ಗೋಕಾಕ : ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ ಎಂದರೇ ವೈದ್ಯನಾದವರು ದೇವರಂತೆ ಒಂದು ಜೀವವನ್ನು ಬದುಕಿಸಬಲ್ಲ ಸಾಮರ್ಥ್ಯ ಹೊಂದಿರುವ ವ್ಯಕ್ತಿ ಎಂದು. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕಣ್ಣೆದುರಿಗಿರುವ ದೇವರು ಎಂದರೇ ಈಗ ವೈದ್ಯರೇ ಆಗಿದ್ದಾರೆ. ಕೊರೋನಾ ವಿರುದ್ಧ ಹೋರಾಟದಲ್ಲಿ ಜನರ ಜೀವ ಉಳಿಸಲು ವೈದ್ಯರು ಸೇರಿದಂತೆ ಮುಂಚೂಣಿ ಕಾರ್ಯಕರ್ತರು ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ.
ಮನೆ ಮಕ್ಕಳನ್ನು, ತಂದೆ ತಾಯಿಯನ್ನು ಮರೆತು ಜನಸೇವೆಯಲ್ಲಿ ತೊಡಗಿರುವ ಅವರ ಕಾರ್ಯ ಶ್ಲಾಘನಾರ್ಹವಾಗಿದೆ. ಇದಕ್ಕೆ ಮತ್ತೊಂದು ನಿದರ್ಶನ ಎಂಬಂದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ, ಡಾ॥ ಸಂದೀಪ ದಂಡಿನ ತಂದೆ ಮರಣ ಹೊಂದಿದ ನಂತರ ವೈದ್ಯರು ಮರು ಕ್ಷಣದಲ್ಲಿ ಸೋಂಕಿತರ ಚಿಕಿತ್ಸೆಗೆ ಮರಳಿದ್ದಾರೆ.
ಬೆಳಗಾವಿಯಲ್ಲಿ ಹಾಗೂ ಗೋಕಾಕದಲ್ಲಿ ಅನೇಕ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಡಾ॥ ಸಂದೀಪ ದಂಡಿನ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸೋಂಕಿತರ ರಕ್ಷಣೆಗೆ ಪಣತೊಟ್ಟಿರುವ ಡಾ॥ಸಂದೀಪ ದಂಡಿನ ಕಳೆದ ಹಲವು ದಿನಗಳಿಂದ ಸೋಂಕಿತರ ಚೇತರಿಕೆಗೆ ಸಹಾಯ ಮಾಡುತ್ತಿದ್ದಾರೆ.
ಅವರ ತಂದೆಯೂ ಸಹ ಡಾ ॥ ಲಕ್ಷ್ಮಣ ದಂಡಿನ ವೈದ್ಯಾಧಿಕಾರಿಗಳಾಗಿ ತಮ್ಮ ಸೇವೆ ಸಲ್ಲಿಸಿದ್ದರು, ಸದಾ ಕರ್ತವ್ಯದಲ್ಲಿ ಮಗ್ನರಾಗುತ್ತಿರುವ ಡಾ॥ ಸಂದೀಪ ಅವರ ತಂದೆಗೆ ಕಳೆದವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೇ ದುರ್ದೈವ ಆ ದೇವರು ಜೀವ ಉಳಿಸುವ ವೈದ್ಯರು ಮರಣ ಹೊಂದಿದರು.
ಆದರೂ ಸಹ ಅವರು ಜವಾಬ್ದಾರಿ ವಹಿಸಿ ಮತ್ತೆ ಸೋಂಕಿತರ ಚಿಕಿತ್ಸೆಗೆ ಹೊರಟು ಬಂದಿದ್ದಾರೆ. ಇದಕ್ಕೆ ಕಾರಣ ಸೋಂಕಿತರು ಕೊರೋನಾ ವಿರುದ್ದ ಹೋರಾಡುತ್ತಿರುವುದರಿಂದ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಅವರಿಗೆ ತಮ್ಮ ಅವಶ್ಯಕತೆ ಹೆಚ್ಚಿದೆ ಎಂದು ತಂದೆ ಮರಣ ಹೊಂದಿದರು ಸಹ ರೋಗಿಗಳ ಆರೈಕೆಗೆ ಮುಂದಾಗಿದ್ದಾರೆ.
ಇವರ ಈ ಕಾರ್ಯಕ್ಕೆ ಜಿಲ್ಲೆಯಲ್ಲಿ ಹಾಗೂ ಗೋಕಾಕ ತಾಲೂಕಿನ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸೋಂಕಿತರ ಪಾಲಿಗೆ ದೇವರೇ ಆಗಿದ್ದಾರೆ.
ಒಟ್ಟಿನಲ್ಲಿ ತಾನಾಯಿತು, ತನ್ನ ಕುಟುಂಬವಾಯಿತು ಎನ್ನುವ ಮನೋಭಾವನೆ ಹೊಂದಿರುವುವರ ನಡುವೆ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ತಂದೆ ಮರಣ ಹೊಂದಿದರು , ಸಹ ಜನರ ರಕ್ಷಣೆಗೆ ನಿಂತಿರುವ ವೈದ್ಯ ಡಾ॥ ಸಂದೀಪ ದಂಡಿನ ಕಾರ್ಯ ನಿಜಕ್ಕೂ ಮಾದರಿ ಎಂದರೇ ತಪ್ಪಾಗುವುದಿಲ್ಲ