ಗೋಕಾಕ : ಗೋಕಾಕ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಕೆಲವು ತಿಂಗಳ ಹಿಂದೆ ಸಾಕಷ್ಟು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಇನ್ನೂವರೆಗೂ ಯಾವುದೇ ರೀತಿಯ ಕಳ್ಳರನ್ನು ಬಂಧಿಸುವದಾಗಲಿ, ಆಭರಣ ಹಾಗೂ ನಗದು ಪತ್ತೆಯಾಗಿಲ್ಲ.
ಹೌದು ನಗರದಲ್ಲಿ ಏಳು ತಿಂಗಳ ಹಿಂದೆ ಪ್ರಥಮ ದರ್ಜೆ ಗುತ್ತಿಗೆದಾರ ಮನೆಗೆ ಕನ್ನ ಹಾಕಿದ ಖದೀಮರು 30 ಲಕ್ಷ ಕ್ಕೂ ಹೆಚ್ಚು ರೂ , 130 ತೋಲಿ ಬಂಗಾರ , 10kg ಬೆಳ್ಳಿ ಆಭರಣ ದೋಚಿ ಪರಾರಿಯಾಗಿದ್ದರು. ಅದೇ ರೀತಿ ಈ ಹಿಂದೆ ಇದ್ದ ತಹಶೀಲ್ದಾರ್ ಮನೆಗೆ ಕನ್ನ ಹಾಕಿ 40 ತೋಲೆ ಬಂಗಾರ, ಹಾಗೂ ನಗದು ಎಗರಿಸಿದ್ದರು. ಅದೇ ರೀತಿ SBI ಎದುರುಗಡೆ ನಿಲ್ಲಿಸಿದ ಕಾರೊಂದರಲ್ಲಿ ಹಾಡು ಹಗಲೇ 8 ಲಕ್ಷಕ್ಕೂ ಅಧಿಕ ಹಣ ದೋಚಿ ಪರಾರಿಯಾಗಿದ್ದರು. ತಹಶೀಲ್ದಾರ್ ಕಚೇರಿಯಲ್ಲಿ ಕಂಪ್ಯೂಟರ್ ಕಳ್ಳತನವಾಗಿತ್ತು, ಅದೇ ರೀತಿ ಅನೇಕ ಮನೆ ಕಳ್ಳತನಗಳು, ಬೈಕ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದವು . ಒಂದೆರಡು ಕಡೆ ಪತ್ತೆ ಹಚ್ಚಿದು ಹೊರತು ಪಡಿಸಿ, ದೊಡ್ಡ ದೊಡ್ಡ ಕಳ್ಳತನಗಳು ಈ ವರೆಗೆ ಯಾವುದು ಪತ್ತೆಯಾಗಿಲ್ಲ.
ಆದರೆ ಒಂದಿಷ್ಟು ಜನರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಲ್ಲ ಹಾಗೂ ಬೈಕ್ ನಂತಹ ಹಾಗೂ ಸಣ್ಣ ಪುಟ್ಟ ಕಳ್ಳತನ ಪ್ರಕರಣಗಳನ್ನು ಎಫ್ಐಆರ್ ಮಾಡಿಕೊಳ್ಳಲು ಮೀನಾಮೇಷ ಹಾಕುತ್ತಾರೆ ಎಂಬ ಮಾತುಗಳಿವೆ.
ಹೀಗೆ ಸಾಕಷ್ಟು ತಿಂಗಳು ಗೋಕಾಕದಲ್ಲಿ ಕಳ್ಳತನ ಮಾಡಿ ಜನರ ನಿದ್ದೆಗೆಡಿಸಿದ ಖದೀಮರನ್ನು ಹೆಡೆಮುರಿ ಕಟ್ಟಿತಾ ಪೋಲಿಸ್ ಇಲಾಖೆ? ಇನ್ನೂ ಎಷ್ಟು ತಿಂಗಳು, ವರ್ಷ ಬೇಕು ಎಂದು ಪ್ರಶ್ನೆಯಾಗಿದೆ.