ಗೋಕಾಕ : 14/04/2025 ರಂದು ಗೋಕಾಕ ತಾಲೂಕಿನ ಗೋಕಾಕ ಶುಗರ್ಸ್ ಲಿಮಿಟೆಡ್ ಕೊಳವಿ ಪ್ಯಾಕ್ಟರಿಯ ಸ್ಟೋರ್ ಗೋಡಾವನದ ಹಿಂದಿನ ಶೆಟರ್ ಬಾಗಿಲನ್ನು ನೆಗ್ಗಿಸಿ ಮುರಿದು ಒಳಗೆ ಹೋಗಿ ಸಾಮಾನುಗಳನ್ನು ಕಳ್ಳತನ ಮಾಡಿದ ಕಳ್ಳರನ್ನು ಗೋಕಾಕ ಗ್ರಾಮೀಣ ಪೋಲಿಸರು ಬಂಧಿಸಿದ್ದಾರೆ.
ಕೊಳವಿ ಗ್ರಾಮ ಹದ್ದಿಯಲ್ಲಿಯ ಗೋಕಾಕ ಶುಗರ್ಸ್ ಲಿಮಿಟೆಡ್ ಕೊಳವಿ ಪ್ಯಾಕ್ಟರಿಯ ಗೋಡಾವನದಲ್ಲಿದ ಒಟ್ಟು 12,54,170 ರೂಪಾಯಿ ಕಿಮ್ಮತ್ತಿನ ಸಾಮಾನುಗಳು ಕಳ್ಳತನ ಮಾಡಿದ್ದು ಈ ಕುರಿತು ಗೋಕಾಕ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದರ ಪ್ರಕರಣದಲ್ಲಿ ಪತ್ತೆ ಕುರಿತು ಬೆಳಗಾವಿ ಎಸ್ಪಿ ಡಾ|| ಭೀಮಾಶಂಕರ ಎಸ್ ಗುಳೇದ, ಅವರು ಗೋಕಾಕ ಸಿಪಿಐ ಸುರೇಶಬಾಬು ಆರ್ ಬಿ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ತನಿಖಾ ತಂಡವು ಹೆಚ್ಚುವರಿ ಎಸ್ಪಿ ಶೃತಿ ಎನ್ ಎಸ್, ರಾಮಗೊಂಡ ಬಿ ಬಸರಗಿ, ಗೋಕಾಕ ಡಿವಾಎಸ್ಪಿ ಡಿ ಎಚ್ ಮುಲ್ಲಾ ಅವರ ಮಾರ್ಗದರ್ಶನದಲ್ಲಿ ಕೊಳವಿ ಗ್ರಾಮದಲ್ಲಿಯ ಗೋಕಾಕ ಶುಗರ ಲಿ. ಪ್ಯಾಕ್ಟರಿ ಕಳ್ಳತನ ಪ್ರಕರಣದ ತನಿಖೆ ಕೈಕೊಂಡು ದಿನಾಂಕ: 25/04/2025 ರಂದು 03 ಜನರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸದರಿ ಆರೋಪಿತರು ಮತ್ತು ಇದರಲ್ಲಿ ಭಾಗಿಯಾಗಿ ಪರಾರಿ ಇರುವ ಆರೋಪಿತರು ಸೇರಿಕೊಂಡು ಶುಗರ್ ಪ್ಯಾಕ್ಟರಿಯ ಸ್ಟೋರ್ ಗೋಡಾವನ್‌ದಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ ಯ.
3 ಜನ ಆರೋಪಿತರಾದ 1) ತುಪೈಲ್ ಹಸನಮಹ್ಮದ ಸಲ್ದಾನಿ, ವಯಸ್ಸು: 39 ವರ್ಷ, ಸಾ|| ಪ್ರೇಮನಗರ, ಪೋಸ್ಟ ಲಕ್ಷ್ಮೀನಗರ, ತಾ॥ ತುಳಸಿಹುರ, ಜಿ।। ಬಲರಾಮಪೂರ, ರಾಜ್ಯ:ಉತ್ತರಪ್ರದೇಶ, 2) ಜಾಫರಸಾಧಿಕ ಮಹ್ಮದಶಬೀರ ಖಾನ್, ವಯಸ್ಸು: 28 ವರ್ಷ, ಸಾ॥ ಭೋವಿಗಲ್ಲಿ ಬೆಳಗಾವಿ ಹಾಲಿ: ಉಜ್ವಲನಗರ ಬೆಳಗಾವಿ. 3) ಅಕ್ತರಅಲಿ ಅನ್ವರಅಲಿ ಶಹಾ, ವಯಸ್ಸು-32 ವರ್ಷ, ಸಾಬಡಯಾ, ಪೋಸ್ಟ ಮುದಿಲಾ, ತಾ। ಇಟಮಾಠಾಣಾ, ಜಿ। ಸಿದ್ದಾರ್ಥನಗರ, ರಾಜ್ಯ: ಉತ್ತರಪ್ರದೇಶ
ಇವರಿಂದ ಈ ಕೆಳಕಂಡಂತೆ ಮುದ್ದೇಮಾಲುಗಳನ್ನು ವಶಪಡಿಸಿಕೊಂಡಿದ 1) ಕಳುವಾದ ಮಶೀನರಿ ಸಾಮಾನುಗಳು ಪೈಕಿ ವಶಪಡಿಸಿಕೊಂಡ ಸಾಮಾನುಗಳು ಅ.ಕಿ: 2,11,500=00
2) ಕಳುವಾದ ಸಾಮಾನುಗಳನ್ನು ಮಾರಾಟ ಮಾಡಿ ಆರೋಪಿತರು ಹಂಚಿಕೊಂಡ ಹಣದಲ್ಲಿಂದ 3 ಜನ ಆರೋಪಿತರಿಂದ ಒಟ್ಟು ನಗದು ಹಣ. 95,000=00
3) ಅಪರಾಧ ಕೃತ್ಯಕ್ಕೆ ಉಪಯೋಗಿಸಿದ ಸ್ವೀಷ್ಟ ಡಿಜೈರ್ ಕಾರ್ ಮತ್ತು ಟಾಟಾ ಎಸ್ ಗೂಡ್ಡ ಗಾಡಿ ಹಾಗೂ ಟೂಲಗಳು ಒಟ್ಟು ಅ.ಕಿ: 5,51600=00 ಈ ಪ್ರಕಾರವಾಗಿ ಸದರ ಪ್ರಕರಣದಲ್ಲಿ ಒಟ್ಟು 8,58,100=00 ರೂಪಾಯಿ ಕಿಮ್ಮತ್ತಿನ ವಸ್ತುಗಳನ್ನು ಮತ್ತು ನಗದು ಹಣವನ್ನು ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಇದರಲ್ಲಿ ಭಾಗಿಯಾಗಿ ಪರಾರಿ ಇರುವ ಇನ್ನೂಳಿದ ಆರೋಪಿತರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಸದರ ಪ್ರಕರಣದಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ , ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಾದ ಕಿರಣ ಎಸ್ ಮೋಹಿತೆ, ಪಿಎಸ್‌ಐ (ಕಾ&ಸು), ಶ್ರೀಮತಿ ಎಲ್ ಎಲ್ ಪತ್ತೆನ್ನವರ ಹೆಚ್ಚುವರಿ ಪಿಎಸ್‌ಐ, ಮತ್ತು ಸಿಬ್ಬಂದಿ ಜನರಾದ ಬಿ ವಿ ನೆರ್ಲಿ, ಜಗದೀಶ ಗುಡ್ಲಿ, ಮಾರುತಿ ವಾಯ್ ಪಡದಲ್ಲಿ, ಕುಮಾರ ಪವಾರ, ಡಿ ಬಿ ಅಂತರಗಟ್ಟಿ, ಡಿ ಜಿ ಕೊಣ್ಣೂರ, ಎಚ್ ಡಿ ಗೌಡಿ, ಎನ್ ಎಲ್ ಮಂಗಿ, ವಿ ಎಲ್ ನಾಯ್ಕವಾಡಿ, ಸಂತೋಷ ವಜ್ರಮಟ್ಟಿ, ಶಿವಾನಂದ ಕಲ್ಲೋಳಿ, ಎಸ್ ಬಿ ಮಾನೆಪ್ಪಗೋಳ, ವಿಠಲ ಖೋತ್ ಹಾಗೂ ಬೆಳಗಾವಿಯ ಟೆಕ್ನಿಕಲ್ ಸೆಲ್‌ನ ಶ್ರೀ ಸಚಿನ ಪಾಟೀಲ ಮತ್ತು ವಿನೋದ ತಕ್ಕನ್ನವರ ಇವರ ಕಾರ್ಯವನ್ನು ಮಾನ್ಯ ಎಸ್.ಪಿ ಅವರು ಶ್ಲಾಘಿಸಿರುತ್ತಾರೆ.