ಗೋಕಾಕ; ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗೋಕಾಕ ಪೋಲಿಸ್ ಇಲಾಖೆಯಿಂದ ಒಂದೆ ದೇಶ ಒಂದೆ ರಸ್ತೆ ಕರೆ ಸಂಖ್ಯೆ 112 ವಾಹನಗಳಿಗೆ ಬೆಳಗಾವಿ ಎಸ್,ಪಿ,ಲಕ್ಷ್ಮಣ ನಿಂಬರಗಿ ಗೋಕಾಕ ತಾಲೂಕಿನ ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು.
ಅದಲ್ಲದೆ ಗೋಕಾಕ ವೃತ್ತಕ್ಕೆ ಬಂದಂತಹ 6 ವಾಹನಗಳಿಗೆ ಎಸ್,ಪಿ, ಲಕ್ಷ್ಮಣ ನಿಂಬರಗಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಗೋಕಾಕ ಶಹರ ಪೋಲಿಸ್ ಠಾಣೆಯ ವ್ಯಾಪ್ತಿಯ ಬಸವೇಶ್ವರ ವೃತ್ತದಿಂದ ಸಂಗೋಳ್ಳಿ ರಾಯಣ್ಣಾ ಸರ್ಕಲ್ ಮುಖಾಂತರ ಕೋಳಿ ಕೂಟ ಲಕ್ಷ್ಮಿ ದೇವಸ್ಥಾನದ ಮಾರ್ಗವಾಗಿ ಜಾಥಾ ಹಮ್ಮಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತೊಂದರೆಯಲ್ಲಿರುವ ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿಯಲ್ಲಿರುವಾಗ ತಕ್ಷಣ ಸ್ಪಂದಿಸುವ ಸಲುವಾಗಿ ರಾಜ್ಯ ಸರ್ಕಾರ ಒಂದೆ ದೇಶ ಒಂದೆ ಕರೆ ಸಂಖ್ಯೆ 112 ಈ ಸೇವೆಯನ್ನು ಜಾರಿಗೆ ತಂದಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳಿಯ ಡಿ,ವೈ,ಎಸ್ಪಿ, ಜಾವೀದ ಇನಾಂದಾರ, ಸಿಪಿಆಯ್, ಗೋಪಾಲ ರಾಥೋಡ, ಪಿಎಸ್ಆಯ್ ಗಳಾದ, ಶ್ರೀಶೈಲ ಬ್ಯಾಕೂಡ, ವೆಂಕಟೇಶ ಮುರನಾಳ, ಬಿ,ಕೆ, ವಾಲಿಕಾರ,ಎಚ್,ಎಸ್,ಬಾಲದಂಡಿ, ನಾಗರಾಜ ಖಿಲಾರಿ, ಹಾಗೂ ಪೋಲಿಸ ಸಿಬ್ಬಂದಿಗಳು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA