ಗೋಕಾಕ : ಎರಡು ದಿನಗಳ ಹಿಂದಷ್ಟೇ ಪ್ರಯಾಗ್ ರಾಜ ಕುಂಭಮೇಳಕ್ಕೆ ತೆರಳಿದ ಗೋಕಾಕ ನಗರದ 6 ಜನ ರಸ್ತೆ ಅಪಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಂದು ಮುಂಜಾನೆ 5 ಘಂಟೆ ಸುಮಾರಿಗೆ ಮಧ್ಯಪ್ರದೇಶದ ಜಬಲ್ಪುರ ನಲ್ಲಿ ಈ ಘಟನೆ ನಡೆದಿದೆ, KA49M5054 ಸಂಖ್ಯೆಯ ತೂಫಾನ್ ವಾಹನ ಅಪಘಾತ.
ಪ್ರಯಾಗರಾಜ್ ದಿಂದ ಜಬಲ್ಪುರಗೆ ತೆರಳುವಾಗ ನಡೆದ ಅಪಘಾತ ಚಾಲಕನ ನಿಯಂತ್ರಣ ತಪ್ಪಿ ಡಿವೈಡರಗೆ ಡಿಕ್ಕಿಯಾಗಿ ದುರ್ಘಟನೆ. ಆರು ಜನ ಸ್ಥಳದಲ್ಲಿಯೇ ಸಾವು ಇಬ್ಬರ ಸ್ಥಿತಿ ಗಂಭೀರ. ಗಾಯಗೊಂಡ ಇಬ್ಬರೂ ಜಬಲ್ಪುರ ಜಿಲ್ಲಾಸ್ಪತ್ರೆಗೆ ದಾಖಲು.. ಅಲ್ಲಿನ ಜಿಲ್ಲಾ ಪೊಲೀಸರೊಂದಿಗೆ ಬೆಳಗಾವಿ ಜಿಲ್ಲಾ ಪೊಲೀಸರು ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೃತರು
ಬಾಲಚಂದ್ರ ಗೌಡರ(50)
ಸುನೀಲ್ ಶೇಡಶ್ಯಾಳೆ(45)
ಬಸವರಾಜ್ ಕುರ್ತಿ (63)
ಬಸವರಾಜ್ ದೊಡಮಾಳ್(49)
ಈರಣ್ಣ ಶೇಬಿನಕಟ್ಟಿ(27)
ವಿರುಪಾಕ್ಷ ಗುಮತಿ (61)
ಗಾಯಗೊಂಡವರು
ಮುಸ್ತಾಕ ಶಿಂಧಿಕುರಬೇಟ
ಸದಾಶಿವ ಉಪದಲಿ