ಗೋಕಾಕ: ಅನಾರೋಗ್ಯ ಪೀಡಿತರು ತುರ್ತು ಸಂದರ್ಭದಲ್ಲಿ ಇ-ಸಂಜೀವಿನಿ ಆಪ್ಯ್ ಮೂಲಕ ಆನ್‍ಲಾಯಿನ್ ಲಾಗಿನ್ ಆಗಿ ತಮ್ಮ ರೋಗಗಳಿಗೆ ತುರ್ತಾಗಿ ಚಿಕಿತ್ಸೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ರವೀಂದ್ರ ಅಂಟಿನ್ ತಿಳಿಸಿದರು.
ಬುಧವಾರದಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೆದ ಪತ್ರಿಕಾಗೋಷ್ಠಿಯನುದ್ದೇಶಿಸಿ ಮಾತನಾಡಿದ ಅವರು, ಇ-ಸಂಜೀವಿನಿ ಮೂಲಕ ಲಾಗಿನ ಆದಾಗ ತಕ್ಷಣವೇ ರೋಗಕ್ಕೆ ಸಂಬಂಧಿಸಿದ ವೈದ್ಯರಿಗೆ ಕರೆ ಹೋಗಲಿದ್ದು ವೈದ್ಯರು ತಮ್ಮ ಕರೆಗೆ ಉತ್ತರಿಸಿ ವೈದ್ಯಕೀಯ ಸಲಹೆಗಳನ್ನು ನೀಡಲಿದ್ದಾರೆ. ಈ ಪ್ರಕ್ರೀಯೆಯು ಮುಂಜಾನೆ 8 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಚಾಲ್ತಿಯಲ್ಲಿರಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿ ನಡೆಯುವ ಸಂದರ್ಭದಲ್ಲಿ ಹೃದಯ ತಜ್ಞ ಡಾ: ಮಹೇಶ ಕೋಣಿ ಹಾಗೂ ಡಾ: M ಕೊಪ್ಪದ ಅವರು ಇ-ಸಂಜೀವಿನಿ ಆಪ್ಯ್ ಮೂಲಕ ತಮನ್ನು ಸಂಪರ್ಕಿಸಿದ ರೋಗಿಗೆ ತುರ್ತು ಚಿಕಿತ್ಸಾ ಮಾಹಿತಿಯನ್ನು ನೀಡುವ ಮೂಲಕ ಇದರ ಪ್ರಯೋಜನೆಯ ಕುರಿತು ಪತ್ರಕರ್ತರಿಗೆ ವಿವರಿಸಿದರು.