Breaking News

ನಿನ್ನೆ ಮರಕ್ಕೆ ಬಸ್ ಡಿಕ್ಕಿ – ಗೋಕಾಕ ಡಿಪೋ ಮ್ಯಾನೆಜರ ನೇರ ಹೊಣೆ?


ಗೋಕಾಕ: ಗೋಕಾಕದಿಂದ ಬೆಳಗಾವಿಗೆ ಹೊರಟ್ಟಿದ್ದ ಸಾರಿಗೆ ಬಸ್ ಗೋಡಚಿನಮಲ್ಕಿ ಹಾಗೂ ಮೇಲ್ಮಟ್ಟಿ ಗ್ರಾಮದ ರಸ್ತೆ ಮಧ್ಯೆ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ವಯೋವೃದ್ದರಿಗೆ ಗಂಭೀರ ಗಾಯಗಳಾಗಿವೆ.


ಈ ಘಟನೆಗೆ ಗೋಕಾಕ ಘಟಕ ವ್ಯವಸ್ಥಾಪಕರೇ ನೇರ ಹೊಣೆಗಾರರಾಗಿದ್ದಾರೆ. ಬಸ್ಸಿನ ಚಾಲಕ ವಾಹನದ ಆಯಾ ದಿನದ ನಿವೇದನಾ ಪತ್ರದಲ್ಲಿ ಬಸ್ಸಿನ ಮುಂದಿನ ಬಲಗಡೆ ಮತ್ತು ಹಿಂದಗಡೆ ಪಾಟಾ ವಿಕ್ ಮತ್ತು ಸ್ಟೇರಿಂಗ್ ಬಾಕ್ಸ್ ಆಯಿಲ್ ಲೀಕಿಜ್, ಸ್ಟೇರಿಂಗ್ ಜಾಂಬ, ಬ್ರೇಕ್ ಹತ್ತುವುದಿಲ್ಲ ಮತ್ತು ಬಾಡಿಗೆ ಟೈರ್ ತಿಕ್ಕುತ್ತದೆ ಎಂದು ಬಸ್ಸಿನ ಚಾಲಕ ವಾಹನದ ದೋಷವನ್ನು ವರದಿ ಪುಸ್ತಕದಲ್ಲಿ ಬರೆದಿದ್ದು, ಘಟಕ ವ್ಯವಸ್ಥಾಪಕರು ಒತ್ತಾಯ ಪೂರ್ವಕವಾಗಿ ಅದೇ ಬಸ್ಸನ್ನು ಚಾಲಕನಿಗೆ ನೀಡಿದ್ದಾರೆ. ಈ ಅವಘಡಕ್ಕೆ ಘಟಕ ವ್ಯವಸ್ಥಾಪಕರೇ ನೇರಹೊಣೆಗಾರರಾಗಿದ್ದು ಚಾಲಕನ ಯಾವುದೇ ತಪ್ಪು ಇರುವುದಿಲ್ಲ ಎಂದು ತಿಳಿದು ಬಂದಿದೆ. ಗಾಯಾಳುಗಳ ಖರ್ಚು ವೆಚ್ಚವನ್ನು ಘಟಕ ವ್ಯವಸ್ಥಾಪಕರೇ ಭರಿಸಬೇಕು.

ಇದರಲ್ಲಿ ಸಾರಿಗೆ ಸಂಸ್ಥೆಯ ಯಾವುದೇ ತಪ್ಪುಗಳು ಇರುವುದಿಲ್ಲ ಎಂದು ಸಾರಿಗೆ ಸಂಸ್ಥೆಯ ಮೂಲಗಳು ತಿಳಿಸಿವೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ