಿರುತ್ತಾರೆ.