ಗೋಕಾಕ : ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಮನೆಗಳ್ಳತನ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನಗರದ ರೋಟರಿ ಬ್ಲಡ್ ಬ್ಯಾಂಕ್ ಹತ್ತಿರ ಎರಡು ಮನೆ ಹಾಗೂ ನಗರದ ಆಶ್ರಯ ಬಡಾವಣೆಯ ಬಳಿ ಒಂದು ಮನೆ ಕಳ್ಳತನವಾಗಿದೆ.
ಪದೇ ಪದೇ ಕಳ್ಳತನ ಪ್ರಕರಣಗಳು ಗೋಕಾಕ ಜನರನ್ನು ಕಂಗೆಡಿಸಿದ್ದು ಜನ ನೆಮ್ಮದಿಯಿಂದ ರಾತ್ರಿ ನಿದ್ದೆ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ರೀತಿಯಲ್ಲಿ ಹಿಂದೆ ಸಾಕಷ್ಟು ಪ್ರಕರಣಗಳಾಗಿವೆ,ಮುಂದೆ ಪೋಲಿಸ್ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
CKNEWSKANNADA / BRASTACHARDARSHAN CK NEWS KANNADA