ಗೋಕಾಕ : ಕರ್ನಾಟಕ ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ದಸ್ತು ಬರಹಗಾರರ ಒಕ್ಕೂಟದ ಕರೆ ಮೇರೆಗೆ ನಗರದ ಉಪನೋಂದಣಿ ಕಚೇರಿ ಆವರಣದಲ್ಲಿ ಶುಕ್ರವಾರದಂದು ಲೇಖನಿ ಸ್ಥಗಿತಗೊಳಿಸಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಯಿತು.
ಅಧ್ಯಕ್ಷರಾದ ವಿಶ್ವಾಸ ಸುಣದೋಳಿ ಅವರು ಮಾತನಾಡಿ, ‘ಹೊರ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲೂ ದಸ್ತು ಬರಹಗಾರರಿಗೆ ಪ್ರತ್ಯೇಕ ಲಾಗೀನ್ ನೀಡಬೇಕು. ನೋಂದಣಿ ಆಗುವ ಎಲ್ಲ ದಸ್ತಾವೇಜುಗಳಿಗೆ ಪತ್ರ ಬರಹಗಾರರು ಅಥವಾ ವಕೀಲರು ಬಿಕ್ಕಲಂ ಕಡ್ಡಾಯಗೊಳಿಸಬೇಕು. ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟವುದು ಮತ್ತು ಕರ್ನಾಟಕದ ಎಲ್ಲ ದಸ್ತು ಬರಹಗಾರರಿಗೆ ಏಕ ಮಾದರಿ ಗುರುತಿನ ಚೀಟಿಯನ್ನು ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರ ಮುಂದುವರೆಯಲಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೋಕಾಕ ತಾಲೂಕು ದಸ್ತು ಬರಹಗಾರರ ಸಂಘದ ಗೌರವಾಧ್ಯಕ್ಷರಾದ ಮಹೇಶ್ ಕುಲಕರ್ಣಿ, ಮಹ್ಮದ್ ಅಲಿ ನೆಗಿನಾಳ, ಲಗಮಪ್ಪಾ ಪಾಟೀಲ್, ಮೆಹಬೂಬ್ ಸಾಬ್ ನೇಗಿನಾಳ, ಶಿವಾನಂದ ಶಿರಸಂಗಿ, ರಾಜು ಅಕ್ಕಿ, ವಿಶ್ವಾಸ ಶಿರಸಂಗಿ, ಭಾಗ್ಯ ಗುಡ್ಡದಮನಿ, ಸೋಮಶೇಖರ್ ಕುಮಾರ್ ಮಠ, ಯಾಸಿನ ಗೌಂಡಿ, ದುಂಡೇಶ ಶಿರಸಂಗಿ, ಶೌಕತ್, ಹಾಗೂ ಅನೇಕ ದಸ್ತು ಬರಹಗಾರರು ಉಪಸ್ಥಿತರಿದ್ದರು
CKNEWSKANNADA / BRASTACHARDARSHAN CK NEWS KANNADA